KRS Dam Water Level: ಕೆಆರ್‌ಎಸ್, ಕಬಿನಿ, ಆಲಮಟ್ಟಿ, ಲಿಂಗನಮಕ್ಕಿ, ತುಂಗಭದ್ರಾ ಡ್ಯಾಂಗಳಿಗೆ ಭಾರಿ ನೀರು!

ಮುಂಗಾರು ಮಳೆ ಅಬ್ಬರದ ಹಿನ್ನೆಲೆಯಲ್ಲಿ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದರಲ್ಲೂ ಕೆಆರ್‌ಎಸ್ & ಕಬಿನಿ, ಆಲಮಟ್ಟಿ, ಲಿಂಗನಮಕ್ಕಿ, ತುಂಗಭದ್ರಾ ಡ್ಯಾಂಗಳಿಗೆ ಭಾರಿ ನೀರು ಹರಿದು ಬರುತ್ತಿದೆ. ಹಾಗಾದರೆ, ಇದೀಗ ಎಷ್ಟಿದೆ ಈ ಡ್ಯಾಂಗಳಲ್ಲಿ ನೀರಿನ ಪ್ರಮಾಣ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕಳೆದ 2 ವಾರಗಳಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬರುತ್ತಿದೆ. ಹೀಗೆ ಭಾರಿ ಮಳೆಯ ಕಾರಣಕ್ಕೆ ಕರ್ನಾಟಕದ ಮಲೆನಾಡು & ಕರಾವಳಿ ಜಿಲ್ಲೆಗಳ ಜನರು ನಲುಗಿ ಹೋಗಿದ್ದಾರೆ. ಇದು ಒಂದು ಕಡೆಯಾಗಿದ್ದರೆ ಮತ್ತೊಂದು ಕಡೆ ಭಾರಿ ಮಳೆಯ ಕಾರಣಕ್ಕೆ, ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾದ್ರೆ, ಈಗ ಎಷ್ಟಿದೆ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ? ಕೆಆರ್‌ಎಸ್ & ಕಬಿನಿ, ಆಲಮಟ್ಟಿ, ಲಿಂಗನಮಕ್ಕಿ, ತುಂಗಭದ್ರಾ ಡ್ಯಾಂಗಳಿಗೆ ಎಷ್ಟು ನೀರು ಹರಿದು ಬರುತ್ತಿದೆ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

KRS And Other Dams Water Level In Karnataka On 9th Of July 2024

ಕೆಆರ್‌ಎಸ್ ಜಲಾಶಯ ಫುಲ್?

ಕೆಆರ್‌ಎಸ್ ಜಲಾಶಯದಲ್ಲಿ ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗ 25.09 ಅಡಿ ನೀರು ಇದೆ. ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 11.69 ಟಿಎಂಸಿ ಅಡಿ ನೀರು ಇತ್ತು. 8,245 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಹಾಗೂ ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಭರ್ಜರಿ ಮಳೆ ನಿರೀಕ್ಷೆ ಇದ್ದು, ಡ್ಯಾಂಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ.

ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?

ಕಾವೇರಿ ನದಿಗೆ ಕಟ್ಟಿರುವ ಪ್ರಮುಖ ಡ್ಯಾಂಗಳ ಪೈಕಿ ಕಬಿನಿ ಕೂಡ ಒಂದಾಗಿದೆ. 19.52 ಟಿಎಂಸಿ ಅಡಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹ ಮಾಡಬಹುದು. ಕಬಿನಿ ಡ್ಯಾಂನಲ್ಲಿ 18.17 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 4,711 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಬಿನಿ ಡ್ಯಾಂ ಭಾಗಶಃ ಭರ್ತಿ ಆಗಿದೆ. ಇನ್ನೇನು ನಾಳೆ ಅಥವಾ ನಾಡಿದ್ದು ಸಂಪೂರ್ಣ ಫುಲ್ ಆಗುವ ಬಗ್ಗೆ ನಿರೀಕ್ಷೆ ಇದೆ.

ಹೇಮಾವತಿ ಡ್ಯಾಂಗೆ ಭರ್ಜರಿ ನೀರು!

ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈಗ ಡ್ಯಾಂಗೆ ಬರೋಬ್ಬರಿ 9,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಹೇಮಾವತಿ ಜಲಾಶಯದಲ್ಲಿ 19 ಟಿಎಂಸಿ ನೀರು ಸಂಗ್ರಹ ಆಗಿದೆ 2922 ಅಡಿ ಎತ್ತರ ಇರುವ ಈ ಡ್ಯಾಂಗೆ ಇದೀಗ 2898 ಅಡಿ ನೀರು ಬಂದಿದ್ದು, ಮಳೆ ಮುಂದುವರಿದರೆ ಜುಲೈ ಅಂತ್ಯಕ್ಕೆಲ್ಲಾ ಹೇಮಾವತಿ ಡ್ಯಾಂ ತುಂಬಿ ತುಳುಕುವ ಸಾಧ್ಯತೆ ದಟ್ಟವಾಗಿದೆ.

ತುಂಗ & ಭದ್ರಾ ಡ್ಯಾಂನಲ್ಲಿ ಎಷ್ಟು ನೀರು?

ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿರುವ ತುಂಗಾ ಡ್ಯಾಂಗೆ ಈಗ 17,049 ಕ್ಯುಸೆಕ್ ಒಳ ಹರಿವು ಇದ್ದು, ಒಟ್ಟು 3.25 ಟಿಎಂಸಿ ಸಾಮರ್ಥ್ಯದ ಈ ಡ್ಯಾಂ ಈಗ ಪೂರ್ತಿ ತುಂಬಿದೆ. ಜೊತೆಗೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್‌ಪಿಯ ಭದ್ರಾ ಜಲಾಶಯ ಕೂಡ ಇದೀಗ ತುಂಬಿ ತುಳುಕಲು ಶುರು ಮಾಡಿದ್ದು, ಡ್ಯಾಂಗೆ ಒಳ ಹರಿವು 8,777 ಕ್ಯುಸೆಕ್ ಇದೆ. ಹಾಗೇ 186 ಅಡಿ ಗರಿಷ್ಠ ಮಟ್ಟ ಹೊಂದಿರುವ ಈ ಡ್ಯಾಂನಲ್ಲಿ ಈಗ ಬರೋಬ್ಬರಿ 133 ಅಡಿ ನೀರು ಸಂಗ್ರಹ ಆಗಿದೆ. ಹಾಗೇ 22.436 ಟಿಎಂಸಿ ನೀರು ಇದೆ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ಕೃಷ್ಣಾ ನದಿಗೆ ಕರ್ನಾಟಕದಲ್ಲಿ ಬೃಹತ್ ಡ್ಯಾಂ ಕಟ್ಟಲಾಗಿದ್ದು, ಈಗ ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರ ಕೂಡ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿದ್ದು, ಸದ್ಯ ಆಲಮಟ್ಟಿ ಡ್ಯಾಂಗೆ 60,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಈಗ 65 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 123.08 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ತಿ ತುಂಬುವ ಬಗ್ಗೆ ನಿರೀಕ್ಷೆ ಇದೆ. ಅದರಲ್ಲೂ ಕೃಷ್ಣಾ ನದಿ ಕೊಳ್ಳದಲ್ಲಿ ಭಾರಿ ಮಳೆ ಆಗುತ್ತಿದ್ದು, ಪರಿಸ್ಥಿತಿಯ ಮತ್ತಷ್ಟು ಕಠಿಣವಾಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+