KRS Dam: ಮತ್ತೆ ಭರ್ತಿಯಾದ ಕೆಆರ್‌ಎಸ್; ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡು ಮತ್ತು ಪುದುಚೆರಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕರ್ನಾಟಕದಲ್ಲಿ ಕೂಡ ಉತ್ತಮ ಮಳೆಯಾಗಿದೆ. ಇನ್ನೂ ಎರಡು ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳ ಒಳಹರಿವು ಮತ್ತೆ ಹೆಚ್ಚಿದ್ದು, ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗಿದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಆರ್ಭಟ ಜೋರಾಗಿದ್ದ ಕಾರಣ, ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಈ ಬಾರಿ ಬೇಸಿಗೆಯಲ್ಲಿ ಕೃಷಿಗೆ ಮತ್ತು ಕುಡಿಯುವ ನೀರಿಗೆ ರಾಜ್ಯದಲ್ಲಿ ಸಮಸ್ಯೆ ಇರುವುದಿಲ್ಲ ಎನ್ನಲಾಗಿದೆ. ರೈತರಿಗೆ ಎರಡನೇ ಬೆಳೆಗೆ ನೀರು ಬಿಡುವುದಾಗಿ ಸಿಎಂ ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದಾರೆ.

ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯ ಕೆಆರ್ ಎಸ್ ಮತ್ತೊಮ್ಮೆ ಭರ್ತಿಯಾಗಿದ್ದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ತಮಿಳುನಾಡಿಗೆ ಈಗಾಗಲೇ ನಿಗದಿ ಮಾಡಿದಷ್ಟು ನೀರು ಹರಿಸಲಾಗಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಹುತೇಕ ಬಗೆಹರಿಯಲಿದೆ.
ವಿವಿಧ ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 554 ಮೀಟರ್/ 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 552.27 ಮೀಟರ್ / 129.21 ಟಿಎಂಸಿ
ಒಳಹರಿವು: 2105 ಕ್ಯೂಸೆಕ್ಸ್
ಹೊರಹರಿವು: 3685 ಕ್ಯೂಸೆಕ್ಸ್
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 560.29 ಮೀಟರ್ / 130.75 ಟಿಎಂಸಿ
ಒಳಹರಿವು: 1 ಕ್ಯೂಸೆಕ್ಸ್
ಹೊರಹರಿವು: 4066 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 592.02 ಮೀಟರ್ / 26.69 ಟಿಎಂಸಿ
ಒಳಹರಿವು: 0
ಹೊರಹರಿವು: 0
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2859 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2836.49 ಅಡಿ / 3.80 ಟಿಎಂಸಿ
ಒಳಹರಿವು: 495 ಕ್ಯೂಸೆಕ್ಸ್
ಹೊರಹರಿವು: 200 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2910.65 ಅಡಿ / 27.18 ಟಿಎಂಸಿ
ಒಳಹರಿವು: 2985 ಕ್ಯೂಸೆಕ್ಸ್
ಹೊರಹರಿವು: 3770 ಕ್ಯೂಸೆಕ್ಸ್
ಕೆಆರ್ ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ: 124.80 ಅಡಿ / 49.45 ಟಿಎಂಸಿ
ಇಂದಿನ ನೀರಿನ ಮಟ್ಟ: 124.80 ಅಡಿ / 49.45 ಟಿಎಂಸಿ
ಒಳಹರಿವು: 3577 ಕ್ಯೂಸೆಕ್ಸ್
ಹೊರಹರಿವು: 3367 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2280.15 ಅಡಿ / 17.13 ಟಿಎಂಸಿ
ಒಳಹರಿವು: 1127 ಕ್ಯೂಸೆಕ್ಸ್
ಹೊರಹರಿವು: 575 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2154.08 ಅಡಿ / 66.69 ಟಿಎಂಸಿ
ಒಳಹರಿವು: 732 ಕ್ಯೂಸೆಕ್ಸ್
ಹೊರಹರಿವು: 431 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1629.51 ಅಡಿ / 92.24 ಟಿಎಂಸಿ
ಒಳಹರಿವು: 4531 ಕ್ಯೂಸೆಕ್ಸ್
ಹೊರಹರಿವು: 5390 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2169.75 ಅಡಿ / 46.89 ಟಿಎಂಸಿ
ಒಳಹರಿವು: 0
ಹೊರಹರಿವು: 5369 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079.50 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2077.16 ಅಡಿ / 34.53 ಟಿಎಂಸಿ
ಒಳಹರಿವು: 0
ಹೊರಹರಿವು: 2241 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519.60 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 518.95 ಮೀಟರ್ / 112.62 ಟಿಎಂಸಿ
ಒಳಹರಿವು: 0
ಹೊರಹರಿವು: 636 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 491.06 ಮೀಟರ್ / 28.21 ಟಿಎಂಸಿ
ಒಳಹರಿವು: 247 ಕ್ಯೂಸೆಕ್ಸ್
ಹೊರಹರಿವು: 247 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2138.75 ಅಡಿ / 29.34 ಟಿಎಂಸಿ
ಒಳಹರಿವು: 462 ಕ್ಯೂಸೆಕ್ಸ್
ಹೊರಹರಿವು: 133 ಕ್ಯೂಸೆಕ್ಸ್












Click it and Unblock the Notifications