ನಂದಿನಿ ಹಾಲಿನ ಲೀಟರ್‌ಗೆ 8 ರೂ. ಹೆಚ್ಚಳ: ಹೋಟೆಲ್‌ಗಳಲ್ಲಿ ಕಾಫಿ-ಟೀ ಮತ್ತಷ್ಟು ದುಬಾರಿ! ಯಾವ ಪ್ಯಾಕೆಟ್ ಹಾಲಿಗೆ ಎಷ್ಟು ದರ?

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನವೇ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಕೆಎಂಎಫ್ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಭರ್ಜರಿ 8 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಪರಿಷ್ಕೃತ ದರ ನವೆಂಬರ್ 1ರಿಂದಲೇ ಜಾರಿಗೆ ಬರಲಿದೆ.

ಶುಕ್ರವಾರ ಹಾಲು, ಮೊಸರು ಸೇರಿದಂತೆ ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿಯನ್ನ ಕೆಎಂಎಫ್ ಅಧಿಕೃತವಾಗಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ದರ ಏರಿಕೆಯು ಗ್ರಾಹಕರಿಗೆ ಹೊರೆಯಾಗಿದ್ದರೂ, ಹಾಲು ಉತ್ಪಾದಕ ರೈತರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶವನ್ನು ಹೊಂದಿದೆ.

KMF Nandini Milk Price Hike by Rs 8 in Karnataka New Rates from Nov 1 Coffee Tea to Cost More

ಗ್ರಾಹಕರಿಂದ ಪಡೆಯುವ ಹೆಚ್ಚುವರಿ 8 ರೂಪಾಯಿಯಲ್ಲಿ 7 ರೂಪಾಯಿಯನ್ನ ನೇರವಾಗಿ ರೈತರಿಗೆ ನೀಡಲು ರಾಜ್ಯದ 16 ಹಾಲು ಒಕ್ಕೂಟಗಳು ನಿರ್ಧರಿಸಿವೆ.

ರೈತರಿಗೆ ಸಿಗುವ ಹಣವೆಷ್ಟು?

ಹೊಸ ದರ ಜಾರಿಯಾದ ಬಳಿಕ ರೈತರಿಗೆ ಪ್ರತೀ ಲೀಟರ್ ಹಾಲಿಗೆ ಸಿಗುವ ದರದಲ್ಲಿ ಗಣನೀಯ ಏರಿಕೆಯಾಗಲಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ (DKMUL) ಅತಿ ಹೆಚ್ಚು ಅಂದರೆ 47.10 ರೂ. (ಪ್ರಸ್ತುತ 40.10 ರೂ.) ನೀಡಲಿದೆ. ಅದೇ ರೀತಿ ಬೆಂಗಳೂರು ಹಾಲು ಒಕ್ಕೂಟ (BAMUL) 43.15 ರೂ. (ಪ್ರಸ್ತುತ 36.15 ರೂ.), ಮೈಸೂರು ಒಕ್ಕೂಟ (MYMUL) 43.10 ರೂ., ತುಮಕೂರು (TUMUL) 43 ರೂ., ಚಿಕ್ಕಬಳ್ಳಾಪುರ (CHIMUL) 42.40 ರೂ., ಕೋಲಾರ (KOMUL) 42.20 ರೂ., ಮಂಡ್ಯ (MANMUL) 42.30 ರೂ. ದರವನ್ನು ರೈತರಿಗೆ ಪಾವತಿಸಲಿವೆ.

ಉಳಿದಂತೆ ಚಾಮರಾಜನಗರ 42.20 ರೂ., ಧಾರವಾಡ 42 ರೂ., ಹಾಸನ ಮತ್ತು ಹಾವೇರಿ ತಲಾ 41.50 ರೂ., ಕಲಬುರಗಿ-ಬೀದರ್-ಯಾದಗಿರಿ 41.41 ರೂ., ಶಿವಮೊಗ್ಗ 41.21 ರೂ., ರಾಯಚೂರು-ಬಳ್ಳಾರಿ-ಕೊಪ್ಪಳ 41.10 ರೂ., ಬೆಳಗಾವಿ 41 ರೂ. ಹಾಗೂ ವಿಜಯಪುರ ಒಕ್ಕೂಟ 40.40 ರೂ. ನಂತೆ ರೈತರಿಗೆ ಹಣ ನೀಡಲಿವೆ. ಒಟ್ಟಾರೆಯಾಗಿ ರಾಜ್ಯದ ಹಾಲು ಉತ್ಪಾದಕ ರೈತರಿಗೆ ಸರಾಸರಿ 42.24 ರೂ. ಸಿಗಲಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರ ನೀಡುವ 5 ರೂ. ಪ್ರೋತ್ಸಾಹ ಧನವೂ ನೇರವಾಗಿ ಅವರ ಖಾತೆಗೆ ಸೇರಿಕೊಳ್ಳಲಿದೆ.

ಬೆಂಗಳೂರು ಹೋಟೆಲ್ ಸಂಘದ ಪ್ರತಿಕ್ರಿಯೆ

ಹಾಲಿನ ದರದಲ್ಲಿ ಲೀಟರ್‌ಗೆ ಏಕಾಏಕಿ 8 ರೂ. ಹೆಚ್ಚಳ ಮಾಡಿರುವುದು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಹೋಟೆಲುಗಳ ಸಂಘ, "ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಿಸುವ ಕಾಫಿ, ಟೀ ಸೇರಿದಂತೆ ಎಲ್ಲಾ ಪಾನೀಯಗಳು ಮತ್ತು ತಿಂಡಿಗಳ ಬೆಲೆ ಹೆಚ್ಚಿಸುವುದು ನಮಗೆ ಅನಿವಾರ್ಯವಾಗಿದೆ" ಎಂದು ಕಳವಳ ವ್ಯಕ್ತಪಡಿಸಿದೆ.

ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೊಳ್ಳ ಅವರು ಮಾತನಾಡಿ, "ಕೇವಲ 2 ಅಥವಾ 3 ರೂ. ಹೆಚ್ಚಳ ಮಾಡಿದ್ದರೆ ನಾವು ಗ್ರಾಹಕರ ಮೇಲೆ ಆ ಹೊರೆ ಹಾಕುತ್ತಿರಲಿಲ್ಲ. ಆದರೆ 8 ರೂ. ಬೃಹತ್ ಏರಿಕೆಯಿಂದಾಗಿ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ

ಹಾಲಿನ ದರ ಹೆಚ್ಚಳವು ಪ್ರತಿದಿನ ಹಾಲು ಖರೀದಿಸುವ ಜನಸಾಮಾನ್ಯರಿಗೆ, ವಿಶೇಷವಾಗಿ ಪೌಷ್ಟಿಕಾಂಶದ ಅಗತ್ಯವಿರುವ ಗರ್ಭಿಣಿಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ದೊಡ್ಡ ಆರ್ಥಿಕ ಹೊಡೆತ ನೀಡಲಿದೆ. ಹೋಟೆಲ್ ಸಂಘವು ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದ್ದು, ಒಕ್ಕೂಟಗಳ ಆಡಳಿತಾತ್ಮಕ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ರೈತರಿಗೆ ಆರ್ಥಿಕ ನೆರವು ನೀಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದರೂ, ಏಕಾಏಕಿ ಇಷ್ಟು ದೊಡ್ಡ ಮೊತ್ತದ ದರ ಏರಿಕೆ ಮಾಡುವ ಮುನ್ನ ಜನಸಾಮಾನ್ಯರ ಹಿತದೃಷ್ಟಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+