ಕೋಲಾರ: ಹೆಂಡತಿ, ಮಕ್ಕಳಿಗೆ ವಿಷ ನೀಡಿದ ಸೈನಿಕ
ಕೋಲಾರ, ಮಾ. 14: ರಜೆ ಮೇಲೆ ಹುಟ್ಟೂರಿಗೆ ಆಗಮಿಸಿದ್ದ ಸೈನಿಕ ಹೆಂಡತಿ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದ ಕಾಮಧೇನಹಳ್ಳಿಯಲ್ಲಿ ನಡೆದಿರುವ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.
ಜಿಲ್ಲೆಯ ಕಾಮಧೇನಹಳ್ಳಿಯ 30 ವರ್ಷದ ಗಂಗಪ್ಪ ಹೆಂಡತಿ ಮಕ್ಕಳಿಗೆ ವಿಷ ನೀಡಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ದೀಪಾ(28). ಮಕ್ಕಳಾದ ನೇಹಾ(4) ಹಾಗೂ ಪ್ರೀತಂ(3) ಅವರು ವಿಷಪ್ರಾಶನದಿಂದ ಸಾವನ್ನಪ್ಪಿದ್ದಾರೆ.[ಬೆಂಗಳೂರು: ಒಂದೇ ಕುಟುಂಬದ 6 ಜನ ಆತ್ಮಹತ್ಯೆ]

ಹರಿಯಾಣದಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಗಂಗಪ್ಪ ಎರಡು ದಿನಗಳ ಹಿಂದೆ ಗೃಹಪ್ರವೇಶಕ್ಕಾಗಿ ಊರಿಗೆ ಆಗಮಿಸಿದ್ದರು. ಪತ್ನಿಯ ಅನೈತಿಕ ಸಂಬಂಧವೇ ಯೋಧ ಹೆಂಡತಿ ಮಕ್ಕಳಿಗೆ ವಿಷ ನೀಡಲು ಕಾರಣ ಎಂದು ಹೇಳಲಾಗಿದೆ.[ಸತ್ತಂತೆ ನಾಟಕವಾಡಲು ಹೋಗಿ ಹೆಣವಾದ]
ಮನೆಗೆ ಬಂದ ವೇಳೆ ಹೆಂಡತಿಯ ಅನೈತಿಕ ಸಂಭಂದದ ಬಗ್ಗೆ ಗಂಗಪ್ಪ ಅವರಿಗೆ ತಿಳಿದಿದೆ. ಶುಕ್ರವಾರ ರಾತ್ರಿ ಹೆಂಡತಿ ಮಕ್ಕಳಿಗೆ ವಿಷವುಣಿಸಿ, ನಂತರ ನೇಣಿಗೆ ಶರಣಾಗಿದ್ದಾರೆ. ಕೋಲಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications