KSRTC; ಬಸ್ ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ಪರಿಹಾರ

ಬೆಂಗಳೂರು, ಡಿಸೆಂಬರ್ 27; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಲಾಗಿದೆ. ಈ ಆದೇಶ 1/1/2024ರಿಂದ ಜಾರಿಗೆ ಬರುತ್ತದೆ.

ಈ ಕುರಿತು ಕರಾರಸಾ ನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ಸುತ್ತೋಲೆ ಹೊರಡಿಸಿದೆ. ವಿ. ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ/ ಅಧ್ಯಕ್ಷರು ಕರಾರಸಾ ನಿಗಮ ಪ್ರಯಾಣಿಕರ ಅಪನಿ ಟ್ರಸ್ಟ್ ಸುತ್ತೋಲೆ ಹೊರಡಿಸಿದ್ದಾರೆ.

KSRTC Bus Accident Compensation Hiked For Passenger Who Died In Bus Accident

ಈ ಸುತ್ತೋಲೆ ಅಪಘಾತ ಪರಿಹಾರ ನಿಧಿಯ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. 29ನೇ ಅಪಘಾತ ಪರಿಹಾರ ನಿಧಿ ಸಭೆ ದಿನಾಂಕ 31/10/2023ಯ ನಿರ್ಣಯವನ್ನು ಉಲ್ಲೇಖ ಮಾಡಲಾಗಿದೆ.

ಸುತ್ತೋಲೆಯ ವಿವರಗಳು; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಅಪಘಾತಕ್ಕೀಡಾಗ, ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಂಬಿತರಿಗೆ, ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ 3,00,000 (ರೂ. ಮೂರು ಲಕ್ಷ) ಪರಿಹಾರ ನೀಡಲಾಗುತ್ತಿದೆ.

ಮುಂದುವರೆದು ಪ್ರಸ್ತುತ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದಿನಾಂಕ 1/3/2017 ಪಾವತಿಸಲಾಗುತ್ತಿದ್ದು, ತದನಂತರ ಪರಿಹಾರದ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ 31/10/2023ರಂದು ನಡೆದ 29ನೇ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ ಚರ್ಚಿಸಿ, ಪರಿಹಾರ ಮೊತ್ತವನ್ನು ರೂ. 3 ಲಕ್ಷದಿಂದ ರೂ. 10 ಲಕ್ಷಗಳಿಗೆ ಹೆಚ್ಚಿಸಲು ಸಭೆಯು ಅನುಮೋದಿಸಿರುತ್ತದೆ.

ಪರಿಷ್ಕೃತ ಪರಿಹಾರ ಮೊತ್ತ ರೂ. 10 ಲಕ್ಷದಲ್ಲಿ ತಕ್ಷಣದ ಪರಿಹಾರವಾಗಿ ರೂ. 25,000ವನ್ನು ಕರಾರಸಾ ನಿಗಮದ ಸುತ್ತೋಲೆ ದಿನಾಂಕ 08/12/1998ರ ಅನುಸಾರ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಾವತಿಸುವುದು.

ತದನಂತರ, ಅಪನಿ ಟ್ರಸ್ಟ್‌ನಿಂದ ರೂ. 25,000 ಸಂಬಂಧಪಟ್ಟ ವಿಭಾಗಗಳಿಗೆ ಮರುಪಾವತಿಸಿ, ಬಾಕಿ ಮೊತ್ತ ರೂ. 9,75,000ಗಳನ್ನು ಉಲ್ಲೇಖ ಸುತ್ತೋಲೆಯಾನುಸಾರ ದಿವಂಗತರ ವಾರಸುದಾರರಿಗೆ ಪಾವತಿಸುವುದು ಎಂದು ಸುತ್ತೋಲೆ ಹೇಳಿದೆ.

ಮೃತರ ಕುಟುಂಬದವರಿಗೆ ಪರಿಹಾರ ಧನವನ್ನು ರೂ.10 ಲಕ್ಷಕ್ಕೆ ಹೆಚ್ಚಿಸಿರುವುದರಿಂದ ಕಾಲ ಕ್ರಮೇಣ ಅಪಘಾತ ಪರಿಹಾರ ನಿಧಿಯ ಒಟ್ಟು ಖರ್ಚು ಒಟ್ಟು ಆದಾಯಕ್ಕಿಂತ ಅಧಿಕವಾಗುವ ಹಿನ್ನೆಲೆಯಲ್ಲಿ ವಂತಿಕೆ ಸಂಗ್ರಹಣೆಯನ್ನು ಹೆಚ್ಚಿಸಲು ಸಹ ಸಭೆಯು ಅನುಮೋದಿಸಿದೆ.

ಅದರಂತೆ ಪ್ರತಿ ಪ್ರಯಾಣಿಕರಿಂದ ಪಡೆಯಬೇಕಾದ ವಂತಿಕೆ ಸಂಗ್ರಹಣೆ ಮೊತ್ತ 50 ರಿಂದ 1 ರೂ.ಗಳು. 100 ಮತ್ತು ಹೆಚ್ಚು 2 ರೂ.ಗಳು.ಈ ಸುತ್ತೋಲೆಯು ದಿನಾಂಕ 01/01/2024 ರಿಂದ ಜಾರಿಗೆ ಬರುತ್ತದೆ. ಸುತ್ತೋಲೆ ಸ್ವೀಕೃತಿ ಹಾಗೂ ಜಾರಿಗೊಳಿಸಿರುವ ಕುರಿತು ಆನುಸರಣಾ ವರದಿಯನ್ನು ನೀಡುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+