KRS Dam: ಕೆ ಆರ್ ಎಸ್ ಡ್ಯಾಂನ ಒಳಹರಿವಿನಲ್ಲಿ ದಿಢೀರ್ ಏರಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ
ಮಂಡ್ಯ, ಜುಲೈ 15: ಬೇಸಿಗೆಯಿಂದ ಎಲ್ಲಾ ಜಲಾಶಯಗಳ ನೀರು ಬತ್ತಿ ಹೋಗಿತ್ತು. ಅದರಲ್ಲೂ ಮಳೆ ಇಲ್ಲದೇ ಜನ ಕಂಗಾಲಾಗಿದ್ದರು. ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಕೆ ಆರ್ ಎಸ್ ಜಲಾಶಯದ ನೀರಿನ ಒಳಹರಿವಿನಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ಹೌದು, ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅಲ್ಲದೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ.ಭಾನುವಾರದಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಮಳೆಯ ಹಿನ್ನೆಲೆ ಕೆಆರ್‌ಎಸ್ ಡ್ಯಾಂಗೆ ನೀರು ಹರಿದು ಬರುತ್ತಿದೆ. 10,121 ಕ್ಯೂಸೆಕ್‌ಗೆ ಒಳಹರಿವು ಏರಿಕೆ ಕಂಡಿದೆ.

ಭಾನುವಾರದಂತೆ ಕೆ ಆರ್ ಎಸ್ ಜಲಾಶಯದಲ್ಲಿ 2898 ಕ್ಯೂಸೆಕ್ ಒಳಹರಿವಿತ್ತು. ಆದರಿಂದು 10,121 ಕ್ಯೂಸೆಕ್‌ಗೆ ಏರಿಕೆ ಕಂಡಿದೆ. ಹೀಗಾಗಿ ಕೆಆರ್‌ಎಸ್ ನೀರಿನ ಮಟ್ಟ 105.40 ಅಡಿಗೆ ತಲುಪಿದೆ. ಡ್ಯಾಂ 124.80 ಅಡಿ ಗರಿಷ್ಠ ಮಟ್ಟ ಹೊಂದಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 27.347 ಟಿಎಂಸಿ ನೀರು ಸಂಗ್ರಹವಾಗಿದೆ. ನಾಲೆ ಹಾಗೂ ಕುಡಿಯುವ ನೀರಿಗಾಗಿ 2260 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
* ಗರಿಷ್ಠ ಮಟ್ಟ - 124.80 ಅಡಿ.
* ಇಂದಿನ ಮಟ್ಟ - 105.40 ಅಡಿ.
* ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
* ಇಂದಿನ ಸಾಮರ್ಥ್ಯ - 27.347 ಟಿಎಂಸಿ
* ಒಳ ಹರಿವು - 10,121 ಕ್ಯೂಸೆಕ್
* ಹೊರ ಹರಿವು - 2,260 ಕ್ಯೂಸೆಕ್
ಕಬಿನಿ ಹೊರಹರಿವು ಹೆಚ್ಚಳ!
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು ಇದರಿಂದಾಗಿ ಭರಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.
ಸೋಮವಾರ ಮಧ್ಯಾಹ್ನ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ದುಮ್ಮಿಕ್ಕುವ ದೃಶ್ಯ ವೈಭವವು ನೋಡುಗರನ್ನು ರೋಮಾಂಚನಗೊಳಿಸಿತು. ಕಬಿನಿಯಿಂದ 20 ಸಾವಿರ ಕ್ಯೂಸೆಕ್ ಹೊರಹರಿವು ಇದ್ದು ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕವೂ ಮೂಡಿದೆ.
ಇಂದಿನ ಕಬಿನಿ ಡ್ಯಾಂ ನೀರಿನ ಮಟ್ಟ
* ಗರಿಷ್ಠ ಮಟ್ಟ - 84 ಅಡಿ
* ಇಂದಿನ ಮಟ್ಟ - 82.65
* ಗರಿಷ್ಠ ಸಾಮರ್ಥ್ಯ - 19.52 TMC
* ಇಂದಿನ ಸಾಮರ್ಥ್ಯ - 18.52 TMC
* ಒಳಹರಿವು : 14657
* ಹೊರಹರಿವು : 20000












Click it and Unblock the Notifications