ಕೊಪ್ಪಳ : ವಿದೇಶಿಯರ ಜೊತೆ ಅಸಭ್ಯ ವರ್ತನೆ, ಇಬ್ಬರು ಪೇದೆಗಳು ಸಸ್ಪೆಂಡ್
ಕೊಪ್ಪಳ, ಮಾ.9 : ವಿದೇಶಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಪೇದೆ ಮತ್ತು ನಾಲ್ವರು ಹೋಂ ಗಾರ್ಡ್‌ಗಳನ್ನು ಅಮಾನತುಗೊಳಿಸಿ ಕೊಪ್ಪಳ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಎಸ್ಪಿ ಪಿ.ರಾಜಾ ಅವರು ಸೋಮವಾರ ಈ ಆದೇಶ ಹೊರಡಿಸಿದ್ದಾರೆ. ಹೋಳಿ ಹಬ್ಬದ ದಿನ ವಿರೂಪಾಪುರ ಗೆಡ್ಡೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಮತ್ತು ನಾಲ್ವರು ಹೋಂಗಾರ್ಡ್‌ಗಳು ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಗಂಗಾವತಿ ಠಾಣೆಗೆ ಮಹಿಳೆಯರು ದೂರು ನೀಡಿದ್ದರು.

ದೂರಿನ ಅನ್ವಯ ಗಂಗಾವತಿ ಠಾಣೆಯ ಪೇದೆಗಳಾದ ಅಮೃತ್ ರಾಜೇಶ್ ಗೌಳಿ ಮತ್ತು ರೇವಪ್ಪ ಮತ್ತು ನಾಲ್ವರು ಹೋಂಗಾರ್ಡ್‌ಗಳನ್ನು ಅಮಾನತುಗೊಳಿಸಿ ಎಸ್ಪಿ ಪಿ.ರಾಜಾ ಆದೇಶ ಹೊರಡಿಸಿದ್ದಾರೆ. [ಏ.11ರಿಂದ ಎರಡು ದಿನಗಳ ಕಾಲ ಆನೆಗೊಂದಿ ಉತ್ಸವ]
ಹೋಳಿ ಹಬ್ಬದ ದಿನ ಭದ್ರತೆಗಾಗಿ ಇವರನ್ನು ನಿಯೋಜನೆ ಮಾಡಲಾಗಿತ್ತು. ಮಧ್ಯಾಹ್ನ ಮೂರು ಗಂಟೆಯ ವೇಳೆಯಲ್ಲಿ ಹೋಳಿ ಆಡುತ್ತಿದ್ದ ಮಹಿಳೆಯರ ಬಳಿ ಬಂದ ಪೇದೆ ಮತ್ತು ಹೋಂಗಾರ್ಡ್‌ಗಳು ಅವರನ್ನು ನಿಂದಿಸಿದ್ದಾರೆ ಮತ್ತು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುದು ಆರೋಪವಾಗಿದೆ.












Click it and Unblock the Notifications