KRS Dam Water Level: ಕೆಆರ್‌ಎಸ್, ಕಬಿನಿ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಎಷ್ಟು?-ಜೂನ್ 04ರ ಅಂಕಿಅಂಶಗಳ ವಿವರ ತಿಳಿಯಿರಿ
KRS Dam Water Level: ಇದೀಗ ರಾಜ್ಯದಲ್ಲಿ ಮುಂಗಾರು ಚುರುಕು ಪಡೆದಿರುವ ಹಿನ್ನೆಲೆ ರಾಜ್ಯದ ಬತ್ತುವ ಹಂತ ತಲುಪಿದ್ದ ಜಲಮೂಲಗಳಿಗೆ ಜೀವಕಳೆ ಬಂದಾಂತಾಗಿದೆ. ಹಾಗೆಯೇ ಮೈಸೂರು ಜಿಲ್ಲೆಯ ಪ್ರಮುಖ ಜೀನವಾಡಿಗಳಾದ ಕೆಆರ್‌ಎಸ್, ಕಬಿನಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಇದೀಗ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ವಾರದಿಂದಲೂ ಕೊಡುಗು ಹಾಗೂ ಕೇರಳದ ವಯನಾಡು ಪ್ರದೇಶಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಇದರಿಂದ ಕಬಿನಿ, ಕೆಆರ್‌ಎಸ್ ಜಲಾಶಗಳ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನು ಇಂದಿನ ಮೈಸೂರು ಭಾಗದ ಜಲಾಶಯಗಳ ನೀರಿನ ಮಟ್ಟದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕಬಿನಿ ಜಲಾಶಯದ ನೀರಿನ ಮಟ್ಟ: ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ 1,178 ಕ್ಯೂಸೆಕ್ ಒಳ ಹರಿವು ಇದ್ದರೆ, 300 ಕ್ಯೂಸೆಕ್ ನೀರನ್ನು ಹೊರ ಹರಿವಿದೆ. ಇನ್ನು 2,284 ಅಡಿಗಳ ಸಾಮರ್ಥ್ಯವಿರುವ ಜಲಾಶಯದ ಇಂದಿನ ನೀರಿನ ಮಟ್ಟ 2260.87 ಅಡಿ ಇದೆ ಎಂದು ತಿಳಿದುಬಂದಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ: ಇನ್ನು ಮಂಡ್ಯ, ಮೈಸೂರು, ಬೆಂಗಳೂರು ಜೀವನಾಡಿಯಾಗಿರುವ ಕೆ.ಆರ್.ಎಸ್ ಜಲಾಶಯಕ್ಕೆ 1,586 ಕ್ಯೂಸೆಕ್ ನೀರು ಒಳ ಹರಿವು ಇದ್ದರೆ, 549 ಕ್ಯೂಸೆಕ್ ನೀರನ್ನು ಜಲಶಾಯದಿಂದ ಹೊರ ಹರಿಸಲಾಗುತ್ತಿದೆ. 124.80 ಅಡಿ ಸಾಮರ್ಥ್ಯ ಇರುವ ಜಲಾಶಯದ ಇಂದಿನ (ಜೂನ್ 03) ಮಟ್ಟ 84.40 ಅಡಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications