Dam Water Level: ಕಬಿನಿ, ಕೆಆರ್‌ಎಸ್‌ ಒಳಹರಿವು ಅಲ್ಪ ಕುಸಿತ; ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?

ಕರ್ನಾಟದ ಹಲವು ಜಿಲ್ಲೆಗಳಿಗೆ ಮುಂಗಾರು ಸಂಭ್ರಮ ತಂದಿದೆ. ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರಾಜ್ಯ ಈ ಬಾರಿ ಮಳೆಗೆ ನಿಟ್ಟುಸಿರು ಬಿಟ್ಟಿದೆ. ಹಲವು ಜಿಲ್ಲೆಗಳಲ್ಲಿ ಇನ್ನೂ ಮಳೆ ಕೊರತೆ ಇದ್ದರೂ, ಪಶ್ಚಿಮ ಘಟ್ಟಗಳು, ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ನೀರಿನ ಹರಿವು ಉತ್ತಮವಾಗಿದೆ.

ಪಶ್ಚಿಮ ಘಟ್ಟಗಳು ಮತ್ತು ಕೇರಳದಲ್ಲಿ ವ್ಯಾಪಕ ಮಳೆಯಾದ ಕಾರಣ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರು ಬಂದಿದೆ. ಕಬಿನಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಶುಕ್ರವಾರದಿಂದ ಮಳೆ ಕಡಿಮೆಯಾದ ಕಾರಣ ಜಲಾಶಯಗಳಿಗೆ ಒಳಹರಿವು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.

KRS Kabini and Mettur Dams Water Levels update

ಕೃಷ್ಣರಾಜ ಸಾಗರ ಜಲಾಶಯದ ಒಳಹರಿವು 6700 ಕ್ಯೂಸೆಕ್ಸ್ ಇದ್ದು, 124.80 ಗರಿಷ್ಠ ಮಟ್ಟವಿರುವ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 100.90 ಅಡಿ ಆಗಿದೆ. 554 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.

ಕಬಿನಿ ಜಲಾಶಯದ ಒಳಹರಿವು ಕಡಿಮೆಯಾಗಿದ್ದು ಸದ್ಯ 5500 ಕ್ಯೂಸೆಕ್ಸ್ ನೀರು ಜಲಾಶಯವನ್ನು ಸೇರುತ್ತಿದೆ. 2284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2281.3 ಅಡಿ ನೀರು ಸಂಗ್ರಹವಾಗಿದ್ದು ಭರ್ತಿಯಾಗಲು 3 ಅಡಿ ಬಾಕಿ ಇದೆ. ಜಲಾಶಯದಿಂದ 4000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಮೆಟ್ಟೂರು ಜಲಾಶಯದ ಒಳಹರಿವು ಹೆಚ್ಚಳ

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ತಮಿಳುನಾಡಿಗೆ ಕೂಡ ಲಾಭವಾಗುತ್ತದೆ. ಮೆಟ್ಟೂರು ಜಲಾಶಯದ ಒಳಹರಿವು ನಿಧಾನವಾಗಿ ಹೆಚ್ಚಾಗುತ್ತಿದ್ದು, ಕಬಿನಿ ಜಲಾಶಯದ ತುಂಬಿದ ಬಳಿಕ ಮತ್ತಷ್ಟು ನೀರು ತಮಿಳುನಾಡಿಗೆ ಹರಿಯಲಿದೆ.

ಸದ್ಯ ಮೆಟ್ಟೂರು ಜಲಾಶಯಕ್ಕೆ 1465 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, 1000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 120 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 39.76 ಅಡಿ ನೀರು ಸಂಗ್ರಹವಾಗಿದೆ.

ಒಳಹರಿವು ಮತ್ತಷ್ಟು ಹೆಚ್ಚಳ?

ಕಬಿನಿ ಜಲಾಶಯ ತುಂಬುತ್ತಿದ್ದಂತೆ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತದೆ. ಈ ನೀರು ಸಂಗಮದಲ್ಲಿ ಕಾವೇರಿ ನದಿಯನ್ನು ಸೇರಲಿದ್ದು ಮೆಟ್ಟೂರು ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+