Kiccha Sudeep: ವಿಷ್ಣುವರ್ಧನ್ ಅಭಿಮಾನಿಗಳ ಬಳಿ ಪ್ರೀತಿಯ ಕ್ಷಮಾಪಣೆ ಕೇಳಿದ ಕಿಚ್ಚ ಸುದೀಪ್, ಕಾರಣವೇನು? ವೈರಲ್ ಪೋಸ್ಟ್
Kiccha Sudeep: ನಟ ಕಿಚ್ಚ ಸುದೀಪ್ ಅವರು ಡಾ. ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಈಚೆಗೆ ವಿಷ್ಣು ವರ್ಧನ್ ಅವರ ಜನ್ಮದಿನಕ್ಕೂ ನಟ ಕಿಚ್ಚ ಸುದೀಪ್ ಅವರು ಶುಭಕೋರಿದ್ದರು. ಇದೀಗ ವಿಷ್ಣುವರ್ಧನ್ ಅವರ ಅಭಿಮಾನಿಗಳ ಬಳಿ ಪ್ರೀತಿಯ ಕ್ಷಮಾಪಣೆ ಕೇಳಿದ್ದಾರೆ.
ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ನಟ ವಿಷ್ಣು ವರ್ಧನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ರಿಯಾಕ್ಟ್ ಮಾಡಿದ್ದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Kiccha Sudeep: ಕಿಚ್ಚ ಸುದೀಪ್ ಪೋಸ್ಟ್‌ನಲ್ಲಿ ಏನಿದೆ ?
ನನ್ನ ನೆಚ್ಚಿನ ವಿಷ್ಣು ಸರ್ ಅವರ ಎಲ್ಲಾ ಅಭಿಮಾನಿಗಳಿಗೆ ಪ್ರೀತಿಯ ನಮಸ್ಕಾರ. ❤ ಇಂದು ಸಂಜೆ ನಡೆಯುವ ಕಾರ್ಯಕ್ರಮಕ್ಕೆ ನನಗೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಒಂದು ಬಹಳ ಮುಖ್ಯವಾದ ವೈಯಕ್ತಿಕ ಕಾರಣವಿದೆ. ಈ ಬಗ್ಗೆ ನನ್ನನ್ನು ಚೆನ್ನಾಗಿ ತಿಳಿದಿರುವ ನಿಮ್ಮೆಲ್ಲ ಸಹೋದರರಿಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ.
ವಿಷ್ಣು ಸರ್ ಅವರು ಯಾವಾಗಲೂ ನನ್ನ ಆದರ್ಶ ಮತ್ತು ಸ್ಫೂರ್ತಿ. ಮುಂದೆಯೂ ಅವರು ಸದಾ ನನ್ನ ಆದರ್ಶವಾಗಿಯೇ ಇರುತ್ತಾರೆ. ಇಂತಹ ವಿಶೇಷ ದಿನದಂದು ನಿಮ್ಮೆಲ್ಲರ ನಡುವೆ ಇರಲು ಸಾಧ್ಯವಾಗದಿರುವುದು ನನಗೂ ತುಂಬಾ ಬೇಸರವಾಗಿದೆ. ಆದರೆ ನಮ್ಮ ಆದರ್ಶ ವಿಷ್ಣು ಸರ್ ಅವರಿಗಾಗಿ ಏನೇ ಮಾಡಬೇಕಾದರೂ, ಅವರ ಪರವಾಗಿ ನಿಲ್ಲಲು ನಾನು ಯಾವಾಗಲೂ ಸಿದ್ಧನಿದ್ದೇನೆ. ಕ್ಷಮೆ ಇರಲಿ. ನಿಮ್ಮೆಲ್ಲರಿಗೂ ತುಂಬಾ ಪ್ರೀತಿ. - ನಿಮ್ಮ ಸಹೋದರ, ಕಿಚ್ಚ ಸುದೀಪ್ ಅಂತ ನಟ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Kiccha Sudeep: ಅಭಿಮಾನಿಗಳು ಹೇಳಿದ್ದೇನು ?
ನಟ, ದಿವಂಗತ ವಿಷ್ಣುವರ್ಧನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಂದ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀಧರ್ ಶೇಟ್ ಅವರು, ವಿಷ್ಣು ಸರ್ ಅಭಿಮಾನಿಗಳು ನಿಮಗಾಗಿ ಕಾಯುತ್ತಿದ್ದಾರೆ ಅಣ್ಣಾ ದಯವಿಟ್ಟು 30 ನಿಮಿಷ ಬಂದು ಕಾರ್ಯಕ್ರಮಕ್ಕೆ ಹಾಜರಾಗಿ ಎಂದು ಮನವಿ ಮಾಡಿದ್ದಾರೆ. ಆತ್ಮೀಯ ಕಿಚ್ಚ ಸುದೀಪ್ ಸರ್ ನೀವು ಸ್ಯಾಂಡಲ್‌ವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದು, ಎಲ್ಲದಕ್ಕೂ ಸಮಯ ನೀಡುವುದು ಸುಲಭವಲ್ಲ. ಆದ್ಯತೆಗಳನ್ನು ನೀಡಬೇಕು. ನಾನು ಒಪ್ಪುತ್ತೇನೆ.
ನೀವು ಈ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ನಿಮ್ಮ ಅನೇಕ ಅಭಿಮಾನಿಗಳನ್ನು ಕರೆತರಬಹುದಿತ್ತು ಮತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೌಲ್ಯವನ್ನು ಸೇರಿಸಬಹುದಿತ್ತು ಎಂದೂ ಕೆಲವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ನೆಗೆಟಿವ್ ಕಾಮೆಂಟ್ ಸಹ ಮಾಡಿದ್ದಾರೆ. ನೀವು ಬಿಗ್‌ಬಾಸ್ ನಡೆಸಿಕೊಡುವುದಕ್ಕೆ ಸಮಯ ಹೊಂದಿಸಿಕೊಳ್ಳುತ್ತಿದ್ದೀರಿ. ದಾದಾ ಅವರ ವಿಶೇಷ ಕಾರ್ಯಕ್ರಮಕ್ಕೆ ಕನಿಷ್ಠ 30 ನಿಮಿಷಗಳಾದರೂ ಸಮಯ ಮಾಡಿಕೊಳ್ಳಬಹುದಿತ್ತು ಎಂದೂ ಹಲವರು ಹೇಳಿದ್ದಾರೆ.
ಇದು ತುಂಬಾ ಮುಖ್ಯವಾದ ಕಾರ್ಯಕ್ರಮ ಅಣ್ಣ. ಪ್ರತಿ ವರ್ಷ ಆಚರಣೆ ಅಲ್ಲ ದಯವಿಟ್ಟು ಅರ್ಥಮಾಡಿಕೊಳ್ಳಿ, ಆದರೂ ನಿಮಗೆ ಸಮಯವಿದೆ, ದಯವಿಟ್ಟು ಕನಿಷ್ಠ 30 ನಿಮಿಷಗಳಾದರೂ ಹೋಗಿ, ದಯವಿಟ್ಟು ಉಪಸ್ಥಿತಿ ಹೆಚ್ಚು ಅಗತ್ಯವಿದೆ ಅಂತಲೂ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
