ಡಿಪ್ಲೊಮಾ ಫಾರ್ಮಸಿ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಿದ KEA
ವೈದ್ಯಕೀಯ ಮತ್ತು ಫಾರ್ಮಸಿ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವದ ಅಪ್‌ಡೇಟ್ ಒಂದನ್ನ ನೀಡಿದೆ. 2026ನೇ ಸಾಲಿನ ಡಿಪ್ಲೊಮಾ ಇನ್ ಫಾರ್ಮಸಿ (ಡಿ.ಫಾರ್ಮಸಿ) ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನ ಕೆಇಎ ಇಂದು ಅಧಿಕೃತವಾಗಿ ಪ್ರಕಟಿಸಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟ ಸೂಚನೆಗಳನ್ನ ನೀಡಿದ್ದಾರೆ.

ಡಿಪ್ಲೊಮಾ ಇನ್ ಫಾರ್ಮಸಿ ಅಣಕು ಫಲಿತಾಂಶದ ಮಹತ್ವ
ವಿದ್ಯಾರ್ಥಿಗಳು ತಾವು ಫೀಲ್ ಮಾಡಿರುವ ಆಪ್ಷನ್ ಎಂಟ್ರಿ ಹಾಗೂ ತಮ್ಮ ರ‍್ಯಾಂಕಿಂಗ್ ಆಧಾರದ ಮೇಲೆ ಯಾವ ಕಾಲೇಜಿನಲ್ಲಿ ಸೀಟು ಸಿಗುವ ಸಾಧ್ಯತೆಯಿದೆ ಎಂಬುದರ ಮುನ್ನೋಟವನ್ನ ಒದಗಿಸುವುದೇ ಈ ಅಣಕು ಫಲಿತಾಂಶದ ಮುಖ್ಯ ಉದ್ದೇಶ. ಇದು ಅಂತಿಮ ಫಲಿತಾಂಶವಲ್ಲ.
ಬದಲಾಗಿ, ವಿದ್ಯಾರ್ಥಿಗಳು ತಾವು ಮಾಡಿರುವ ಆಯ್ಕೆಗಳು ಸರಿಯಾಗಿವೆಯೇ ಅಥವಾ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕೇ ಎಂಬುದನ್ನ ನಿರ್ಧರಿಸಲು ನೀಡಲಾಗುವ ಒಂದು ಸುವರ್ಣ ಅವಕಾಶವಾಗಿದೆ. ಈ ಅಣಕು ಸೀಟು ಹಂಚಿಕೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಕಾಲೇಜು ಮತ್ತು ಕೋರ್ಸ್ ಆಯ್ಕೆಯಲ್ಲಿನ ತಪ್ಪುಗಳನ್ನ ತಿದ್ದಿಕೊಳ್ಳಬಹುದು.
ಆಪ್ಷನ್ ಎಂಟ್ರಿ ಬದಲಾವಣೆಗೆ ಅಕ್ಟೋಬರ್ 28 ಕಡೆಯ ದಿನ
ಅಣಕು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಗಳನ್ನು ಪರಿಷ್ಕರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಾಲಾವಕಾಶ ನೀಡಿದೆ. ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನ ಪರಿಶೀಲಿಸಿದ ಬಳಿಕ, ಅಭ್ಯರ್ಥಿಗಳು ಅಕ್ಟೋಬರ್ 28ರಂದು ಮಧ್ಯಾಹ್ನ 1 ಗಂಟೆಯೊಳಗೆ ತಮ್ಮ ಆಯ್ಕೆಗಳನ್ನ ಬದಲಿಸಿಕೊಳ್ಳಲು, ಡಿಲೀಟ್ ಅಥವಾ ಹೊಸ ಕಾಲೇಜುಗಳನ್ನ ಸೇರಿಸಲು ಅವಕಾಶ ಕಲ್ಪಿಸಲಾಗಿದೆ.
ಅಂತಿಮ ಹಂಚಿಕೆಗೂ ಮುನ್ನ ಇದು ಅತ್ಯಂತ ನಿರ್ಣಾಯಕ ಹಂತವಾಗಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ತಮ್ಮ ಆದ್ಯತೆಯ ಕಾಲೇಜುಗಳನ್ನ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಅಕ್ಟೋಬರ್ 28ರ ಮಧ್ಯಾಹ್ನ 1 ಗಂಟೆಯ ನಂತರ ಯಾವುದೇ ಬದಲಾವಣೆಗಳಿಗೆ ಅವಕಾಶವಿರುವುದಿಲ್ಲ.
#DiplomaInPharmacy-26: ಡಿಪ್ಲೊಮಾ ಇನ್ ಫಾರ್ಮಸಿ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು #KEA ಇಂದು ಪ್ರಕಟಿಸಿದೆ.ಅಭ್ಯರ್ಥಿಗಳು ಅ.28ರಂದು ಮಧ್ಯಾಹ್ನ 1ಗಂಟೆಯೊಳಗೆ ತಮ್ಮ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಲು/ಅಳಿಸಲು/ಸೇರಿಸಲು ಅವಕಾಶ ನೀಡಲಾಗಿದೆ. ಇದೇ ಅವಧಿಯೊಳಗೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಇ-ಮೇಲ್ ಮೂಲಕ ತಿಳಿಸಬಹುದು.ಅದರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.-ಹೆಚ್.ಪ್ರಸನ್ನ ಐಎಎಸ್ಕಾರ್ಯನಿರ್ವಾಹಕ ನಿರ್ದೇಶಕರುಕರ್ನಾಟಕ ಪರೀಕ್ಷಾ ಪ್ರಾಧಿಕಾರ@CMofKarnataka @basavarajrayar2 @S_PrakashPatil
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) October 27, 2026
ಆಕ್ಷೇಪಣೆ ಸಲ್ಲಿಕೆ ಹಾಗೂ ಅಂತಿಮ ಫಲಿತಾಂಶ
ಸೀಟು ಹಂಚಿಕೆಯ ಅಣಕು ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ, ನಿಗದಿತ ಅವಧಿಯೊಳಗೆ ಅಂದರೆ ಅಕ್ಟೋಬರ್ 28ರ ಮಧ್ಯಾಹ್ನ 1 ಗಂಟೆಯೊಳಗೆ ಕೆಇಎ ಅಧಿಕೃತ ಇ-ಮೇಲ್ ಮೂಲಕ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಹೆಚ್. ಪ್ರಸನ್ನ ಐಎಎಸ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಲ್ಲಿಸುವ ಆಯ್ಕೆಗಳ ಪರಿಷ್ಕರಣೆ ಹಾಗೂ ಆಕ್ಷೇಪಣೆಗಳನ್ನ ಕೂಲಂಕಷವಾಗಿ ಪರಿಶೀಲಿಸಿದ ನಂತರ ಪ್ರಾಧಿಕಾರವು ಶೀಘ್ರದಲ್ಲೇ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಿದೆ.
ವಿದ್ಯಾರ್ಥಿಗಳು ತಮ್ಮ ಅಣಕು ಫಲಿತಾಂಶವನ್ನು ವೀಕ್ಷಿಸಲು ಹಾಗೂ ಆಪ್ಷನ್ ಎಂಟ್ರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.


Click it and Unblock the Notifications
