PGCET-2024 ಪರೀಕ್ಷೆ ವೇಳಾಪಟ್ಟಿ, ಅಭ್ಯರ್ಥಿಗಳಿಗೆ ಸೂಚನೆಗಳು
ಬೆಂಗಳೂರು, ಮೇ 25: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಂಬಿಎ/ ಎಂಸಿಎ/ ಎಂಇ/ ಎಂ.ಟೆಕ್/ ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಮೊದಲ ವರ್ಷದ/ 1ನೇ ಸೆಮಿಸ್ಟರ್‌ಗಳ ಪ್ರವೇಶಕ್ಕೆ ನಡೆಸುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ- PGCET-2024 ವೇಳಾಪಟ್ಟಿ ಘೋಷಣೆ ಮಾಡಿದೆ. ಈ ಕುರಿತು ಪ್ರಕಟಣೆಯಲ್ಲಿ ಹೆಚ್. ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಸಹ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಆದೇಶದ ಅನ್ವಯ ಕರ್ನಾಟಕ ಮತ್ತು ಕರ್ನಾಟೇಕತರ ಅಭ್ಯರ್ಥಿಗಳಿಂದ 2024-25ನೇ ಸಾಲಿನ ಮೊದಲನೆ ವರ್ಷದ/ 1ನೇ ಸೆಮಿಸ್ಟರ್‌ಗಳ (ಪೂರ್ಣಾವಧಿ/ ಅರೆಕಾಲಿಕ) ಎಂಬಿಎ/ ಎಂಸಿಎ/ ಎಂಇ/ ಎಂ.ಟೆಕ್/ ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಮೇಲಿನ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ನಾತಕೋತ್ತರ ಸಾಮಾನ್ಯ ಪವೇಶ ಪರೀಕ್ಷೆ-2024ಕ್ಕೆ ಹಾಜರಾಗಬೇಕು.

ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದಲ್ಲಿ GATE ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು (Valid GATE Score) ಎಂಇ/ ಎಂ.ಟೆಕ್/ ಎಂ, ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2024ಕ್ಕೆ ಹಾಜರಾಗಬೇಕಾಗಿರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು. SC/ ST/ OBC ಅರ್ಹತಾ ಮಾನದಂಡಗಳು ಕರ್ನಾಟಕ SC/ ST/ OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಕರ್ನಾಟಕೇತರ ಅಭ್ಯರ್ಥಿಗಳು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಡುವ ಸೀಟುಗಳನ್ನು ಮಾತ್ರ ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ. ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ ಅರ್ಹತೆಯನ್ನು ಪಡೆಯಬಹುದಾಗಿದೆ ಹಾಗೂ ಪ್ರವೇಶಕ್ಕಾಗಿ ನೋಂದಣಿಯನ್ನು ಮಾಡಿ ಕೊಳ್ಳಬಹುದಾಗಿದೆ. SC/ ST/ OBC ಅರ್ಹತಾ ಮಾನದಂಡಗಳು ಕರ್ನಾಟಕದ SC/ ST/ OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಎಂಬಿಎ/ ಎಂಸಿಎ/ ಎಂಇ/ ಎಂ.ಟೆಕ್/ ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕೆ, ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ಕನಿಷ್ಟ ಶೇ 50, ಹಾಗು ಕರ್ನಾಟಕದ ಎಸ್.ಸಿ., ಎಸ್.ಟಿ., ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ ಶೇ 45 ಅಂಕಗಳನ್ನು ಪಡೆದಿರಬೇಕು. CGPA/ SGPA ಗ್ರೇಡ್‌ಗಳ ಮಾದರಿಯಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು, ಅಗತ್ಯವಿರುವ ಕನಿಷ್ಟ ಅರ್ಹತಾ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗ್ರೇಡ್‌ಗಳ ಅಂಕಗಳು ಸೂಚಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ. SC/ ST/ OBC ಅರ್ಹತಾ ಮಾನದಂಡಗಳು ಕರ್ನಾಟಕದ SC/ ST/ OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
PGCET-2024 ಪರೀಕ್ಷಾ ವೇಳಾಪಟ್ಟಿ, ವಿಧಾನ
* 13/7/2024 ಶನಿವಾರ. ಮಧ್ಯಾಹ್ನ 2.30 ರಿಂದ 4.30ರ ತನಕ ಎಂಇ/ ಎಂ. ಟೆಕ್/ ಎಂ. ಆರ್ಕಿಟೆಕ್ಚರ್. ಒಟ್ಟು ಪ್ರಶ್ನೆಗಳು 100. ಒಟ್ಟು ಅಂಕಗಳು 100
* 14/07/2024 ಭಾನುವಾರ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರ ತನಕ ಎಂಸಿಎ. ಒಟ್ಟು ಪ್ರಶ್ನೆ 100. ಒಟ್ಟು ಅಂಕಗಳು 100. ಮಧ್ಯಾಹ್ನ 2.30 ರಿಂದ ಸಂಜೆ 4.30ರ ತನಕ ಎಂಬಿಎ. ಒಟ್ಟು ಪ್ರಶ್ನೆಗಳು 100. ಒಟ್ಟು ಅಂಕಗಳು 100.
