ಕೆಪಿಎಸ್‌ಸಿ ಭರ್ತಿ ಮಾಡುವ 440 ಹುದ್ದೆಗಳ ವಿವರ ಇಲ್ಲಿದೆ

ಬೆಂಗಳೂರು, ಜ. 24 : ಕರ್ನಾಟಕ ಲೋಕಸೇವಾ ಆಯೋಗ 'ಎ' ಮತ್ತು 'ಬಿ' ಶ್ರೇಣಿಯ 440 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ­ಗಾಗಿ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ ಫೆಬ್ರವರಿ 20.

ಏಪ್ರಿಲ್‌ 19ರಂದು ಪೂರ್ವಭಾವಿ ಪರೀಕ್ಷೆ ನಡೆಯ­ಲಿದ್ದು, ಆನ್‌ಲೈನ್‌ ಮೂಲಕ ಫೆಬ್ರುವರಿ 20ರ ರಾತ್ರಿ 11.45ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಕಲ್ಪಿಸಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಗುಲ್ಬರ್ಗ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿಯಲ್ಲಿ ಪರೀಕ್ಷೆಗಳು ನಡೆಯಲಿವೆ.

Karnataka Public Service Commission

ಖಾಲಿ ಇರುವ ಹುದ್ದೆಗಳು : ಗ್ರೂಪ್ 'ಎ' ವಿಭಾಗದಲ್ಲಿ ಸಹಾಯಕ ಆಯುಕ್ತರು 60, ಉಪ ಪೊಲೀಸ್ ಅಧೀಕ್ಷರು 38, ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್ ಇಲಾಖೆ) 26, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ 7, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ 3, ಸಹಾಯಕ ಆಯುಕ್ತರು (ವಾಣಿಜ್ಯ ತೆರಿಗೆ ಇಲಾಖೆ) 55 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. [ಅರ್ಜಿ ಸಲ್ಲಿಸುವ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಗ್ರೂಪ್ 'ಬಿ' : ತಹಶೀಲ್ದಾರ್ 114, ವಾಣಿಜ್ಯ ತೆರಿಗೆ ಅಧಿಕಾರಿ 58, ಸಹಾಯಕ ನಿರ್ದೇಶಕರು (ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ) 14, ತಾಲೂಕು ಸಮಾಜ ಕಲ್ಯಾಣಾಧಿಕಾರಿ 45, ಸಹಾಯಕ ಖಜಾನೆ ಅಧಿಕಾರಿ 5, ಸಹಾಯಕ ಅಧೀಕ್ಷಕರು ಕಾರಾಗೃಹ 9, ಸಹಾಯಕ ನಿರ್ದೇಶಕರು (ಪ್ರವಾಸೋದ್ಯಮ ಇಲಾಖೆ) 2, ಸಹಾಯಕ ನಿರ್ದೇಶಕರು (ಕೃಷಿ ಇಲಾಖೆ) 1, ಸಹಾಯಕ ನಿರ್ದೇಶಕರು (ಯುವಜನ ಮತ್ತು ಕ್ರೀಡಾ ಇಲಾಖೆ) 3 ಹುದ್ದೆಗಳಿವೆ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್‌ಡಿ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. [440 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ]

ವಯೋಮಿತಿ : ಅರ್ಜಿ ಸಲ್ಲಿಸುವ ಸಾಮಾನ್ಯ ಎಲ್ಲಾ ಅಭ್ಯರ್ಥಿಗಳಿಗೆ 20/02/2015ಕ್ಕೆ ಅನ್ವಯವಾಗುವಂತೆ 21 ವರ್ಷ ಪೂರ್ಣಗೊಂಡಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ. 2ಎ/2ಬಿ/3ಎ/3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ.

ಪರೀಕ್ಷಾ ಶುಲ್ಕ : ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ 25 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇತರ ಅಭ್ಯರ್ಥಿಗಳಿಗೆ 300 ರೂ. ಪರೀಕ್ಷಾ ಶುಲ್ಕವಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯದಲ್ಲಿರುವ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಮಾತ್ರ ಶುಲ್ಕ ಪಾವತಿ ಮಾಡಲು ಅವಕಾಶವಿದೆ. ಶುಲ್ಕ ಪಾವತಿ ಮಾಡಲು ಕೊನೆಯ ದಿನ ಫೆಬ್ರವರಿ 21. ಅರ್ಜಿ ಸಲ್ಲಿಸಲು http://kpsc.kar.nic.in/GP2014.htm ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+