ರಾಜ್ಯದಲ್ಲಿ ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ, ಜುಲೈ 24ರಿಂದಲೇ ಹೊಸ ದರ ಜಾರಿ, ಯಾವುದಕ್ಕೆ ಎಷ್ಟು? ಇಲ್ಲಿದೆ ವಿವರ
ಬೆಂಗಳೂರು, ಜುಲೈ 23: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದ್ದು, ಕೆಎಂಎಫ್ ನಂದಿನಿ ಉತ್ಪನ್ನಗಳಾದ ತುಪ್ಪ ಮತ್ತು ಬೆಣ್ಣೆಯ ದರವನ್ನು ಹೆಚ್ಚಳ ಮಾಡಲಾಲಾಗಿದೆ. ಈ ಪರಿಷ್ಕೃತ ದರಗಳು ಶುಕ್ರವಾರ ಅಂದರೆ ಜುಲೈ 24ರಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿವೆ ಎಂದು ತಿಳಿದುಬಂದಿದೆ.
ನಂದಿನಿ ತುಪ್ಪದ ಬೆಲೆ ಕೆ.ಜಿ.ಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 700 ರಿಂದ 715ಗೆ ಏರಿಕೆ ಆಗಿದೆ. ಹಾಗೂ ಬೆಣ್ಣೆಯ ದರವನ್ನು ಕೆ.ಜಿ.ಗೆ 22 ರೂಪಾಯಿ ಹೆಚ್ಚಳ ಮಾಡಲಾಗಿದೆ. ಜುಲೈ 24 ಪರಿಷ್ಕೃತ ದರ ಜಾರಿಗೆ ಬರಲಿದೆ. ಎಲ್ಲಾ ಕೆಎಂಎಫ್ ಮಳಿಗೆಗಳಲ್ಲಿಯೂ ಬೆಣ್ಣೆ ಮತ್ತು ತುಪ್ಪದ ದರ ಏರಿಕೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗೃಹ ಬಳಕೆ ಮತ್ತು ಹೋಟೆಲ್ ಉದ್ಯಮದ ಮೇಲೆಯೂ ಈ ಬೆಲೆ ಏರಿಕೆಯಿಂದ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಬೆಲೆ ಏರಿಕೆ ವಿವರ
* ನಂದಿನಿ ತುಪ್ಪ: ಪ್ರತಿ ಕೆ.ಜಿ.ಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈರೆಗೆ 700 ರೂಪಾಯಿ ಇದ್ದ ಒಂದು ಕೆ.ಜಿ. ತುಪ್ಪದ ಬೆಲೆ ಈಗ 715 ರೂಪಾಯಿ ಏರಿಕೆಯಾಗಿದೆ.
* ನಂದಿನಿ ಬೆಣ್ಣೆ: ಪ್ರತಿ ಕೆ.ಜಿ.ಗೆ 22 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ಹೊಸ ದರಗಳು ಜುಲೈ 24ರಿಂದ ಜಾರಿಗೆ ಬಂದಿದ್ದು, ರಾಜ್ಯದಾದ್ಯಂತ ಇರುವ ಎಲ್ಲಾ ನಂದಿನಿ ಡೈರಿ ಹಾಗೂ ಕೆಎಂಎಫ್ ಮಾರಾಟ ಮಳಿಗೆಗಳಲ್ಲಿ ಹೊಸ ದರವೇ ಅನ್ವಯ ಆಗಲಿದೆ.
ಉದ್ಯಮ, ಸಾರ್ವಜನಿಕರ ಮೇಲಾಗುವ ಪರಿಣಾಮಗಳು
ಈ ಬೆಲೆ ಏರಿಕೆಯು ಸಾಮಾನ್ಯ ಜನರ ತಿಂಗಳ ಮನೆ ಬಜೆಟ್ ಅನ್ನಷ್ಟೇ ಅಲ್ಲದೆ, ವಾಣಿಜ್ಯ ವಲಯವನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ಹೋಟೆಲ್, ಬೇಕರಿ ಹಾಗೂ ಸಿಹಿ ತಿಂಡಿ ತಯಾರಿಕಾ ಉದ್ಯಮಗಳು ನಂದಿನಿ ತುಪ್ಪ ಮತ್ತು ಬೆಣ್ಣೆಯನ್ನೇ ಅವಲಂಬಿಸಿದ್ದವು.
ಬೆಲೆ ಹೆಚ್ಛಾದ ಪರಿಣಾಮ ಮುಂದಿನ ದಿನಗಳಲ್ಲಿ ಹೋಟೆಲ್ ತಿಂಡಿಗಳು ಹಾಗೂ ಸಿಹಿ ತಿನಿಸುಗಳ ಬೆಲೆಯೂ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ ಕೆಎಂಎಫ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.


Click it and Unblock the Notifications
