ಎಫ್‌ಡಿಎ, ಎಸ್‌ಡಿಎ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಸೆ. 16 : ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 3, 4 ಮತ್ತು 18ರಂದು ಪರೀಕ್ಷೆಗಳು ನಡೆಯಲಿದೆ.
ಸಹಾಯಕರು/ಪ್ರಥಮ ದರ್ಜೆ ಸಹಾಯಕರು, ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರು ಹಾಗೂ ಆಹಾರ ನಾಗರೀಕ ಸರಬರಾಜು ನಿಗಮ (ನಿ)ದಲ್ಲಿನ ಹಿರಿಯ ಸಹಾಯಕರು ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. [ಉತ್ತರ ಕನ್ನಡದಲ್ಲಿ ಕೆಲಸ ಖಾಲಿ ಇದೆ]

ಪರೀಕ್ಷೆ ವೇಳಾಪಟ್ಟಿ : ಅಕ್ಟೋಬರ್ 3ರಂದು ಬೆಳಗ್ಗೆ 10 ರಿಂದ 11.30ರ ತನಕ ಪತ್ರಿಕೆ - 4 ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ , ಮಧ್ಯಾಹ್ನ 2 ರಿಂದ 3.30ರ ತನಕ ಪತ್ರಿಕೆ - 1 : ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. [ಬಿಇಎಂಎಲ್ ನಲ್ಲಿ 43 ಹುದ್ದೆಗಳಿಗೆ ಅರ್ಜಿ ಆಹ್ವಾನ]
ಅಕ್ಟೋಬರ್ 4ರಂದು ಬೆಳಗ್ಗೆ 10 ರಿಂದ 11.30ರ ತನಕ ಪತ್ರಿಕೆ 3 ಸಾಮಾನ್ಯ ಜ್ಞಾನ. ಮಧ್ಯಾಹ್ನ 2 ರಿಂದ 3.30ರ ತನಕ ಪತ್ರಿಕೆ 2 ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.
ಆಹಾರ ನಾಗರೀಕ ಸರಬರಾಜು ನಿಗಮ : ಅಕ್ಟೋಬರ್ 3ರಂದು ಬೆಳಗ್ಗೆ 10 ರಿಂದ 11.30ರ ತನಕ ಪತ್ರಿಕೆ - 4 ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ, ಮಧ್ಯಾಹ್ನ 2 ರಿಂದ 3.30ರ ತನಕ ಪತ್ರಿಕೆ - 1 : ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ.
ಅಕ್ಟೋಬರ್ 18ರಂದು ಬೆಳಗ್ಗೆ 10 ರಿಂದ 11.30ರ ತನಕ ಪತ್ರಿಕೆ - 3 ಸಾಮಾನ್ಯ ಜ್ಞಾನ ಪರೀಕ್ಷೆ, 2 ರಿಂದ 3.30ರ ತನಕ ಪತ್ರಿಕೆ - 2 ಸಾಮಾನ್ಯ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ. [ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ]












Click it and Unblock the Notifications