KRS Dam: ಕೆಆರ್‌ಎಸ್ & ಆಲಮಟ್ಟಿ & ಹೇಮಾವತಿ ಜಲಾಶಯಗಳಿಗೆ ಭರ್ಜರಿ ನೀರು!
ಮುಂಗಾರು ಮಳೆ ಕನ್ನಡ ನಾಡಲ್ಲಿ ಅಬ್ಬರ ತೋರಿಸುತ್ತಿದ್ದು ಈಗ ಕರ್ನಾಟಕದ ಬಹುತೇಕ ಎಲ್ಲ ಜಲಾಶಯಗಳಿಗೂ ಭರ್ಜರಿ ನೀರು ಹರಿದು ಬರುತ್ತಿದೆ. ಕಳೆದ 3 ವಾರಗಳಿಂದ ಕರ್ನಾಟಕದ ನದಿಗಳ ಜನ್ಮಸ್ಥಳ ಮಲೆನಾಡು ಭಾಗದಲ್ಲಿ ಭಾರಿ ಮಳೆ ಬೀಳುತ್ತಿರುವ ಕಾರಣಕ್ಕೆ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಹಾಗಾದ್ರೆ ಕರ್ನಾಟಕದ ಕೆಆರ್‌ಎಸ್ ಡ್ಯಾಂ, ಆಲಮಟ್ಟಿ ಡ್ಯಾಂ ಸೇರಿ ಯಾವ ಯಾವ ಜಲಾಶಯದಲ್ಲಿ ಎಷ್ಟಿದೆ ನೀರಿನ ಮಟ್ಟ? ಎಷ್ಟು ನೀರು ಹರಿದು ಒಳಗೆ ಬರುತ್ತಿದೆ? ಬನ್ನಿ ತಿಳಿಯೋಣ.
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು ಹೀಗಾಗಿಯೇ ಎಲ್ಲೆಲ್ಲೂ ಭಾರಿ ಮಳೆ ಬೀಳುತ್ತಿದೆ. ಕರಾವಳಿ & ಮಲೆನಾಡು ಕರ್ನಾಟಕದಲ್ಲಿ ಮಾತ್ರ ಅಲ್ಲ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಭಾಗದಲ್ಲಿ ಕೂಡ ಮಳೆರಾಯ ಅಬ್ಬರಿಸಿದ್ದು ಎಲ್ಲೆಲ್ಲೂ ನೀರೆ ಕಾಣುತ್ತಿದೆ ಈ ರೀತಿ ಪರಿಸ್ಥಿತಿ ಇದ್ದಾಗ ಮುಂದಿನ 48 ಗಂಟೆ ಕಾಲ ಅಂದ್ರೆ 2 ದಿನಗಳ ಕಾಲ ಮತ್ತಷ್ಟು ರಣಭೀಕರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಡ್ಯಾಂಗಳಿಗೆ ಭಾರಿ ನೀರು!
ಈ ನಡುವೆ ಕರ್ನಾಟಕದ ಡ್ಯಾಂಗಳಿಗೆ ಊಹೆಗೆ ಮೀರಿ ಮಳೆ ನೀರು ಹರಿದು ಬರ್ತಿದೆ. ಹಾಗಾದರೆ ಇದೀಗ ಕರ್ನಾಟಕದ ಡ್ಯಾಂಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ? ಕೆಆರ್‌ಎಸ್, ಆಲಮಟ್ಟಿ ಸೇರಿ ಹೇಮಾವತಿ, ಕಬಿನಿ ಮತ್ತು ಕರ್ನಾಟಕ ರಾಜ್ಯದ ಇತರ ಡ್ಯಾಂಗಳಿಗೆ ಇದೀಗ ಎಷ್ಟು ನೀರು ಹರಿದು ಬರುತ್ತಿದೆ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಕೆಆರ್‌ಎಸ್ ಡ್ಯಾಂ ಫುಲ್ ಆಯ್ತಾ?
49.45 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಕೆಆರ್‌ಎಸ್ ಡ್ಯಾಂನಲ್ಲಿ ಈಗ 26.4 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷ ಈ ಸಮಯಕ್ಕೆ ಕೇವಲ 13 ಟಿಎಂಸಿ ಅಡಿ ನೀರು ಇತ್ತು. 6,146 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಭರ್ಜರಿ ಮಳೆ ನಿರೀಕ್ಷೆ ಇದ್ದು ಡ್ಯಾಂಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. 124.80 ಅಡಿ ಎತ್ತರದ ಕೆಆರ್‌ಎಸ್ ಜಲಾಶಯದಲ್ಲಿ ಈಗ 104.30 ಅಡಿ ನೀರು ಸಂಗ್ರಹ ಆಗಿದೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
ಆಲಮಟ್ಟಿ ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರ ಕೂಡ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿದ್ದು, ಆಲಮಟ್ಟಿ ಡ್ಯಾಂಗೆ 84,645 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಇದೀಗ 78.618 ಟಿಎಂಸಿ ನೀರು ಸಂಗ್ರಹ ಆಗಿದೆ. ಒಟ್ಟು 123.08 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಡ್ಯಾಂ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ತಿ ತುಂಬುವ ನಿರೀಕ್ಷೆ ಇದೆ. ಅದರಲ್ಲೂ, ಕೃಷ್ಣಾ ನದಿ ಕೊಳ್ಳದಲ್ಲಿ ಭಾರಿ ಮಳೆ ಆಗುತ್ತಿದ್ದು ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತಿದೆ.












Click it and Unblock the Notifications