Kodi shree: ಕೋಡಿಶ್ರೀಗಳ ಶಾಕಿಂಗ್ ಭವಿಷ್ಯ: ದಕ್ಷಿಣ ಭಾರತದಲ್ಲಿ ಪ್ರವಾಹ,ಯುದ್ಧ; ಆಹಾರಕ್ಕೂ ಸಂಕಷ್ಟ?, ಮಳೆ ಬರುತ್ತಾ

Kodishrees Shocking Prediction: ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತಕ್ಕೆ ಈ ವರ್ಷ ಸಂಕಷ್ಟ ಇರಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿರುವ ಅವರು, ಈ ವರ್ಷದ ಭವಿಷ್ಯ ಮತ್ತು ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಮುಂಗಾರು ಮಳೆ ವಿರಳ, ಜನ ಜಂಗುಳಿ ಆಗುತ್ತದೆ. ಸಮುದ್ರಗಳು ನುಗ್ಗ್ಯಾವು, ಊರುಗಳು ಮುಳುಗ್ಯಾವು! ಎಂದು ಕೋಡಿಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ 10ರ ಗುರುವಾರ ಕೋಡಿಶ್ರೀಗಳು ಕೊಟ್ಟಿರುವ ಎಚ್ಚರಿಕೆ ಏನು ಹಾಗೂ ಈ ವರ್ಷದ ಭವಿಷ್ಯವೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಮುಂದಿನ ದಿನಗಳಲ್ಲಿ ಸಾವು - ನೋವುಗಳು ಹೆಚ್ಚಾಗಲಿವೆ. ವಿಪರೀತವಾದ ಪ್ರವಾಹ ಬರುವ ಸಾಧ್ಯತೆ ಇದೆ. ಅಲ್ಲದೆ ನೇಪಾಳದ ಮಾದರಿಯಲ್ಲೇ ದಕ್ಷಿಣ ಭಾರತದಲ್ಲೂ ಸಂಕಷ್ಟ ಎದುರಾಗಲಿದೆ ಎಂದು ಕೋಡಿಶ್ರೀಗಳು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಯುದ್ಧ, ಸಮಸ್ಯೆ ಹಾಗೂ ಪ್ರವಾಹ ಸೇರಿ ಹಲವಾರು ಅಪಾಯಗಳಿವೆ ಎನ್ನುವ ಬಗ್ಗೆಯೂ ಶ್ರೀಗಳು ಭವಿಷ್ಯ ನುಡಿದಿದ್ದಾರು. ದಕ್ಷಿಣ ಭಾರತದಲ್ಲಿ ನೇಪಾಳದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದಿರುವುದು ಶಾಕಿಂಗ್ ವಿಚಾರವಾಗಿದೆ.

Kodishrees Shocking Prediction Floods War in South India Food Crisis Ahead What new

ಮುಂದಿನ ದಿನಗಳಲ್ಲಿ ಭೀಕರ ಯುದ್ಧ ಸಂಭವಿಸಲಿದೆ. ಜನ ನಿಯಂತ್ರಣ ತಪ್ಪಲಿದೆ ಪ್ರಕೃತಿ ವಿಕೋಪಗಳು ಸಂಭವಿಸಲಿವೆ. ದಕ್ಷಿಣ ಭಾರತದಲ್ಲಿಯೂ ಸಹ ನೇಪಾಳದಲ್ಲಿ ಸಂಭವಿಸಿದಂತೆಯೇ ಜಲ ಪ್ರಳಯ / ಪ್ರವಾಹ ಆಗಲಿದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ. ನೇಪಾಳದಲ್ಲಿ ಈಚೆಗೆ ಭೀಕರ ಪ್ರವಾಹ ಸಂಭವಿಸಿತ್ತು. ಈ ಪ್ರವಾಹವು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲೂ ಆತಂಕವನ್ನುಂಟು ಮಾಡಿತ್ತು. ಆದರೆ, ಇದೀಗ ದಕ್ಷಿಣ ಭಾರತಕ್ಕೆ ಮುಂದಿನ ದಿನಗಳಲ್ಲಿ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Kodishrees Shocking Prediction: ಅನ್ನ - ಆಹಾರಕ್ಕೂ ಸಂಕಷ್ಟ ಎದುರಾಗಲಿದೆ!

ಇನ್ನು ಅನ್ನ - ಆಹಾರಕ್ಕೂ ಸಂಕಷ್ಟ ಎದುರಾಗಲಿದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಮುಂಗಾರು ಮಳೆ ಕೊರತೆಯಿಂದ ಮುಂದಿನ ಕೆಲವು ದಿನಗಳ ವರೆಗೆ ಸಂಕಷ್ಟ ಎದುರಾಗಲಿದೆ. ಮುಂಗಾರು ಮಳೆ ಕೊರತೆಯಾದರೂ ಹಿಂಗಾರು ಮಳೆ ಉತ್ತಮವಾಗಿ ಆಗಲಿದೆ. ಹಿಂಗಾರು ಮಳೆ ಶುಭವಾಗಲಿದೆ. ನೇಪಾಳದಂತೆ ದಕ್ಷಿಣ ಭಾರತದಲ್ಲೂ ಆಗುವ ಸಾಧ್ಯತೆ ಇದೆ. ಊರುಗಳು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿಯ ಬದಲಾವಣೆಯೂ ಕಾಣುತ್ತಿದೆ. ಸಜ್ಜನರು, ಬಡವರ ಪರವಾಗಿದ್ದಾರೆ ಅವರು ಮುಂದುವರಿಯಲಿ, ಅಶುಭ ಹೇಳಲ್ಲ ಅಂತಲೂ ಇದೇ ಸಂದರ್ಭದಲ್ಲಿ ಕೋಡಿಶ್ರೀಗಳು ಹೇಳಿದ್ದಾರೆ. ಪ್ರಕೃತಿ ವಿಕೋಪ, ಆಳುವವರ ವಿರುದ್ಧ ಜನ ಮುನಿಸಿಕೊಳ್ಳುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ ಎಂದೂ ಕೋಡಿಶ್ರೀಗಳು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಸಮುದ್ರದಿಂದ ಊರುಗಳೇ ಮುಳುಗುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+