Government employee; NPS ಯೋಜನೆ ಹುಟ್ಟು ಹಾಕುವ ಪ್ರಶ್ನೆಗಳು

ಬೆಂಗಳೂರು, ಅಕ್ಟೋಬರ್ 17: ಕರ್ನಾಟಕದ ಸರ್ಕಾರದ ಮುಂದೆ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಸಹ ಮನವಿಯನ್ನು ಸಲ್ಲಿಕೆ ಮಾಡಲಾಗಿದೆ.

ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ 7ನೇ ರಾಜ್ಯ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಹೊಸ ಪಿಂಚಣಿ ಯೋಜನೆಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಎನ್‌ಪಿಎಸ್ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದೆ.

KSGEA Raised Questions On Government Employees New Pension Scheme

NPS ಯೋಜನೆಯು ಹುಟ್ಟು ಹಾಕುವ ಪ್ರಶ್ನೆಗಳು

* NPS ಯೋಜನೆ ಸರ್ಕಾರಿ ನೌಕರರ ಮಧ್ಯದಲ್ಲಿಯೇ ಎರಡು ಗುಂಪುಗಳನ್ನಾಗಿ ವಿಂಗಡಿಸುತ್ತದೆ. ಆದ್ದರಿಂದ NPS ಯೋಜನೆಯನ್ನು ಕೈಬಿಡುವಂತೆ ಒತ್ತಾಯ.

* NPS ನೌಕರರು, ಸದರಿ ಯೋಜನೆಯು ಮಾರುಕಟ್ಟೆ ಆಧಾರಿತ ಇರುವುದರಿಂದ, ಮುಂದೆ ಪೆನ್ಷನ್ ಪಡೆಯುವುದು ಬಹಳ ಅನಿಶ್ಚಿತವಾಗಿರುವುದರಿಂದ, NPS ಯೋಜನೆ ಕೈಬಿಟ್ಟು ಮೊದಲಿನಂತೆ ಸರ್ಕಾರವೇ ಪೆನ್ಷನ್ ನೀಡಬೇಕು.

* NPSಗೆ ನೌಕರರು ವೇತನದ 10% ವಂತಿಗೆ ನೀಡಬೇಕಾದುದರಿಂದ ಒಟ್ಟು ಪಡೆಯಬೇಕಾದ ವೇತನ ಕಡಿಮೆಯಾಗುತ್ತದೆ. ಇದು ತಾರತಮ್ಯದ ನೀತಿ ಎಂದು ತಮ್ಮ ಅಸಮಾಧಾನವನ್ನು ನೌಕರರು ವ್ಯಕ್ತಪಡಿಸಿರುತ್ತಾರೆ.

* ಈ ಯೋಜನೆಯಲ್ಲಿ ನೌಕರರಿಗೆ ನಿವೃತ್ತಿ ಸಮಯದಲ್ಲಿ DCRG ಹಾಗೂ ನಿಶ್ಚಿತ ಫ್ಯಾಮಿಲಿ, ಪೆನ್ಷ್‌ನ್‌ಗೆ ಅವಕಾಶವಿರುವುದಿಲ್ಲ. NPS ಹೂಡಿಕೆದಾರರು GPF ನಲ್ಲಿ ಉಳಿತಾಯ ಮಾಡಲು ಅವಕಾಶವಿರುವುದಿಲ್ಲ.

* NPS ಯೋಜನೆಯಲ್ಲಿ GPF ನಲ್ಲಿದ್ದಂತೆ ನೌಕರರು ತಮ್ಮ ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಇದರಿಂದಾಗಿ ನೌಕರರನ್ನು ಇನ್ನಷ್ಟು ಸಾಲಗಾರನಾಗುವ ಪರಿಸ್ಥಿತಿ ಉಂಟಾಗುತ್ತದೆ.

* ಹಣ ಹಿಂಪಡೆದಾಗ ಒಟ್ಟು ಆದಾಯಕ್ಕೆ ಪೆನ್ಷನ್ ಸೇರಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದಲ್ಲದೆ ಸೇವಾ ಟ್ಯಾಕ್ಸ್ ಬೇರೆ ಕಟ್ಟಬೇಕಾಗುತ್ತದೆ.

