ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳ ಬಸ್ ಪ್ರಯಾಣ ದರ ಭಾರೀ ಹೆಚ್ಚಳ: ಬಸ್ ಪಾಸ್‌ಗಳ ಬೆಲೆಯೂ ದುಬಾರಿ

ಕರ್ನಾಟಕದಲ್ಲಿ ಬೆಲೆ ಏರಿಕೆಯ ಪರ್ವ ಮುಂದುವರಿದೆ. ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ನಿಗಮಗಳ ಬಸ್ ಪ್ರಯಾಣ ದರವು ನವೆಂಬರ್ 4ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಹೆಚ್ಚಳವಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಬಸ್ ಪ್ರಯಾಣ ದರ ಹೆಚ್ಚಳವಾಗುವುದರೊಂದಿಗೆ ಮಾಸಿಕ ಹಾಗೂ ದಿನ ನಿತ್ಯದ ಪಾಸ್ ಪ್ರಯಾಣ ದರವೂ ಸಹ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

KSRTC Bus Fare Hike Four Transport Corporations Raise Ticket Prices Bus Passes Also Become Costlier

ನವೆಂಬರ್ 4-5ರ ಮಧ್ಯರಾತ್ರಿಯಿಂದ ಕರ್ನಾಟಕದಲ್ಲಿ ಬಸ್ ಪ್ರಯಾಣ ದುಬಾರಿಯಾಗಲಿದೆ ಎಂದು ಸಚಿವ ಬೈರತಿ ಸುರೇಶ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ಮಾಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 9,000 ಸಾವಿರ ಕೋಟಿ ರೂ. ಸಾಲವಿದೆ. ಈ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬಸ್ ಪ್ರಯಾಣ ದರ ಹೆಚ್ಚಳದ ವಿವರ

ನವೆಂಬರ್ 4ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿ ಜಾರಿ ಮಾಡಲಾಗುತ್ತಿದೆ.

ಸಾಮಾನ್ಯ ಸಾರಿಗೆಗಳಲ್ಲಿ ಅತಿ ಹೆಚ್ಚಿನ ಪ್ರಯಾಣಿಕರು ಮೊದಲ ಐದು ಹಂತಗಳವರೆಗೆ ಪಯಾಣ ಮಾಡುತ್ತಾರೆ. ಈ ಸೇವೆಗಳಲ್ಲಿ ಈ ಹಂತಗಳ ಪುಯಾಣದಲ್ಲಿ ಗರಿಷ್ಟ 9 ರೂಪಾಯಿ ಪ್ರಯಾಣದರ ಹೆಚ್ಚಾಗುತ್ತದೆ. ವೇಗದೂತ ಸಾರಿಗೆಗಳಲ್ಲಿ ಅತಿ ಹೆಚ್ಚಿನ ಪ್ರಯಾಣಿಕರು ಹತ್ತು ಹಂತಗಳವರೆಗೆ ಪುಯಾಣ ಮಾಡುತ್ತಿದ್ದು, ಈ ಹಂತಗಳ ಪಯಾಣದಲ್ಲಿ ಗರಿಷ್ಟ 18 ರೂ ಪ್ರಯಾಣದರ ಹೆಚ್ಚಾಗುತ್ತದೆ. ಅದರಂತೆ ಕೆಲವು ಆಯ್ದ ಸ್ಥಳಗಳಿಗೆ ಹಿಂದಿನ ಹಾಗೂ ದರ ಪರಿಷ್ಕರಣೆಯ ನಂತರದ ದರಗಳು( ಟೋಲ್ ಶುಲ್ಕ, ಬ್ರಿಡ್ಜ್ ಶುಲ್ಕ, ಮುಂಗಡ ಕಾಯ್ದಿರಿಸುವಿಕೆ ಶುಲ್ಕ, ಇತ್ಯಾದಿ ಹೊರತುಪಡಿಸಿ) ಬದಲಾವಣೆ ಆಗಿವೆ.

ಬಸ್ ಪ್ರಯಾಣ ದರ ಪರಿಷ್ಕರಣೆಯ ವಿವರ ಈ ರೀತಿ ಇದೆ (ರೂಪಾಯಿಗಳಲ್ಲಿ)

ಪ್ರಮುಖ ಮಾರ್ಗಗಳಲ್ಲಿ ಬಿಎಂಟಿಸಿ ಸಾಮಾನ್ಯ ದರಗಳು

• ಮೆಜೆಸ್ಟಿಕ್-ಶಿವಾಜಿನಗರ: ₹12 ರಿಂದ ₹18

• ಮೆಜೆಸ್ಟಿಕ್-ಬನಶಂಕರಿ: ₹23 ರಿಂದ ₹35

• ಮೆಜೆಸ್ಟಿಕ್-ಅತ್ತಿಬೆಲೆ: ₹30 ರಿಂದ ₹42

• ಮೆಜೆಸ್ಟಿಕ್-ಕಾಡುಗೋಡಿ: ₹30 ರಿಂದ ₹40

ಬಿಎಂಟಿಸಿ ವಜ್ರ ಎಸಿ ದರಗಳು

• ಸಿಲ್ಕ್ ಬೋರ್ಡ್-ಹೆಬ್ಬಾಳ: ₹55 ರಿಂದ ₹65

• ಕೃಷ್ಣರಾಜಪುರ - ಸಿಲ್ಕ್‌ ಬೋರ್ಡ್: ₹40 ರಿಂದ ₹55

ಟೋಲ್‌ಗಳು ಮತ್ತು ಇತರ ಶುಲ್ಕಗಳನ್ನು ಹೊರತುಪಡಿಸಿ ಬೆಂಗಳೂರು ಹೊರಹೋಗುವ ಎಕ್ಸ್‌ಪ್ರೆಸ್ ದರಗಳು

• ಮೈಸೂರು: ₹160 ರಿಂದ ₹197

• ತುಮಕೂರು: ₹81 ರಿಂದ ₹100

• ಹಾಸನ: ₹219 ರಿಂದ ₹270

ಸೂಚನೆ: ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ಸೇವೆಗಳನ್ನು ಒಳಗೊಂಡಿವೆ.

