KSRTC: ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆ: ಚಿಕಿತ್ಸೆ ದರಗಳು, ಆಸ್ಪತ್ರೆ ವಿವರ

ಬೆಂಗಳೂರು, ಜನವರಿ 06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು 'ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಯನ್ನು ಘೋಷಣೆ ಮಾಡಲಾಗಿದೆ. ಈ ಯೋಜನೆ ಯಾವ ನೌಕರ/ ಸಿಬ್ಬಂದಿಗೆ ಅನ್ವಯ ಎಂದು ಸುತ್ತೋಲೆಯಲ್ಲಿ ವಿವರಣೆ ಸಹ ಕೊಡಲಾಗಿದೆ. ಚಿಕಿತ್ಸಾ ವೆಚ್ಚದ ಮಾಹಿತಿಯನ್ನು ನೀಡಲಾಗಿದೆ.

ಈ ಯೋಜನೆ ಯಾರಿಗೆ ಅನ್ವಯವಾಗುವುದಿಲ್ಲ ಎಂಬುದು ಸಹ ಪ್ರಮುಖ ಮಾಹಿತಿಯಾಗಿದೆ. ನಿಗಮದಲ್ಲಿ ಗುತ್ತಿಗೆ/ ಹೊರ ಗುತ್ತಿಗೆ/ ದಿನಗೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ನೌಕರರು 'ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಯ ವ್ಯಾಪ್ತಿಗೆ ಒಳಪಡುವುದಿಲ್ಲ.

KSRTC Arogya Scheme Hospital And Treatment List

ಸರ್ಕಾರದ ಇತರೆ ಇಲಾಖೆಗಳಿಂದ ಹಾಗೂ ಇತರ ಸಾರಿಗೆ/ ನಿಗಮಗಳಿಂದ ಎರವಲು ಸೇವೆಯ ಮೇಲೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು. ಕರಾರಸಾ ನಿಗಮದಿಂದ ಸರ್ಕಾರದ ಇತರೆ ಇಲಾಖೆಗಳಿಗೆ ಹಾಗೂ ಇತರ ಸಾರಿಗೆ/ ನಿಗಮಗಳಿಗೆ ಎರವಲು ಸೇವೆಯ ಮೇಲೆ ಹೋಗಿರುವ ನೌಕರರು ಸಹ ಇದಕ್ಕೆ ಅರ್ಹರಲ್ಲ.

ನಿಗಮದಲ್ಲಿ ತರಬೇತಿಯಲ್ಲಿರುವ ಶಿಶುಕ್ಷುಗಳು. 25 ವರ್ಷ ವಯೋಮಿತಿ ಮೀರಿರುವ, ವಿವಾಹಿತರಾಗಿರುವ ಮತ್ತು ಉದ್ಯೋಗಸ್ಥರಾಗಿದ್ದು, ಆರ್ಥಿಕವಾಗಿ ಸ್ವಾವಲಂಭಿಗಳಾಗಿರುವ ಮಕ್ಕಳು. ನ್ಯಾಯಾಲಯದ ಮಧ್ಯಂತರದ ಆದೇಶದ (17/B) ರನ್ವಯ ನಿರ್ವಹಿಸುತ್ತಿರುವ ನೌಕರರು. ನಿಗದಿತ ಆದಾಯದ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ನೌಕರರ ತಂದೆ ಮತ್ತು ತಾಯಿ ಸಹ ಯೋಜನೆ ವ್ಯಾಪ್ತಿಗೆ ಸೇರಲಾಗದು.

ಕಾರಣಾಂತರಗಳಿಂದ 3 ತಿಂಗಳು ಮೇಲ್ಪಟ್ಟು ಮಾಸಿಕ ವಂತಿಕೆ ಕಡಿತ ಆಗದಿರುವ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು. (ನೌಕರರು ಕರ್ತವ್ಯಕ್ಕೆ ಹಾಜರಾಗಿ ವಂತಿಕೆ ಕಡಿತಗೊಂಡ ನಂತರ ಈ ಯೋಜನೆಯಡಿ ಸೌಲಭ್ಯ ಪಡೆಯಲು ಮತ್ತೆ ಅರ್ಹರಾಗುತ್ತಾರೆ.) ಸಹ ಯೋಜನೆಗೆ ಅರ್ಹರಲ್ಲ ಎಂದು ಸುತ್ತೋಲೆ ಹೇಳಿದೆ.

ಅರ್ಹತಾದಾಯಕ ಚಿಕಿತ್ಸೆ ದರಗಳು: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS-Bangalore) ಅನ್ವಯ ಇತ್ತೀಚಿಗೆ ಪರಿಷ್ಕರಿಸಿದ, ಕಾಲಕಾಲಕ್ಕೆ ಪರಿಷ್ಕರಣೆ ಆಗುವ/ ಚಾಲ್ತಿಯಲ್ಲಿರುವ ವೈದ್ಯಕೀಯ ಚಿಕಿತ್ಸಾ ದರಪಟ್ಟಿಯ ದರಗಳು (Updated Rates) ಹಾಗೂ ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಸಂಬಂಧ ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಕಾಲಕಾಲಕ್ಕೆ ಅಳವಡಿಸಿಕೊಳ್ಳುವ ದರಗಳು ಈ ಯೋಜನೆ ಅನ್ವಯ ಸಿಗಲಿವೆ.

