Get Updates
Get notified of breaking news, exclusive insights, and must-see stories!

ನೆರೆಯ ರಾಜ್ಯದಿಂದ ಕರ್ನಾಟಕದೊಂದಿಗೆ ಹೊಸ ಕಿರಿಕ್‌!

ಭಾಷೆ ಹಾಗೂ ಗಡಿ ವಿವಾದಗಳ ನಡುವೆ ಇದೀಗ ಮಹಾರಾಷ್ಟ್ರ - ಕರ್ನಾಟಕಕ್ಕೆ ಹೊಸ ತಲೆನೋವೊಂದನ್ನು ತಂದಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಬೆಳಗಾವಿ ಗಡಿ ವಿವಾದ ಇದೆ. ಹಲವು ದಶಕಗಳಿಂದ ನೆರೆಯ ರಾಜ್ಯವು ಈ ವಿಚಾರದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಲ್ಲೇ ಇದೆ. ಈ ರೀತಿ ಇರುವಾಗಲೇ ಹೊಸ ತಲೆನೋವೊಂದನ್ನು ಮಹಾರಾಷ್ಟ್ರ ತಂದಿದೆ. ವಿವಿಧ ರಾಜ್ಯಗಳೊಂದಿಗೆ ಕರ್ನಾಟಕ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದರೂ, ನೆರೆಯ ರಾಜ್ಯಗಳಿಂದ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲ್ಲೇ ಇವೆ. ಇದೀಗ ನಟ ಕಮಲ್‌ ಹಾಸನ್‌ ಅವರು ಕೊಟ್ಟಿರುವ ಹೇಳಿಕೆಯು ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಅನವಶ್ಯಕವಾಗಿ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಜ್ಯದ ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ನೆರೆಯ ರಾಜ್ಯದವರು ಗೊಂದಲಗಳನ್ನು ಸೃಷ್ಟಿ ಮಾಡುವುದು ಮುಂದುವರಿದಿವೆ. ಇದಕ್ಕೆ ಮಹಾರಾಷ್ಟ್ರ ಹೊಸ ಸೇರ್ಪಡೆ.

ರಾಜ್ಯದೊಂದಿಗೆ ಇಷ್ಟು ದಿನಗಳ ಕಾಲ ಗಡಿ ವಿವಾದ ಸೃಷ್ಟಿಸಿದ್ದ ಮಹಾರಾಷ್ಟ್ರವು ಇದೀಗ ಜಲ ವಿವಾದದೊಂದಿಗೆ ಬಂದಿದೆ. ಹೌದು ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ದಶಕಗಳಿಂದ ಗಡಿ ವಿವಾದ ಇದೆ. ಆದರೆ ಇದೀಗ ಎಂದೂ ಇಲ್ಲದ ಹೊಸ ಜಲ ವಿವಾದವನ್ನು ಅಲ್ಲಿನ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಂದೊಡ್ಡಿದೆ. ಇದೀಗ ಆಲಮಟ್ಟಿ ಅಣೆಕಟ್ಟೆಗೆ ಮಹಾರಾಷ್ಟ್ರ ಅಡ್ಡಗಾಲಾಕಿದ್ದು ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಪತ್ರ ಬರೆದಿದ್ದಾರೆ.

Krishna-Alamatti water crisis from Maharashtra new rift with Karnataka

ಕೃಷ್ಣಾ ನ್ಯಾಯಮಂಡಳಿ ತೀರ್ಪಿನಂತೆ ಅಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವುದಕ್ಕೆ ಕರ್ನಾಟಕ ಸರ್ಕಾರವು ಮುಂದಾಗಿದೆ. ಆದರೆ, ಇದಕ್ಕೆ ಮಹಾರಾಷ್ಟ್ರ ಇದೇ ಮೊದಲ ಬಾರಿ ಆಕ್ಷೇಪಣೆ ವ್ಯಕ್ತಪಡಿಸಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ ಎತ್ತರಕ್ಕೇರಿಸುವುದಕ್ಕೆ ಹಲವು ವರ್ಷಗಳಿಂದ ಕಾಯುತ್ತಿದೆ. ಆದರೆ, ಇದಕ್ಕೆ ಮಹಾರಾಷ್ಟ್ರ ದುರುದ್ದೇಶದಿಂದ ತಡೆಯೊಡ್ಡುತ್ತಿದೆ.

ಈ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರವು ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿದರೆ, ಇದರಿಂದ ಮಹಾರಾಷ್ಟ್ರದ ಜಿಲ್ಲೆಗಳಾದ ಸಾಂಗ್ಲಿ ಹಾಗೂ ಕೊಲ್ಲಾಪುರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಕರ್ನಾಟಕ ಸರ್ಕಾರವು ತನ್ನ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಅನ್ವಯ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕಿದೆ. ಆದರೆ, ನ್ಯಾಯಮಂಡಳಿ ತೀರ್ಪು ಕೊಟ್ಟ ಸಂದರ್ಭದಲ್ಲಿ ಮಹಾರಾಷ್ಟ್ರ ಸುಮ್ಮನಿತ್ತು ಈಗ ಯಾಕೆ ಈ ರೀತಿ ಪ್ರಶ್ನೆ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಸಹ ಪ್ರಶ್ನೆ ಮಾಡಿದ್ದಾರೆ.

ಈ ಯೋಜನೆಯಿಂದಾಗಿ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಭಾಗದ ಜನರಿಗೆ ಹಾಗೂ ಸಾವಿರಾರು ಹಳ್ಳಿಗಳಿಗೆ ಲಾಭವಾಗಲಿದೆ ಎಂದು ಅಂದಾಜಿದೆ. ಮುಖ್ಯವಾಗಿ ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೂ ಮಹಾರಾಷ್ಟ್ರ ಅಡ್ಡಿಪಡಿಸುತ್ತಿದೆ. ಈಗಾಗಲೇ ಯೋಜನೆ ವೆಚ್ಚವು ಹಲವು ಕೋಟಿ ಹೆಚ್ಚಾಗಿದೆ. ಇದೇ ಮುಂದುವರಿದರೆ ಕರ್ನಾಟಕಕ್ಕೆ ಇನ್ನಷ್ಟು ಹೊರೆ ಆಗುವುದು ಖಚಿತ ಅಂತಲೇ ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+