KEA: KCET 2025 ಅಭ್ಯರ್ಥಿಗಳಿಗೆ ಮಹತ್ವದ ಅಪ್ಡೇಟ್ಸ್: ಸೀಟು ಹಂಚಿಕೆ ಲಿಂಕ್ ಬಿಡುಗಡೆ, ಜುಲೈ 15 ಕೊನೆ ದಿನ..

ಬೆಂಗಳೂರು, ಜುಲೈ 10: ಕರ್ನಾಟಕ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (Karnataka Undergraduate Common Entrance Test- UGCET 2025 or KCET) ಅಡಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ರಾಜ್ಯ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅಪ್ಡೇಟ್ ನೀಡಿದೆ. ಈ ಸಂಬಂಧ ಲಿಂಕ್ ಬಿಡುಗಡೆ ಮಾಡಿದ್ದು, ಕೊನೆಯ ದಿನಾಂಕವನ್ನು ಪ್ರಕಟಿಸಿದೆ. ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಗಮನಿಸಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) UGCET-25 ಅಭ್ಯರ್ಥಿಗಳ ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ, ಬಿಪಿಟಿ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆ (Options) ದಾಖಲಿಸಲು ವೆಬ್ ಸೈಟ್ ನಲ್ಲಿ (https://cetonline.karnataka.gov.in/kea/) ಲಿಂಕ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳ ದಾಖಲಾತಿಗೆ ಜುಲೈ 15ರವರೆಗೆ ಅವಕಾಶ ನೀಡಿದ್ದು, ಅಂದೇ ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಅಪ್ಡೇಟ್ ನೀಡಿದ್ದಾರೆ.

KEA Releases UGCET 2025 Option Entry Link for Professional Course Admissions

ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಬಿಎಸ್ ಸಿ ನರ್ಸಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್, ಸಂಬಂಧಪಟ್ಟ ಇಲಾಖೆಗಳಿಂದ ಇನ್ನೂ ಬಂದಿಲ್ಲ. ಹೀಗಾಗಿ ಮ್ಯಾಟ್ರಿಕ್ಸ್ ಬಂದ ನಂತರ ಈ ಕೋರ್ಸ್ ಗಳ ಪ್ರವೇಶಕ್ಕೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.

ಜುಲೈ 19ಕ್ಕೆ ಫಲಿತಾಂಶ ಬಿಡುಗಡೆ

ಇದೆಲ್ಲದರ ಅಣಕು ಫಲಿತಾಂಶವನ್ನು ಜುಲೈ 19 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅದರ ಬಳಿಕ ಆದ್ಯತೆಗಳನ್ನು ಅದಲು- ಬದಲು ಮಾಡಿಕೊಳ್ಳಲು ಜುಲೈ 22 ತನಕ ಅವಕಾಶ ನೀಡಲಾಗಿದೆ. ಇನ್ನೂ ಜುಲೈ 25ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಕೂಡಲೇ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ ಸೂಚನೆಗಳನ್ನು ಪಾಲಿಸಬೇಕು. ಕೊನೆ ದಿನಾಂಕವರೆಗೆ ಕಾಯದೇ ಈಗಲೇ ಕಾರ್ಯ ಪ್ರವೃತ್ತರಾಗಬೇಕಿದೆ.

ಅಭ್ಯರ್ಥಿಗಳು ಸೀಟ್ ಮ್ಯಾಟ್ರಿಕ್ಸ್ ನೋಡಿಕೊಂಡು ಇಚ್ಛೆ/ ಆಯ್ಕೆಗಳನ್ನು ದಾಖಲಿಸುವಾಗ ಆದ್ಯತಾ ಕ್ರಮಗಳನ್ನು ಅನುಸರಿಸಬೇಕು. ಈ ಕುರಿತ ಹೆಚ್ಚಿನ ವಿವರಗಳಿಗೆ ಯುಜಿಸಿಇಟಿ-25 ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಅಲ್ಲದೆ, KEA ವಿಕಸನ ಯೂಟ್ಯೂಬ್ ಚಾನಲ್ ನಲ್ಲಿ ಇರುವ ವಿಡಿಯೊ ಕೂಡ ನೋಡಬಹುದು ಎಂದು ಅವರು ತಿಳಿಸಿದರು.

KEA Releases UGCET 2025 Option Entry Link for Professional Course Admissions

ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್ ಗಳಲ್ಲಿ ಪ್ರಾಕ್ಟಿಕಲ್ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳು, ಪ್ರಾಕ್ಟಿಕಲ್ ಮತ್ತು ರೆಗ್ಯುಲರ್ ಸೀಟುಗಳಿಗೆ ಪ್ರತ್ಯೇಕವಾಗಿಯೇ ಆಪ್ಷನ್ಸ್ ದಾಖಲಿಸಬೇಕು ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

DCET 2025: ದಿನಾಂಕ ವಿಸ್ತರಣೆ

ಇಷ್ಟು ಮಾತ್ರವಲ್ಲದೇ DCET-2025 ಎರಡನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಆಯ್ಕೆ (Options) ದಾಖಲಿಸಲು ಮತ್ತೊಮ್ಮೆ ದಿನಾಂಕ ವಿಸ್ತರಿಸಲಾಗಿದೆ. DCET ಅಭ್ಯರ್ಥಿಗಳಿಗೆ ಇಂದು ಜುಲೈ 10ರಂದು ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಇದು ಕೊನೆಯ ಅವಕಾಶ ಎಂದು ಎಚ್.ಪ್ರಸನ್ನ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+