ಬೆಂಗಳೂರು-ಮುಂಡರಗಿ ನಡುವೆ ನಾನ್ ಎಸಿ ಸ್ಲೀಪರ್ ಬಸ್

ಬೆಂಗಳೂರು, ಜೂನ್ 16 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು-ಮುಂಡರಗಿ ನಡುವೆ ಹೊಸದಾಗಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಕೆಎಸ್ಆರ್‌ಟಿಸಿಯ ಕೇಂದ್ರಿಯ ವಿಭಾಗದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು-ಮುಂಡರಗಿ ಮಾರ್ಗದಲ್ಲಿ ಹೊಸ ಬಸ್ ಸೇವೆ ಆರಂಭಿಸಲಾಗುತ್ತಿದೆ. ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ನಡೆಸಲಿದೆ.

ಜುಲೈ 1ರಿಂದ ಬೆಂಗಳೂರು-ಮುಂಡರಗಿ ಬಸ್ ಸೇವೆ ಆರಂಭವಾಗಲಿದೆ ಎಂದು ಕೆಎಸ್ಆರ್‌ಟಿಸಿಯ ಪ್ರಕಟಣೆ ತಿಳಿಸಿದೆ. ಬೆಂಗಳೂರಿನಿಂದ ಹೊರಡುವ ಬಸ್ ದಾವಣಗೆರೆ, ಹರಪನಹಳ್ಳಿ, ಹಡಗಲಿ ಮಾರ್ಗವಾಗಿ ಮುಂಡರಗಿ ತಲುಪಲಿದೆ.

KSRTC announces Non ac sleeper bus service Bengaluru Mundaragi

ವೇಳಾಪಟ್ಟಿ : ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 7.45ಕ್ಕೆ ಮುಂಡರಗಿ ತಲುಪಲಿದೆ. ಮುಂಡರಗಿಯಿಂದ ರಾತ್ರಿ 8 ಗಂಟೆಗೆ ಹೊರಡುವ ಬಸ್ ಬೆಂಗಳೂರಿಗೆ ಮುಂಜಾನೆ 4.30ಕ್ಕೆ ಬಂದು ತಲುಪಲಿದೆ.

ಬೆಂಗಳೂರು-ಮುಂಡರಗಿ ನಡುವಿನ ಪ್ರಯಾಣ ದರ 630 ರೂ. ದರ ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+