KSET Exam 2023: ಕೆಸೆಟ್ ಪರೀಕ್ಷೆ ಅರ್ಜಿ ಸಲ್ಲಿಕೆಗೆ 4 ದಿನಗಳಷ್ಟೇ ಬಾಕಿ, ಹೇಗೆ ಸಲ್ಲಿಸಬೇಕು, ವಿಧಾನ-ವಿವರ
ಬೆಂಗಳೂರು, ಸೆಪ್ಟಂಬರ್ 27: ವರ್ಷದಿಂದಲೂ ಕಾಯುತ್ತಿದ್ದ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET 2023)ಗೆ ದಿನಾಂಕ ನಿಗದಿ ಮಾಡಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಇದೇ ಸೆಪ್ಟಂಬರ್ 30 ಕೊನೆ ದಿನವಾಗಿದೆ. ಕೊನೆ ದಿನಕ್ಕೆ ಕೇಲವ ನಾಲ್ಕು ದಿನಗಳು ಬಾಕಿ ಇವೆ. ಈ ಕೂಡಲೇ ಆಸಕ್ತರು ಅರ್ಜಿ ಸಲ್ಲಿಸಿ. ಅದಕ್ಕಾಗಿ ಇಲ್ಲಿರುವ ಅರ್ಜಿ ಲಿಂಕ್, ವಿಧಾನವನ್ನು ಮೊದಲು ತಿಳಿದುಕೊಳ್ಳಿ.
ಪರೀಕ್ಷಾ ಪ್ರಾಧಿಕಾರವು (KEA)ವು ಕಳೆದ ಸೆಪ್ಟಂಬರ್ 11ರಂದು ಕೆಸೆಟ್ 2023 ಪರೀಕ್ಷೆ ದಿನಾಂಕ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ನವೆಂಬರ್ 26ರಂದು ಕೆಸೆಟ್ ಎರಡು ಪರಿಕ್ಷೆಗಳು ನಡೆಯಲಿವೆ. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ವಿಸ್ತರಣೆಗೆ ಕಾಯದೇ ಇವತ್ತೆ ಅರ್ಜಿ ಸಲ್ಲಿಸಲು ಇಲ್ಲಿನ ವಿಧಾನಗಳನ್ನು ಪರಿಶೀಲಿಸಿರಿ.

ಅಭ್ಯರ್ಥಿಗಳು ಮೊದಲು https://karnemakaone.kar.nic.in/pqrs/ApplicationForm_JA_org.aspx ಈ ಲಿಂಕ್‌ಗೆ ಭೇಟಿ ನೀಡಿ ಪರಿಶೀಲಿಸಬೇಕು. ಬಳಿಕ ಅಗತ್ಯ ದಾಖಲೆಗಳನ್ನು ಒಂದರ ಹಿಂದೆ ಒಂದರಂತೆ ಭರ್ತಿ ಮಾಡಬೇಕು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
* ಅಧಿಕೃತ ವೆಬ್‌ಸೈಟ್ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಓಪನ್ ಮಾಡಿಕೊಳ್ಳಿ.
* ಕಾಣಿಸುವ ಪರದೆಯಲ್ಲಿ ನಿಮಗೆ ಕೇಳಲಾಗುವ ಸೂಕ್ತ ಮಾಹಿತಿ ನಮೂದಿಸಿ.
* ಎಲ್ಲ ವಿವರ ದಾಖಲಿಸಿದ ನಂತರ ಸಲ್ಲಿಕೆಗೂ (Submit) ಮೊದಲು ನಮೂದಿಸಿದ ವಿವಿರಗಳು/ಮಾಹಿತಿ ಸರಿಯಾಗಿದೆಯೇ ಇಲ್ಲ ಎಂದು ಚೆಕ್ ಮಾಡಿ ನಂತರ ಸಬ್ಮಿಟ್ ಕೊಡಿ.
* ಇದೆಲ್ಲ ಪ್ರಕ್ರಿಯೆ ಮೂಲಕ ಮುಂದಿನ ರೆಫರೆನ್ಸ್‌ಗೆಂದು ಸಲ್ಲಿಕೆಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಅರ್ಜಿ ಸಲ್ಲಿಸಿದ ಬಳಿಕ ಇ-ಅಂಚೆ ಮೂಲಕ ಶುಲ್ಕ ಪಾವತಿಗೆ ಮುಂದಿನ ತಿಂಗಳು ಅಕ್ಟೋಬರ್ 03 ಕೊನೆ ದಿನಾಂಕವಾಗಿದೆ.
KSET ಪರೀಕ್ಷಾ ಶುಲ್ಕದ ವಿವರ
ಪ್ರವರ್ಗ-I, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ವಿಶೇಷ ಚೇತನ ಅಭ್ಯರ್ಥಿಗಳಿಗೆ ಮಾತ್ರ 700 ರೂಪಾಯಿ ಇದ್ದು, ಉಳಿದ ಅಭ್ಯರ್ಥಿಗಳಿಗೆ ಅಜಿ ಶುಲ್ಕ 1000 ರೂಪಾಯಿ ನಿಗದಿ ಮಾಡಲಾಗಿದೆ.

