KRS Dam Water Level: 105 ಅಡಿಗೆ ಕುಸಿದ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ, ಮುಂದೇನು ಈ ಜಿಲ್ಲೆಗಳ ಗತಿ?
ಕರ್ನಾಟಕ, ಆಗಸ್ಟ್, 22: ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆ ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಜಲಾಶಯಗಳ ನೀರಿನ ಪ್ರಮಾಣ ಕೂಡ ಕುಸಿಯುತ್ತಿದೆ. ಅದರಲ್ಲೂ ಮಂಡ್ಯ, ಬೆಂಗಳೂರು, ಮೈಸೂರು ಜಿಲ್ಲೆಗಳ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ 105 ಅಡಿಗೆ ತಗ್ಗಿದೆ.
ಇಂದು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 105.30 ಅಡಿಗೆ ಕುಸಿತ ಕಂಡಿದ್ದು, ಇದರಿಂದ ಇದನ್ನೇ ನಂಬಿಕೊಂಡು ಕುಳಿತಿದ್ದ ಸಕ್ಕರೆ ನಾಡು ಮಂಡ್ಯ, ಸಾಂಸ್ಕೃತಿ ನಗರಿ ಮೈಸೂರು, ರಾಜ್ಯದ ರಾಜಧಾನಿ ಬೆಂಗಳೂರಿನ ಜನರಲ್ಲಿ ಆತಂಕ ಮನೆ ಮಾಡಿದೆ. ಹಾಗಾದರೆ ಇನ್ನುಳಿದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 105.30 ಅಡಿ
* ಒಳಹರಿವು - 5,259 ಕ್ಯೂಸೆಕ್
* ಹೊರಹರಿವು - 11,927 ಕ್ಯೂಸೆಕ್
2. ಆಲಮಟ್ಟಿ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 519.60 ಮೀಟರ್
* ಒಳಹರಿವು - 901 ಕ್ಯೂಸೆಕ್
* ಹೊರಹರಿವು - 901 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,627.30 ಅಡಿ
* ಒಳಹರಿವು - 972 ಕ್ಯೂಸೆಕ್
* ಹೊರಹರಿವು - 10,270 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಇಂದಿನ ನೀರಿನ ಮಟ್ಟ - 2,067.20 ಅಡಿ
* ಒಳಹರಿವು - 194 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,790.40 ಅಡಿ
* ಒಳಹರಿವು - 5,649 ಕ್ಯೂಸೆಕ್
* ಹೊರಹರಿವು - 5,487.17 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,276.54 ಅಡಿ
* ಒಳಹರಿವು - 2,603 ಕ್ಯೂಸೆಕ್
* ಹೊರಹರಿವು - 3,225 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 166 ಅಡಿ
* ಒಳಹರಿವು - 3,224 ಕ್ಯೂಸೆಕ್
* ಹೊರಹರಿವು - 3,244 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,165 ಅಡಿ
* ಒಳಹರಿವು - 2,206 ಕ್ಯೂಸೆಕ್
* ಹೊರಹರಿವು - 3,664 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,912.55 ಅಡಿ
* ಒಳಹರಿವು - 2,596 ಕ್ಯೂಸೆಕ್
* ಹೊರಹರಿವು - 6,580 ಕ್ಯೂಸೆಕ್
10. ಸೂಪಾ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ - 537.5 ಮೀಟರ್
* ಒಳಹರಿವು - 5,354 ಕ್ಯೂಸೆಕ್
* ಹೊರಹರಿವು - 4,646 ಕ್ಯೂಸೆಕ್
11. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,858.71 ಅಡಿ
* ಒಳಹರಿವು - 2,446 ಕ್ಯೂಸೆಕ್
* ಹೊರಹರಿವು - 1,800 ಕ್ಯೂಸೆಕ್












Click it and Unblock the Notifications