Dam Water Level: ಬೇಸಿಗೆಯಲ್ಲಿ ಕಾಡುತ್ತಾ ನೀರಿನ ಸಮಸ್ಯೆ? ಜಲಾಶಯಗಳಲ್ಲಿ ಎಷ್ಟಿದೆ ನೀರು
ರಾಜ್ಯದಲ್ಲಿ ಬೇಸಿಗೆ ಕಾಲ ಆರಂಭಕ್ಕೆ ಇನ್ನು ಕೆಲವೇ ತಿಂಗಳಿದೆ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ರಾಜ್ಯದಲ್ಲಿ ಉತ್ತಮವಾಗಿ ನಡೆಸಿದ್ದರಿಂದ ರಾಜ್ಯದ ಬಹುತೇಕ ಜಲಾಶಗಳಯಗಳು ಭರ್ತಿಯಾಗಿದ್ದವು. ಮಳೆಗಾಲದ ಬಳಿಕವೂ ವಾಯುಭಾರ ಕುಸಿತದಿಂದ ಡಿಸೆಂಬರ್ ಕೊನೆಯವರೆಗೂ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದ್ದರಿಂದ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿರಲಿಲ್ಲ.
ಜನವರಿ ಮುಗಿಯುತ್ತಾ ಬಂದಿದ್ದು ಬೇಸಿಗೆ ಶುರುವಾಗಲು ಇನ್ನು ಕೆಲವು ತಿಂಗಳು ಸಮಯವಿದೆ. ಹಾಗಾದರೆ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುತ್ತಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ನೀರಿನ ಸಮಸ್ಯೆ ಇರುತ್ತಾ?
ರಾಜ್ಯದಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಕೆಆರ್ ಎಸ್ ಜಲಾಶಯದಲ್ಲಿ ಇನ್ನೂ 49.45 ಟಿಎಂಸಿ ನೀರಿನ ಸಂಗ್ರಹವಿದೆ. 43.311 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈವರೆಗೂ 6 ಟಿಎಂಸಿ ನೀರು ಮಾತ್ರ ಕಡಿಮೆಯಾಗಿದೆ. ಬೇಸಿಗೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗಲ್ಲ ಎಂದು ಹೇಳಲಾಗಿದೆ.
ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಗರಿಷ್ಠ 49.45 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯ ಕೆಆರ್ ಎಸ್ ಜಲಾಶಯದಲ್ಲಿ ಗುರುವಾರ 43.311 ಟಿಎಂಸಿ ನೀರು ಸಂಗ್ರಹವಾಗಿದೆ. 124.80 ಅಡಿ ಗರಿಷ್ಠ ಮಟ್ಟ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು ಗುರುವಾರ 120.21 ಅಡಿ ನೀರು ಸಂಗ್ರಹವಾಗಿದೆ.
ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದ್ದು 516.05 ಮೀಟರ್ ಸಂಗ್ರಹವಾಗಿದೆ. ಬೇಸಿಗೆಯಲ್ಲಿ ರೈತರ ಬೆಳೆಗೆ ನೀರು ಸಿಗುವ ವಿಶ್ವಾಸದಲ್ಲಿದ್ದಾರೆ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ
-
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 553.45 ಮೀಟರ್ / 103.54 ಟಿಎಂಸಿ
ಒಳಹರಿವು: 2 ಕ್ಯೂಸೆಕ್ಸ್
ಹೊರಹರಿವು: 6962 ಕ್ಯೂಸೆಕ್ಸ್
-
ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 554 ಮೀಟರ್/ 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 548.92 ಮೀಟರ್ / 98.50 ಟಿಎಂಸಿ
ಒಳಹರಿವು: 752 ಕ್ಯೂಸೆಕ್ಸ್
ಹೊರಹರಿವು: 7438 ಕ್ಯೂಸೆಕ್ಸ್
-
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 588.91 ಮೀಟರ್ / 21.43 ಟಿಎಂಸಿ
ಒಳಹರಿವು: 0
ಹೊರಹರಿವು: 1578 ಕ್ಯೂಸೆಕ್ಸ್
-
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2279.47 ಅಡಿ / 16.743 ಟಿಎಂಸಿ
ಒಳಹರಿವು: 109 ಕ್ಯೂಸೆಕ್ಸ್
ಹೊರಹರಿವು: 500 ಕ್ಯೂಸೆಕ್ಸ್
-
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2903.29 ಅಡಿ / 21.892 ಟಿಎಂಸಿ
ಒಳಹರಿವು: 59 ಕ್ಯೂಸೆಕ್ಸ್
ಹೊರಹರಿವು: 356 ಕ್ಯೂಸೆಕ್ಸ್
-
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1617.41 ಅಡಿ / 54.37 ಟಿಎಂಸಿ
ಒಳಹರಿವು: 0
ಹೊರಹರಿವು: 10149 ಕ್ಯೂಸೆಕ್ಸ್
-
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2148.75 ಅಡಿ / 60.37 ಟಿಎಂಸಿ
ಒಳಹರಿವು: 229 ಕ್ಯೂಸೆಕ್ಸ್
ಹೊರಹರಿವು: 3273 ಕ್ಯೂಸೆಕ್ಸ್
-
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2152.38 ಅಡಿ / 34.43 ಟಿಎಂಸಿ
ಒಳಹರಿವು: 0
ಹೊರಹರಿವು: 123 ಕ್ಯೂಸೆಕ್ಸ್
-
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079.50 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2067.56 ಅಡಿ / 23.36 ಟಿಎಂಸಿ
ಒಳಹರಿವು: 0
ಹೊರಹರಿವು: 1391 ಕ್ಯೂಸೆಕ್ಸ್
-
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519.60 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 516.05 ಮೀಟರ್ / 73.83 ಟಿಎಂಸಿ
ಒಳಹರಿವು: 0
ಹೊರಹರಿವು: 16686 ಕ್ಯೂಸೆಕ್ಸ್
-
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 491.50 ಮೀಟರ್ / 29.23 ಟಿಎಂಸಿ
ಒಳಹರಿವು: 11863 ಕ್ಯೂಸೆಕ್ಸ್
ಹೊರಹರಿವು: 11999 ಕ್ಯೂಸೆಕ್ಸ್
-
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2140 ಅಡಿ / 30.42 ಟಿಎಂಸಿ
ಒಳಹರಿವು: 0 ಕ್ಯೂಸೆಕ್ಸ್
ಹೊರಹರಿವು: 135 ಕ್ಯೂಸೆಕ್ಸ್












Click it and Unblock the Notifications