ಕೆಸೆಟ್ ಅರ್ಹತೆಗೆ ಎಷ್ಟು ಅಂಕಗಳು ಬೇಕು?
ಕೆಸೆಟ್ ಪರೀಕ್ಷೆ ಬರೆದ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ಶೇಕಡ 40ರಷ್ಟು ರಷ್ಟುಗಳನ್ನು ಪಡೆಯಬೇಕಿದೆ. ಇತ್ತ ಎಸ್‌ಸಿ/ ಎಸ್‌ಟಿ/ಪ್ರವರ್ಗ-1/ಇತರೆ ಹಿಂದುಳಿದ ಹಾಗೂ PWD ಅಭ್ಯರ್ಥಿಗಳು ಶೇಕಡ 35ರಷ್ಟು ಅಂಕಗಳನ್ನು ಗಳಿಸಬೇಕು ಎಂಬ ನಿಯಮವಿದೆ.
ಪ್ರಸಕ್ತ 2023ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವವರಿಗೆ ಇಂತಿಷ್ಟು ಗರಿಷ್ಠ ವಯಸ್ಸು ಎಂದು ನಿಯಮ, ವಯಸ್ಸಿನ ಮಿತಿ ಇಲ್ಲ. ಆದರೆ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣ ಆಗಿರುವುದು ಕಡ್ಡಾಯಗೊಳಿಸಲಾಗಿದೆ. ಅಂತವರು ಮಾತ್ರವೇ ಅರ್ಜಿ ಸಲ್ಲಿಕೆಗೆ ಅರ್ಹರಗಿರುತ್ತಾರೆ.
ಮುಖ್ಯವಾಗಿ ಈ KSET 2023 ಪರೀಕ್ಷೆಯಲ್ಲಿ ತಪ್ಪಾದ ಉತ್ತರಗಳಿಗೆ ಯಾವುದೇ ರೀತಿಯ ಋಣಾತ್ಮಕ ಮೌಲ್ಯಮಾಪನ -ಇರುವುದಿಲ್ಲ. ಸಾಮಾನ್ಯ ಪತ್ರಿಕೆ ಹಾಗೂ 41 ವಿಷಯಗಳ ಪಠ್ಯಕ್ರಮವನ್ನು KEA ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮಹತ್ವದ ದಿನಾಂಕಗಳು
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಸೆಪ್ಟಂಬರ್ 11
* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಸೆಪ್ಟಂಬರ್ 30
* ಇ ಅಂಚೆ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕಡೆ ದಿನಾಂಕ: ಅಕ್ಟೋಬರ್ 03
* ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kea.kar.nic.in/ ಗೆ ಭೇಟಿ ನೀಡಬೇಕು.












Click it and Unblock the Notifications