KRS Dam: ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ; ವಿವಿಧ ಜಲಾಶಯಗಳ ನೀರಿನ ಮಟ್ಟ

ರಾಜ್ಯದಲ್ಲಿ ಕೆಲವು ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕುಗೊಂಡಿದೆ. ಮುಂಗಾರು ಆರಂಭದಲ್ಲಿ ಅಬ್ಬರಿಸಿದ್ದ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದವು, ಅದಾದ ಬಳಿಕ ಕೆಲವು ದಿನ ಮಳೆ ಕೈಕೊಟ್ಟಿತ್ತು. ಇದೀಗ ಮತ್ತೆ ಮಳೆ ಅಬ್ಬರಿಸಲು ಆರಂಭಿಸಿದ್ದು, ನದಿಗಳ ನೀರಿನ ಮಟ್ಟ ಮತ್ತೆ ಹೆಚ್ಚಾಗಿದೆ. ಜಲಾಶಯಗಳ ಒಳಹರಿವು ಮತ್ತೆ ಏರಿಕೆಯಾಗಿದೆ.

ಖುಷಿ ವಿಚಾರ ಎಂದರೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೆಲವು ಜಲಾಶಯಗಳು ಮಾತ್ರ ಇನ್ನೂ ಭರ್ತಿಯಾಗಬೇಕಿದೆ. ರಾಜ್ಯದ ಅತಿ ದೊಡ್ಡ ಜಲಾಶಯ ಎನಿಸಿಕೊಂಡಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಸದ್ಯ 144.92 ಟಿಎಂಸಿಗಳಷ್ಟಿದ್ದು, ಗರಿಷ್ಠ ಸಂಗ್ರಹ ಸಾಮರ್ಥ್ಯ 151.75 ಟಿಎಂಸಿ ಆಗಿದೆ. ಸದ್ಯ ಜಲಾಶಯಕ್ಕೆ 3973 ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, 7599 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

KRS Kabini and others Karnataka dam water level on October 7th

ಕೃಷ್ಣರಾಜಸಾಗರ (ಕೆಆರ್ ಎಸ್) ಜಲಾಶಯ ಭರ್ತಿಯಾಗಿದ್ದು ಸದ್ಯ ತಮಿಳುನಾಡು ರಾಜ್ಯದ ಖ್ಯಾತೆ ತಪ್ಪಿದೆ. 124.80 ಗರಿಷ್ಠ ಅಡಿ ಇರುವ ಕೆಆರ್ ಎಸ್‌ನಲ್ಲಿ ಸದ್ಯ 124.18 ಅಡಿ ನೀರು ಸಂಗ್ರಹವಾಗಿದೆ. 5642 ಕ್ಯೂಸೆಕ್ಸ್ ಒಳಹರಿವು ಇದ್ದು, 6200 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.

ತುಂಗಭದ್ರಾ ಜಲಾಶಯ ಕೂಡ ಭರ್ತಿಯಾಗಿದ್ದು ಈ ಭಾಗದ ರೈತರಲ್ಲಿ ನೆಮ್ಮದಿ ತರಿಸಿದೆ. 1633 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 1632 ಅಡಿ ನೀರು ಸಂಗ್ರಹವಾಗಿದೆ. 105.79 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 101.77 ಟಿಎಂಸಿ ನೀರು ಸಂಗ್ರಹದಲ್ಲಿದೆ. 14662 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.

ವಿವಿಧ ಜಲಾಶಯಗಳ ನೀರಿನ ಮಟ್ಟ

ಸೂಪಾ ಜಲಾಶಯ

ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 562.64 ಮೀಟರ್ / 139.52 ಟಿಎಂಸಿ
ಒಳಹರಿವು: 915 ಕ್ಯೂಸೆಕ್ಸ್
ಹೊರಹರಿವು: 2867 ಕ್ಯೂಸೆಕ್ಸ್

ವಾರಾಹಿ ಜಲಾಶಯ

ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 592.36 ಮೀಟರ್ / 28.22 ಟಿಎಂಸಿ
ಒಳಹರಿವು: 533 ಕ್ಯೂಸೆಕ್ಸ್
ಹೊರಹರಿವು: 0 ಕ್ಯೂಸೆಕ್ಸ್

ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ: 2859 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2856 ಅಡಿ / 7.78 ಟಿಎಂಸಿ
ಒಳಹರಿವು: 313 ಕ್ಯೂಸೆಕ್ಸ್
ಹೊರಹರಿವು: 1100 ಕ್ಯೂಸೆಕ್ಸ್

ಕಬಿನಿ ಜಲಾಶಯ

ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2282 ಅಡಿ / 18.55 ಟಿಎಂಸಿ
ಒಳಹರಿವು: 5642 ಕ್ಯೂಸೆಕ್ಸ್
ಹೊರಹರಿವು: 4898 ಕ್ಯೂಸೆಕ್ಸ್

ಭದ್ರಾ ಜಲಾಶಯ

ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2157 ಅಡಿ / 70.67 ಟಿಎಂಸಿ
ಒಳಹರಿವು: 4553 ಕ್ಯೂಸೆಕ್ಸ್
ಹೊರಹರಿವು: 4553 ಕ್ಯೂಸೆಕ್ಸ್

ಘಟಪ್ರಭಾ ಜಲಾಶಯ

ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2174 ಅಡಿ / 50.84 ಟಿಎಂಸಿ
ಒಳಹರಿವು: 1419 ಕ್ಯೂಸೆಕ್ಸ್
ಹೊರಹರಿವು: 2386 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ

ಗರಿಷ್ಠ ನೀರಿನ ಮಟ್ಟ : 2079 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2077 ಅಡಿ / 35.52 ಟಿಎಂಸಿ
ಒಳಹರಿವು: 194 ಕ್ಯೂಸೆಕ್ಸ್
ಹೊರಹರಿವು: 194 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ

ಗರಿಷ್ಠ ನೀರಿನ ಮಟ್ಟ : 519 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 519 ಮೀಟರ್ / 123.08 ಟಿಎಂಸಿ
ಒಳಹರಿವು: 21010 ಕ್ಯೂಸೆಕ್ಸ್
ಹೊರಹರಿವು: 21010 ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ

ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 492.21 ಮೀಟರ್ / 33.27 ಟಿಎಂಸಿ
ಒಳಹರಿವು: 19021 ಕ್ಯೂಸೆಕ್ಸ್
ಹೊರಹರಿವು: 15738 ಕ್ಯೂಸೆಕ್ಸ್

ವಾಣಿ ವಿಲಾಸ ಸಾಗರ

ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2131.25 ಅಡಿ / 23.95 ಟಿಎಂಸಿ
ಒಳಹರಿವು: 1964 ಕ್ಯೂಸೆಕ್ಸ್
ಹೊರಹರಿವು: 133 ಕ್ಯೂಸೆಕ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+