ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Milk Price Hike : ನಂದಿನಿ ಹಾಲಿನ ದರ ಏರಿಕೆಗೆ ತಡೆ: ಸಿಎಂ ಸಭೆ ಬಳಿಕ ಮುಂದಿನ ನಿರ್ಧಾರ

|
Google Oneindia Kannada News

ಬೆಂಗಳೂರು, ನವೆಂಬರ್‌ 14: ಕೆಎಂಎಫ್ ನಂದಿನಿ ಹಾಲಿನ ದರವನ್ನು 3 ರೂಪಾಯಿ ಏರಿಸಿ ಆದೇಶ ಹೊರಡಿಸಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ನವೆಂಬರ್​ 20ರ ನಂತರ ಸಭೆ ಕರೆದು ನಿರ್ಧರಿಸುತ್ತೇವೆ. ಜನರಿಗೆ ಹೊರೆಯಾಗದ ರೀತಿಯಲ್ಲಿ ಹಾಲಿನ ದರ ಹೆಚ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಸದ್ಯ ಹಾಲಿನ ದರ ಏರಿಕೆಗೆ ತಡೆ ಹಿಡಿಯಲಾಗಿದೆ. ನಾಳೆಯಿಂದ ಹಾಲಿನ ದರ ಏರಿಕೆ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಗುಜರಾತ್‌ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು ಗುಜರಾತ್‌ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು

ನವೆಂಬರ್‌14ರ ಮಧ್ಯಾಹ್ನ ನಂದಿನಿ ಹಾಲು ಮತ್ತು ಮೊಸರಿನ ದರವನ್ನು 3 ರೂಪಾಯಿ ಏರಿಸಿ ಕೆಎಂಎಫ್ ಆದೇಶ ಹೊರಡಿಸಿತ್ತು. ಅಲ್ಲದೇ ಈ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರುತ್ತದೆ ಎನ್ನಲಾಗಿತ್ತು. ಸದ್ಯ ಸಿಎಂ ಸೂಚನೆ ಮೇರೆಗೆ ದರ ಏರಿಕೆಗೆ ಬ್ರೇಕ್‌ ಹಾಕಲಾಗಿದೆ.

KMF Milk Price Hike: CM Basavaraj Bommai Stayed

ಕೆಎಂಎಫ್ ಆದೇಶ ಹೊರಡಿಸಿ ಪರಿಷ್ಕೃತ ಹಾಲಿನ ದರ ಈ ಕೆಳಗಿನಂತಿದೆ.

ನಂದಿನಿ ಟೋನ್ಡ್‌ ಹಾಲಿನ ದರ ಪ್ರಸ್ತುತ 37 ರೂಪಾಯಿ ಇದ್ದು ಪರಿಷ್ಕೃತ ದರ 40 ರೂಪಾಯಿ ಮಾಡಲಾಗಿತ್ತು.

ಹೋಮೋಜಿನೈಸ್ಡ್‌ ಟೋನ್ಡ್‌ ಹಾಲಿನ ದರ ಪ್ರಸ್ತುತ 38 ರೂಪಾಯಿ ಇದ್ದು ಪರಿಷ್ಕೃತ ದರ 41 ರೂಪಾಯಿ ಮಾಡಲಾಗಿತ್ತು.

ಹೋಮೋಜಿನೈಸ್ಡ್‌ ಹಸುವಿನ ಹಾಲಿನ ದರ ಪ್ರಸ್ತುತ 42 ರೂಪಾಯಿ ಇದ್ದು ಪರಿಷ್ಕೃತ ದರ 45 ರೂಪಾಯಿ ಮಾಡಲಾಗಿತ್ತು.

ಸ್ಪೆಷಲ್‌ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿತ್ತು.

ಶುಭಂ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿತ್ತು.

ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಾಲಿನ ದರ ಪ್ರಸ್ತುತ 44 ರೂಪಾಯಿ ಇದ್ದು ಪರಿಷ್ಕೃತ ದರ 47 ರೂಪಾಯಿ ಮಾಡಲಾಗಿತ್ತು.

ಸಮೃದ್ಧಿ ಹಾಲಿನ ದರ ಪ್ರಸ್ತುತ 48 ರೂಪಾಯಿ ಇದ್ದು ಪರಿಷ್ಕೃತ ದರ 51 ರೂಪಾಯಿ ಮಾಡಲಾಗಿತ್ತು.

ಸಂತೃಪ್ತಿ ಹಾಲಿನ ದರ ಪ್ರಸ್ತುತ 50 ರೂಪಾಯಿ ಇದ್ದು ಪರಿಷ್ಕೃತ ದರ 53 ರೂಪಾಯಿ ಮಾಡಲಾಗಿತ್ತು.

ಡಬಲ್ಡ್‌ ಟೋನ್ಡ್‌ ಹಾಲಿನ ದರ ಪ್ರಸ್ತುತ 36 ರೂಪಾಯಿ ಇದ್ದು ಪರಿಷ್ಕೃತ ದರ 39 ರೂಪಾಯಿ ಮಾಡಲಾಗಿತ್ತು.

ಮೊಸರು ಪ್ರತಿ ಕೆ.ಜಿಯ ಪ್ರಸ್ತುತ 45 ರೂಪಾಯಿ ಇದ್ದು ಪರಿಷ್ಕೃತ ದರ 48 ರೂಪಾಯಿ ಮಾಡಲಾಗಿತ್ತು.

English summary
Karnatka CM Bommai stayed stayed kmf proposal to hike milk and curd price futher desion will be taken on after November 20th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X