KEA: ಸಿಇಟಿ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಕೆಇಎ ಮೊಬೈಲ್ ಅಪ್ಲಿಕೇಷನ್, ಪ್ರಯೋಜನಗಳು

ಬೆಂಗಳೂರು, ಜನವರಿ 14: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವ್ಯಾಪ್ತಿಯಲ್ಲಿ ಇತ್ತೀಚೆಗೆ ಸೀಟು ಹಂಚಿಕೆ, ಕೌನ್ಸೆಲಿಂಗ್ ವೇಳೆ ಅಕ್ರಮ ಕೇಳಿ ಬಂದಿತ್ತು. ಸೀಟು ಬ್ಲಾಕಿಂಗ್ ದಂಧೆ ರಾಜ್ಯವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಪ್ರಕರಣಗಳು ನಡೆಯದಂತೆ, ಸೈಬರ್ ವಂಚಕರನ್ನು ನೇಮಕಾತಿ ಜಾಲದಿಂದ ದೂರ ಇಡಲು ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಮತ್ತು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025) ನೇಮಕಾತಿಗಾಗಿ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿದೆ.

ಇಂಜಿನಿಯರಿಂಗ್ ಸೀಟು ಹಂಚಿಕೆ ವೇಳೆ ಸೀಟ್ ಬ್ಲಾಕಿಂಗ್ ಹಗರಣ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಗೆ ಅರ್ಜಿ ಸಲ್ಲಿಸುವ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ KEA ಈ ವ್ಯವಸ್ಥೆಗೆ ಮುಂದಾಗಿದೆ. ಇದರಿಂದ ಪರೀಕ್ಷಾರ್ಥಿಗಳಿಗೆ ಹಲವು ಪ್ರಯೋಜನ ಇವೆ.

KEA Will Introduce Mobile App for CET Candidates from 2025

ಸಿಇಟಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದಾಗ, ಇಲ್ಲವೇ ಪರೀಕ್ಷೆ ಬಳಿಕ ನೇಮಕಾತಿ ವೇಳೆ ಸೈಬರ್ ವಂಚಕರು ಅಭ್ಯರ್ಥಿಗಳ ವಿವಿರ ಕದ್ದು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈಗಾಗಲೇ ಕೆಸಿಇಟಿ-2024 ಸೀಟು ಹಂಚಿಕೆ ವೇಳೆ, ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್ ವೇಳೆ ಒಂದಷ್ಟು ಸಮಸ್ಯೆ ಎದುರಿಸಿದ್ದನ್ನು ನೋಡಿದ್ದೇವೆ.

ಇದೆಲ್ಲ ತೊಂದರೆ ಭವಿಷ್ಯದಲ್ಲಿ ಆಗದಂತೆ ವಿದ್ಯಾರ್ಥಿಗಳ ಮಾಹಿತಿ ಗೌಪ್ಯತೆ ಜೊತೆಗೆ ನೇಮಕಾತಿಯಲ್ಲಿ ಅಕ್ರಮವಾಗದಂತೆ ತಡೆಯಲು KEA ಮೊಬೈಲ್ ಅಪ್ಲಿಕೇಶನ್ ಸಹಾಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯಾವುದೇ ನೇಮಕಾತಿ ಅರ್ಜಿ ಹಾಕಲು ಇಚ್ಛಿಸಿದಾಗ ಅಭ್ಯರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶ ಅಭ್ಯರ್ಥಿಗಳು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಿಂದಲೇ ಅರ್ಜಿ ಸಲ್ಲಿಸಬಹುದು. ಅರ್ಜಿ ಭರ್ತಿ ಮಾಡಲು ಈ ಆಫ್ ಸಹಾಯಕ್ಕೆ ಬರಲಿದೆ. ಕೂತಲ್ಲೇ ಅರ್ಜಿ ಸಲ್ಲಿಸಬಹುದು.

ಪ್ರಾಧಿಕಾರ ನೇಮಕಾತಿಗೆ ಆಹ್ವಾನಿಸುತ್ತಿದ್ದಂತೆ ಸೈಬರ್ ಕೇಂದ್ರಗಳತ್ತ ಹೋಗಿ ಅರ್ಜಿ ಹಾಕುವಾಗ ಅವರ ಸಾಕಷ್ಟು ವೈಯಕ್ತಿಕ ಮಾಹಿತಿ ಸೋರಿಕೆ ಆಗುವ ಸಾಧ್ಯತೆ ಇರುತ್ತದೆ. ಈ ಆಪ್ ಅನ್ನು KCET 2025 ನೇಮಕಾತಿ ಆಹ್ವಾನಿಸಿದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಹಗರಣದಲ್ಲಿ ಪ್ರಾಧಿಕಾರದ ಓರ್ವ ವ್ಯಕ್ತಿ, ಕೆಲ ಕಾಲೇಜಿನ ಕೈವಾಡದ ಇರುವುದಾಗಿ ಶಂಕೆ ವ್ಯಕ್ತವಾಗಿತ್ತು. ಆದ್ದರಿಂದ ಸಿಬ್ಬಂದಿ ಯಾವ ಕಾರಣಕ್ಕೂ ಯಾರ ಆಮೀಷಗಳಿಗೂ ಒಳಗಾಗಬಾರದು. ಇದರಲ್ಲಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ಇರುತ್ತದೆ. ಇದನ್ನು ಮನಗಂಡು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸಚಿವರು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+