ತಲುಪುವ ಸ್ಥಳ ಸಾರಿಗೆ ಪ್ರಕಾರ ಪ್ರಸ್ತುತ ದರ (ರೂ.) ಪರಿಷ್ಕೃತ ದರ (ರೂ.)
ನೆಲಮಂಗಲ ಸಾಮಾನ್ಯ 35 44
ಹೊಸಕೋಟೆ ಸಾಮಾನ್ಯ 35 44
ದೊಡ್ಡಬಳ್ಳಾಪುರ ಸಾಮಾನ್ಯ 38 47
ಆನೇಕಲ್ ಸಾಮಾನ್ಯ 38 47
ಮಾಗಡಿ ಸಾಮಾನ್ಯ 46 57
ಮಾಲೂರು ಸಾಮಾನ್ಯ 46 57
ಕೋಲಾರ ವೇಗದೂತ 81 100
ತುಮಕೂರು ವೇಗದೂತ 81 100
ಮಂಡ್ಯ ವೇಗದೂತ 110 136
ಮೈಸೂರು ವೇಗದೂತ 160 197
ಹಾಸನ ವೇಗದೂತ 219 270
ಚಿಕ್ಕಮಗಳೂರು ವೇಗದೂತ 295 363

ಬೆಂಗಳೂರು ಬಸ್ ಪ್ರಯಾಣ ದರ ಏರಿಕೆ: ಪರಿಷ್ಕೃತ ದರಗಳ ವಿವರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ ಪ್ರಯಾಣ ದರ ಪರಿಷ್ಕರಣೆಯ ವಿವರಗಳು ಇಲ್ಲಿವೆ.

ಎಲ್ಲಿಂದ ಎಲ್ಲಿಗೆ ಪ್ರಸ್ತುತ ದರ (ರೂ.ಗಳಲ್ಲಿ) ಪರಿಷ್ಕೃತ ದರ (ರೂ.ಗಳಲ್ಲಿ)
ಕೆಂಪೇಗೌಡ ಬಸ್ ನಿಲ್ದಾಣ ಶಿವಾಜಿನಗರ 12 18
ಕೆಂಪೇಗೌಡ ಬಸ್ ನಿಲ್ದಾಣ ಯಶವಂತಪುರ 18 25
ಕೆಂಪೇಗೌಡ ಬಸ್ ನಿಲ್ದಾಣ ಬನಶಂಕರಿ 23 35
ಕೆಂಪೇಗೌಡ ಬಸ್ ನಿಲ್ದಾಣ ಅತ್ತಿಬೆಲೆ 30 42
ಕೆಂಪೇಗೌಡ ಬಸ್ ನಿಲ್ದಾಣ ವಿಜಯನಗರ 18 25
ಕೆಂಪೇಗೌಡ ಬಸ್ ನಿಲ್ದಾಣ ಕಾಡುಗೋಡಿ 30 40
ಕೆ.ಆರ್. ಮಾರ್ಕೆಟ್ ನೆಲಮಂಗಲ 30 40
ಕೆ.ಆರ್. ಮಾರ್ಕೆಟ್ ಹೊಸಕೋಟೆ 30 40

Vikasit Bharat 2047: 350 ಕಿ.ಮೀ ವೇಗದ ಬುಲೆಟ್ ಟ್ರೈನ್, 7,000 ಕಿ.ಮೀ ಹೈ-ಸ್ಪೀಡ್ ಕಾರಿಡಾರ್: ಸಚಿವ ಅಶ್ವಿನಿ ವೈಷ್ಣವ್‌

ಇತರೆ ಪ್ರಮುಖ ಮಾರ್ಗಗಳ ಬಸ್ ಪ್ರಯಾಣ ದರ

ಎಲ್ಲಿಂದ ಎಲ್ಲಿಗೆ ಪ್ರಸ್ತುತ ದರ (ರೂ.ಗಳಲ್ಲಿ) ಪರಿಷ್ಕೃತ ದರ (ರೂ.ಗಳಲ್ಲಿ)
ಸೆಂಟ್ರಲ್ ಸಿಲ್ಕ್ ಬೋರ್ಡ್ ಹೆಬ್ಬಾಳ 55 65
ಬನಶಂಕರಿ ಎಲೆಕ್ಟ್ರಾನಿಕ್ ಸಿಟಿ 50 60
ಕೆ.ಆರ್. ಪುರ ಸೆಂಟ್ರಲ್ ಸಿಲ್ಕ್ ಬೋರ್ಡ್ 40 55
ಸೆಂಟ್ರಲ್ ಸಿಲ್ಕ್ ಬೋರ್ಡ್ ಕಾಡುಗೋಡಿ 50 60
ಕೆಂಪೇಗೌಡ ಬಸ್ ನಿಲ್ದಾಣ ಅತ್ತಿಬೆಲೆ 60 70
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+