UG NEET 2026: ದೇಶಕ್ಕೆ 20ನೇ ರ್‍ಯಾಂಕ್ ಪಡೆದವರೇ ರಾಜ್ಯಕ್ಕೆ ಟಾಪರ್! 69,170 ಅರ್ಹ ಅಭ್ಯರ್ಥಿಗಳ ಅಂಕಪಟ್ಟಿ ಪ್ರಕಟಿಸಿದ KEA

ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಯ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಮುಖ ಮಾಹಿತಿಯೊಂದನ್ನು ಹೊರಹಾಕಿದೆ. ಪ್ರಸಕ್ತ ಸಾಲಿನ ಯುಜಿ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಂದರೆ ಎನ್‌ಟಿಎ ಅರ್ಜಿಯಲ್ಲಿ 'ಕರ್ನಾಟಕ' ಎಂದು ನಮೂದಿಸಿದ್ದ ಅಭ್ಯರ್ಥಿಗಳ ಅಂಕಪಟ್ಟಿಯನ್ನ ಕೆಇಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಒಟ್ಟು 69,170 ಅರ್ಹ ಅಭ್ಯರ್ಥಿಗಳ ಅಂಕಪಟ್ಟಿಯನ್ನ ಪ್ರಾಧಿಕಾರ ಬಿಡುಗಡೆ ಮಾಡಿದ್ದು, ಈಗ ವಿದ್ಯಾರ್ಥಿಗಳು ಮತ್ತು ಪೋಷಕರು ವೆಬ್‌ಸೈಟ್ ಮೂಲಕ ಇದನ್ನು ಪರಿಶೀಲಿಸಬಹುದು.

KEA

ರಾಜ್ಯದ ಪಟ್ಟಿಯಲ್ಲಿ AIR 20ನೇ ರ್‍ಯಾಂಕ್ ಅಭ್ಯರ್ಥಿಯೇ ಟಾಪರ್

ಅಖಿಲ ಭಾರತ ಮಟ್ಟದಲ್ಲಿ (AIR) 20ನೇ ರ್‍ಯಾಂಕ್ ಪಡೆದಿರುವ ರಾಜ್ಯದ ಅಭ್ಯರ್ಥಿಯು, ಕೆಇಎ ಪ್ರಕಟಿಸಿರುವ ಕರ್ನಾಟಕದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳೇ ರಾಜ್ಯದ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದು, ಈ ಬಾರಿ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ತೀವ್ರ ಪೈಪೋಟಿ ಇರುವ ಸಾಧ್ಯತೆಯಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸಿದ್ದ ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ಅರ್ಜಿ ಸಲ್ಲಿಸುವಾಗ 'ಕರ್ನಾಟಕ ರಾಜ್ಯ' ಎಂದು ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ದತ್ತಾಂಶವನ್ನು ಮಾತ್ರ ಪ್ರತ್ಯೇಕಿಸಿ ಈ ಅಂಕಪಟ್ಟಿಯನ್ನ ಸಿದ್ಧಪಡಿಸಲಾಗಿದೆ.

Karnataka NEET Rank List 2026 ನೋಡೋದು ಹೇಗೆ?

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಎಸ್ ಎಚ್. ಪ್ರಸನ್ನ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಅಂಕಗಳನ್ನ ನೋಡಲು ಸೂಚಿಸಿದ್ದಾರೆ.

1. ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂದರೆ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ಅಲ್ಲಿ ಮುಖಪುಟದಲ್ಲಿ ಕಾಣಿಸುವ "UGNEET-2026 Score List" ಮೇಲೆ ಕ್ಲಿಕ್ ಮಾಡಿ.

3. ಈಗಾಗಲೇ ಪ್ರಕಟವಾಗಿರುವ ಪಿಡಿಎಫ್‌ನಲ್ಲಿ ಅಭ್ಯರ್ಥಿಗಳು ನಿಮ್ಮ ರೋಲ್ ನಂಬರ್ ಅಥವಾ ಹೆಸರನ್ನ ಹುಡುಕುವ ಮೂಲಕ ನಿಮ್ಮ ಅಂಕಗಳನ್ನ ನೋಡಿಕೊಳ್ಳಿ.

ಸಿಇಟಿ ಅರ್ಜಿಯೊಂದಿಗೆ NEET ರೋಲ್ ನಂಬರ್ ಜೋಡಿಸಲು ಆಗಸ್ಟ್ 3ರವರೆಗೆ ಅವಕಾಶ

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ಸಿಇಟಿ-2026 ಅರ್ಜಿಯೊಂದಿಗೆ ಜೋಡಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಕೆಇಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಲಿಂಕ್ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ದಾಖಲಿಸಲು ಆಗಸ್ಟ್ 3ರವರೆಗೆ ಅಂತಿಮ ಗಡುವು ನೀಡಲಾಗಿದೆ. ನೀಟ್ ರೋಲ್ ನಂಬರ್ ಅನ್ನು ಯಶಸ್ವಿಯಾಗಿ ದಾಖಲಿಸಿದ ನಂತರ, ವಿದ್ಯಾರ್ಥಿಗಳು ಹೊಸದಾಗಿ ಪರಿಷ್ಕೃತ ಅರ್ಜಿ ಮತ್ತು ವೆರಿಫಿಕೇಷನ್ ಸ್ಲಿಪ್ (Verification Slip) ಅನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರವು ಸ್ಪಷ್ಟವಾಗಿ ಸೂಚಿಸಿದೆ.

ಮುಂದಿನ ಪ್ರಕ್ರಿಯೆಗಳೇನು?

ಅಂಕಪಟ್ಟಿ ಪ್ರಕಟಣೆಯು ವೈದ್ಯಕೀಯ ಪ್ರವೇಶಾತಿ ಪ್ರಕ್ರಿಯೆಯ ಮೊದಲ ಹಂತವಾಗಿದೆ. ಶೀಘ್ರದಲ್ಲೇ ಕೆಇಎ ವತಿಯಿಂದ ಅಧಿಕೃತ ರಾಜ್ಯ ರ್‍ಯಾಂಕ್ ಪಟ್ಟಿ ಹಾಗೂ ಕೌನ್ಸಿಲಿಂಗ್ ವೇಳಾಪಟ್ಟಿಯನ್ನ ಪ್ರಕಟಿಸಲಾಗುತ್ತದೆ. ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ಆರಂಭವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನ ರೆಡಿ ಇಟ್ಟುಕೊಳ್ಳಲು ಸೂಚಿಸಿದೆ.

ಹೆಚ್ಚಿನ ಮತ್ತು ನಿಖರ ಮಾಹಿತಿಗಾಗಿ ವಿದ್ಯಾರ್ಥಿಗಳು ನಿಯಮಿತವಾಗಿ ಕೆಇಎ ಅಧಿಕೃತ ಜಾಲತಾಣವನ್ನು ಗಮನಿಸುತ್ತಿರಲು ಪ್ರಾಧಿಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+