ಹಾಗೂ ಈ ಮೇಲ್ಕಂಡ ದರಪಟ್ಟಿಯಲ್ಲಿ ಇಲ್ಲದ ಚಿಕಿತ್ಸಾ ವಿಧಾನಗಳ ದರಗಳ ಬಗ್ಗೆ ಕಾಲಕಾಲಕ್ಕೆ ಸರ್ಕಾರದಿಂದ ಸ್ಪಷ್ಟೀಕರಣ ಪಡೆದುಕೊಂಡಿರುವ ಹಾಗೂ ಸರ್ಕಾರದ ದೃಢೀಕೃತ ಸಂಸ್ಥೆಯಿಂದ ಪಡೆದುಕೊಂಡಿರುವ ದರಗಳು. ನಗದು ರಹಿತ ಚಿಕಿತ್ಸೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಈ ಎರಡೂ ವ್ಯವಸ್ಥೆಗಳಿಗೂ ಮೇಲಿನಂತೆ ದರಗಳು ಅನ್ವಯವಾಗುತ್ತವೆ.

ವೈದ್ಯಕೀಯ ಸಂಸ್ಥೆಗಳು: ನಿಗಮದ ಮಾನ್ಯತೆ ಪಟ್ಟಿಯಲ್ಲಿದ್ದು ಯೋಜನೆಗೆ ಒಳಪಡುವ ಆರೋಗ್ಯ ಸೇವಾ ಸಂಸ್ಥೆಗಳು. ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರು ಹೊರರೋಗಿ ಹಾಗೂ ಒಳರೋಗಿ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಉಳಿದಂತೆ, ನಗದು ರಹಿತ ಚಿಕಿತ್ಸಾ ಯೋಜನೆಯಡಿ ನಿಗಮದ ಮಾನ್ಯತೆ ಪಟ್ಟಿಯಲ್ಲಿದ್ದು ಯೋಜನೆಗೆ ಒಳಪಡುವ ಆರೋಗ್ಯ ಸೇವಾ ಸಂಸ್ಥೆಗಳು ಈ ಕೆಳಕಂಡಂತಿವೆ.

* ಸರ್ಕಾರಿ ಸ್ವಾಯತ್ತ ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳು

* ಸರ್ಕಾರಿ ಸ್ವಾಯತ್ತ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು

* ಖಾಸಗಿ ಆಸ್ಪತ್ರೆಗಳು: ಏಕ, ಬಹು ತಜ್ಞ ಮತ್ತು ವಿಶೇಷ ತಜ್ಞ ಆಸ್ಪತ್ರೆಗಳು (Single, Multi Speciality and Super Speciality Hospitals)

* ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಹೋಮಿಯೋಪತಿ ಚಿಕಿತ್ಸಾ ಆಸ್ಪತ್ರೆಗಳು

* ವೈದ್ಯಕೀಯ ರೋಗ ನಿರ್ಧಾರಕ ಕೇಂದ್ರಗಳು (Diagnostic Centres). ಪ್ರತ್ಯೇಕ, (Stand- alone) ಅಥವಾ ವೈದ್ಯಕೀಯ ಸಂಸ್ಥೆಗಳಲ್ಲಿರುವ ಹಾಗೂ ವೈದ್ಯಕೀಯ ಸಂಸ್ಥೆಗಳೊಂದಿಗೆ ಟೈಯಪ್ ಆಗಿರುವ ಕೇಂದ್ರಗಳು/ ಪ್ರಯೋಗಾಲಯಗಳು.

* ಕಣ್ಣಿನ ಚಿಕಿತ್ಸೆಯ ಆಸ್ಪತ್ರೆಗಳು, ದಂತ ಚಿಕಿತ್ಸೆಯ ಆಸ್ಪತ್ರೆಗಳು, ಹಗಲು ಚಿಕಿತ್ಸಾ ಕೇಂದ್ರಗಳು, ಡಯಾಲಿಸಿಸ್‌ ಕೇಂದ್ರಗಳು

ನೂತನ ನಗದು ರಹಿತಾ ಚಿಕಿತ್ಸಾ ಯೋಜನೆಯಡಿ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಾನ್ಯತೆ ಪಟ್ಟಿಯಲ್ಲಿರುವ ಆಸ್ಪತ್ರೆಗಳ ವಿವರಗಳನ್ನು ಈಗಾಗಲೇ ನೀಡಲಾಗಿದೆ ಎಂದು ಸುತ್ತೋಲೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+