* 2004 ರಿಂದ 2012 ರವರೆಗಿನ ನೌಕರರ ವಂತಿಗೆಯನ್ನು ಯಾವ ಹೂಡಿಕೆ ಇಲ್ಲದೆ ಹಾಗೂ ಬಡ್ಡಿ ಇಲ್ಲದೆ ಸರ್ಕಾರಗಳು ಇಟ್ಟುಕೊಂಡಿವೆ ಇದಕ್ಕೆ ಯಾರು ಹೊಣೆ?.

* ಹಳೆ ಪದ್ಧತಿಯ ಸರ್ಕಾರ ನೀಡುವ ಪೆನ್ಷನ್‌ನಲ್ಲಿ ಬೆಲೆ ಏರಿಕೆಗೆ ನೀಡುವ DA, NPS ಯೋಜನೆಗೆ ಒಳಪಡುವ ನೌಕರರಿಗೆ ಅನ್ವಯಿಸುವುದಿಲ್ಲ. ಇದು ನೌಕರರಲ್ಲಿ ತಾರತಮ್ಯವನ್ನು ಉಂಟು ಮಾಡುತ್ತದೆ.

* ವೇತನ ಆಯೋಗಗಳು ಪೆನ್ಪನ್ ಪರಿಷ್ಕರಿಸುವಂತೆ, NPS ಅಡಿಯಲ್ಲಿ ಪೆನ್ಪನ್ ಪರಿಷ್ಕರಿಸುವ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಭರವಸೆ ಇರುವುದಿಲ್ಲ.

* ನೌಕರರು ಹಾಗೂ ಸರ್ಕಾರ 10+10% ವಂತಿಗೆ ನೀಡಿದರೂ, ನೌಕರನು 30- 35 ವರ್ಷಗಳ ಸೇವೆಯ ನಂತರ ನಿವೃತ್ತಿ ಸಮಯದಲ್ಲಿ ಪಡೆವ ವೇತನದ ಶೇಕಡ 50% ಪೆನ್ಪನ್ ಪಡೆಯುವ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಭರವಸೆ ಇರುವುದಿಲ್ಲ.

* NPS ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಯಾವುದೇ ಅಂಶವನ್ನು ಈ ಕಾಯ್ದೆ ಒಳಗೊಂಡಿರುವುದಿಲ್ಲ.

* NPS ಯೋಜನೆಯಡಿ ರಾಜ್ಯ ಸರ್ಕಾರವು ನೀಡುವ ವಂತಿಕೆಯೂ ಸಾರ್ವಜನಿಕರ ಹಣವಾಗಿದ್ದು, ಸದರಿ ಹಣಕ್ಕೂ ಈ ಯೋಜನೆಯಡಿ ನಿಗದಿತ ಭದ್ರತೆ ಇರುವುದಿಲ್ಲ.

ಈ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಇಲ್ಲದೇ ಇರುವುದು NPS ಯೋಜನೆಯ ಪೊಳ್ಳುತನವನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಕೇವಲ, ನೌಕರರ ವೇತನದ 10% ಮಾತ್ರವಲ್ಲ ಸರ್ಕಾರದ 10% ಹಣದ ಭದ್ರತೆ ಅನಿಶ್ಚಿತವಾಗಿದೆ. ಆದಕಾರಣ ಇದು ಕೇವಲ, ನೌಕರರ ಹೂಡಿಕೆ ಮಾತ್ರವಲ್ಲ ಸರ್ಕಾರದ ಅಂದರೆ, ಸಾರ್ವಜನಿಕರ ಹೂಡಿಕೆಯು ಮುಳುಗಿ ಹೋಗುವುದು ನಿಶ್ಚಿತವಾಗಿದೆ.

