ಕರ್ನಾಟಕ ಯುಜಿ ನೀಟ್ 2023; ಅರ್ಜಿ ತುಂಬುವುದು ಹೇಗೆ?
ಬೆಂಗಳೂರು, ಜುಲೈ 16; ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ನೀಟ್ 2023ರ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆ ಜುಲೈ 21, ಅರ್ಜಿ ಶುಲ್ಕ ಪಾವತಿ ಮಾಡಲು ಜುಲೈ 22 ಕೊನೆಯ ದಿನವಾಗಿದೆ.
ಕೆಇಎ ಯುಜಿ ನೀಟ್ 2023ರ ಅರ್ಜಿ ತುಂಬಲು ಮಾರ್ಗಸೂಚಿಯನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಿಡುಗಡೆ ಮಾಡಿದೆ. kea.kar.nic.in. ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಿ, ನೋಂದಣಿ ಮಾಡಿಕೊಳ್ಳಬೇಕಿದೆ.

ಯುಜಿ ನೀಟ್ ವೈದ್ಯಕೀಯ/ ದಂತ ವೈದ್ಯಕೀಯ ಪ್ರವೇಶಾತಿಗಾಗಿ ನೀಟ್, ರ‍್ಯಾಂಕ್ ಪಡೆದ ಅರ್ಹ ಅಭ್ಯರ್ಥಿಗಳು ಹೆಸರು ನೋಂದಾಯಿಸಬೇಕಿದೆ. ಅರ್ಜಿ ಸಲ್ಲಿಕೆ ಮೊದಲು ಅಭ್ಯರ್ಥಿಗಳು ನೀವು ಯುಜಿಸಿಇಟಿ-2023ಗೆ ನೋಂದಾಯಿಸಿ ಅರ್ಜಿ ಸಲ್ಲಿಸಿದ್ದೀರಾ?. ಎಂಬುದರ ಬಗ್ಗೆ Yes/ No ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ.
ಅರ್ಜಿಯನ್ನು ತುಂಬುವುದು ಹೇಗೆ?; ಅಭ್ಯರ್ಥಿಗಳು ಈಗಾಗಲೇ ಯುಜಿಸಿಇಟಿ 2023ಕ್ಕೆ ಅರ್ಜಿ ಸಲ್ಲಿಸಿ/ ರ‍್ಯಾಂಕ್ ಪಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗಿರುವ ಅಭ್ಯರ್ಥಿಗಳು Yes ಎಂದು ನೀಡಿ Proceed with UGCET - 2023 User ID and Password ಟ್ಯಾಬ್‌ನಲ್ಲಿ ತಮ್ಮ ಯುಜಿಸಿಇಟಿ 2023ರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಉಪಯೋಗಿಸಿಕೊಂಡು ಮುಂದುವರೆಯ ಬೇಕು.
ಬಳಿಕ NEET Roll No ಅನ್ನು ಭರ್ತಿ ಮಾಡಿ Check (ಪರಿಶೀಲಿಸಿ) ಟ್ಯಾಬ್ ಅನ್ನು ಆಯ್ಕೆ ಮಾಡಬೇಕು. ನಂತರ ಅಯ್ಕೆ ಮಾಡಿದ ನಂತರ ಅಭ್ಯರ್ಥಿಯು ಈಗಾಗಲೇ ಯುಜಿಸಿಇಟಿ--2023ಕ್ಕೆ ದಾಖಲು ಮಾಡಿದ ವಿವರಗಳನ್ನೊಳಗೊಂಡಿರುವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿ. ಬದಲಾವಣೆ ಮಾಡಬೇಕಿದ್ದಲ್ಲಿ Update NEET Details ಟ್ಯಾಬ್ ಅನ್ನು ಉಪಯೋಗಿಸಿಕೊಳ್ಳಬೇಕು. ಹೊಸದಾಗಿ ಅರ್ಜಿಯಲ್ಲಿ ಬದಲಾವಣೆ ಮಾಡಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವೇಳಾಪಟ್ಟಿ ಅನುಸಾರ ಪುನಃ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
ಅಭ್ಯರ್ಥಿಗಳು ಈಗಾಗಲೇ ಯುಜಿಸಿಇಟಿ 2023ರ ದಾಖಲಾತಿ ಪರಿಶೀಲನೆಗೆ ಹಾಜರಾಗಿ ಅದೇ ವೆರಿಫಿಕೇಷನ್ ಸ್ಲಿಪ್ ಅನ್ನು 2023ಕ್ಕೂ ಬಳಸಬಹುದೆಂದು ಭಾವಿಸಬಾರದು. ಅಭ್ಯರ್ಥಿಗಳು ಪುನಃ ಮೇಲೆ ತಿಳಿಸಿರುವ ಟ್ಯಾಬ್ ಮೂಲಕ ಯುಜಿನೀಟ್ 2023ರ ವೆರಿಫಿಕೇಷನ್ ಸ್ಲಿಪ್ ಅನ್ನು ಕೆಇಎ ವೆಬ್‌ಸೈಟಿನಲ್ಲಿ ಪ್ರಕಟಿಸುವ ದಿನಾಂಕಗಳಂದು ಡೌನ್‌ಲೊಡ್ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಯುಜಿಸಿಇಟಿ 2023ಕ್ಕೆ ಅರ್ಜಿ ಸಲ್ಲಿಸದ, ಹೊಸದಾಗಿ ಯುಜಿನೀಟ್‌ಗೆ ನೋಂದಾಯಿಸುವ ಅಭ್ಯರ್ಥಿಗಳು ಕೆಇಎ ಪೋರ್ಟಲ್‌ನಲ್ಲಿ No ಎಂದು ನೀಡಿ Proceed to registration for New Users ಟ್ಯಾಬ್‌ನಲ್ಲಿ ಮುಂದುವರೆಯಬೇಕು. ಹೊಸದಾಗಿ ನೋಂದಾಯಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
Website: http://kea.kar.nic.in
ಈ ಹಿಂದೆ ಪ್ರಕಟಸಿರುವ ವೇಳಾಪಟ್ಟಿಯ ಪ್ರಕಾರ ನೋಂದಣಿ ಮಾಡಿಸಲು ಜುಲೈ 21 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಜುಲೈ 22 ಕೊನೆಯ ದಿನ. ಹೊರನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ಜುಲೈ 25ರಂದು ನಡೆಯಲಿದೆ. ವಿಕಲಾಂಗ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಜುಲೈ 25ರಂದು ನಡೆಯಲಿದೆ.
ಕರ್ನಾಟಕದ ಎಸ್‌ಸಿ/ ಎಸ್‌ಟಿ/ ಪ್ರವರ್ಗ-1/ ಅಂಗವಿಕಲ/ ಸಾಮಾನ್ಯ/ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಪಾವತಿ ಮಾಡಬೇಕಿದೆ. ಕರ್ನಾಟಕದವರಲ್ಲದ ಅಭ್ಯರ್ಥಿಗಳು 2500 ರೂ. ಶುಲ್ಕವನ್ನು ಪಾವತಿಸಬೇಕು. ಎನ್‌ಆರ್‌ಐ ವಾರ್ಡ್/ ಎನ್ಆರ್‌ಐ/ಓಸಿಐ/ ಪಿಐಓ/ ವಿದೇಶ ಅಭ್ಯರ್ಥಿಗಳು 5,500 ರೂ. ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಅಥವ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಪಾವತಿಸಬೇಕು.












Click it and Unblock the Notifications