2008ರ ಜಾಗತಿಕ ಮಾರುಕಟ್ಟೆಯ ಕುಸಿತದಿಂದಾಗಿ, ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿನ ನೌಕರರು, ಕಾರ್ಮಿಕರು. ದುಡಿಯುವ ಜನರು ತಮ್ಮ ಪೆನ್ಷನ್ ಹಾಗೂ ಎಲ್ಲಾ ಉಳಿತಾಯಗಳನ್ನು ಕಳೆದುಕೊಂಡಿದ್ದಾರೆ. ಇದು ನಮ್ಮ ಕಣ್ಣುಮುಂದೆ ಇರುವ ಸತ್ಯ. ಹೀಗಿದ್ದರೂ ಮುಂದುವರೆದ ರಾಷ್ಟ್ರಗಳಲ್ಲಿ ವಿಫಲವಾಗಿರುವ New Pension Scheme ಯೋಜನೆಯನ್ನು ಈ ದೇಶದ ನೌಕರರು ಹಾಗೂ ದುಡಿಯುವ ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲಾಗಿದೆ.

ಈ NPS ಯೋಜನೆಯ ಜಾರಿಯ ಹಿಂದೆ, ಆರ್ಥಿಕ ಶಿಸ್ತು ಹಾಗೂ ಆಡಳಿತ ಸುಧಾರಣೆಯ ನೆಪದಲ್ಲಿ ಈ ದೇಶಕ್ಕೆ ಬಂದೊದಗಿರುವ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ರೂವಾರಿಗಳಾದ ವಿಶ್ವಬ್ಯಾಂಕ್, IMF, WTOಗಳ ನೀತಿ ಹಾಗೂ ಖಾಸಗಿ ವಿಮಾ ಕಂಪನಿಗಳ, ಕಾರ್ಪೋರೇಟ್ ಸಂಸ್ಥೆಗಳ ಮತ್ತು ಎಲ್ಲೆಂದರಲ್ಲಿ ನುಸುಳುತ್ತಿರುವ ವಿದೇಶಿ ಬಂಡವಾಳ (FDI) ಇವೆಲ್ಲವುಗಳ ಪ್ರಭಾವ ಹಾಗೂ ಒತ್ತಡ ಇರುವುದು ಎದ್ದು ಕಾಣುತ್ತಲಿದೆ.

ನೌಕರರ ಹಾಗೂ ಸರ್ಕಾರದ ಲಕ್ಷಾಂತರ ಕೋಟಿ ಹಣವನ್ನು NPS ಯೋಜನೆ ಅಡಿಯಲ್ಲಿ ಖಾಸಗಿ ಬಂಡವಾಳಗಾರರಿಗೆ ಜೂಜಾಡಲು ನೀಡಿ, ಮಾರುಕಟ್ಟೆಯನ್ನು ಖಾಸಗಿಯವರ ಹೂಡಿಕೆಗೆ ಸ್ಥಿರ ಮಾರುಕಟ್ಟೆಯನ್ನಾಗಿ ಒದಗಿಸುವ ಈ ಕ್ರೂರ NPS ಯೋಜನೆಯನ್ನು ನೌಕರರು ದೇಶಾದ್ಯಂತ ಒಕ್ಕೊರಲಿನಿಂದ ಖಂಡಿಸಿದ್ದಾರೆ. ಇದೊಂದು No Pension Scheme ಆಗುವುದರಲ್ಲಿ ಸಂಶಯವಿಲ್ಲ.

ಆದಕಾರಣ ಈ ಹಿಂದೆ ಸರ್ಕಾರವೇ ನೀಡುತ್ತಿದ್ದ ನಿಶ್ಚಿತ ಪೆನ್ಷನ್ ಪದ್ಧತಿಯನ್ನು ಜಾರಿಗೆ ತರಬೇಕೆಂಬುದು ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಬೇಡಿಕೆಯಾಗಿದೆ. 7ನೇ ವೇತನ ಆಯೋಗವು ನಮ್ಮ ಮನವಿಯನ್ನು ಗಣನೆಗೆ ತೆಗೆದುಕೊಂಡು NPS ರದ್ದತಿ ಹಾಗೂ ನಿಶ್ಚಿತ ಪೆನ್ಷನ್ OPS ಪದ್ಧತಿ ಜಾರಿಗಾಗಿ ಶಿಫಾರಸ್ಸು ಮಾಡುತ್ತದೆಂದು ಭರವಸೆ ಹೊಂದಿದ್ದೇವೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+