ಅಭ್ಯರ್ಥಿಗಳು ಪಿಜಿಸಿಇಟಿ-2024ಕ್ಕೆ ದಿನಾಂಕ 27-05-2024ರ ಬೆಳಿಗ್ಗೆ 11 ರಿಂದ ದಿನಾಂಕ 17-06-2024 ರ ರಾತ್ರಿ 11.59 ರೊಳಗಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ದಿನಾಂಕ 18-06-2024 ರ ಸಂಜೆ 6 ರೊಳಗೆ ಶುಲ್ಕವನ್ನು ಪಾವತಿಸಬೇಕು. ಪಾವತಿಸಿರುವ ಶುಲ್ಕ ರಸೀದಿಯು ಧೃಡಪಟ್ಟ ನಂತರವೇ ಅಭ್ಯರ್ಥಿಗಳಿಗೆ ಪಿಜಿಸಿಇಟಿ-2024 ಪರೀಕ್ಷೆಗೆ ಅಡ್ಮಿಶನ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನುಮತಿಸಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ, ನೂತನ ಪಠ್ಯಕ್ರಮ, ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲಾತಿಗಳು ಹಾಗು ವಿವರವಾದ ಅರ್ಹತಾ ಮಾನದಂಡಗಳನ್ನೊಳಗೊಂಡ ಮಾಹಿತಿ ಪುಸ್ತಕ 2024 ಅನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ. ನೋಂದಣಿ ಮಾಡಿಕೊಳ್ಳುವ ಮೊದಲು ಶೈಕ್ಷಣಿಕ ಅರ್ಹತೆ, ವಿವಿಧ ವರ್ಗಗಳ ಸೀಟುಗಳಿಗೆ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಮತ್ತು ಅಂತಹ ಸೀಟುಗಳಿಗೆ ನಿಗದಿಪಡಿಸಿರುವ ಅಭ್ಯರ್ಥಿಯ ಅರ್ಹತೆ ಹಾಗು ಇತ್ಯಾದಿ ಮಾನದಂಡಗಳನ್ನು ಓದಿಕೊಂಡು ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪಿಜಿಸಿಇಟಿ-2024ಕ್ಕೆ ದಾಖಲಿಸಿದ ಎಲ್ಲಾ ಮಾಹಿತಿಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಮಾಹಿತಿಯೇ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಆಧಾರವಾಗಿರುತ್ತದೆ, ಹಾಗೂ ಯಾವುದೇ ಕಾರಣಕ್ಕೂ ದಾಖಲಿಸಿದ ಮಾಹಿತಿಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ, ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ಮತ್ತು ಜನ್ಮ ದಿನಾಂಕವನ್ನು SATS ಸಂಖ್ಯೆಯನ್ನು ಆಧರಿಸಿ ಕರ್ನಾಟಕ SSLC ಮಂಡಳಿ ಮೂಲಕ ಪಡೆಯಲಾಗುತ್ತದೆ. ಜಾತಿ/ ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನು ಮತ್ತು 371(ಜೆ) ಆಡಿ ಸಂಖ್ಯೆಯನ್ನು ಆಧರಿಸಿ ಅಭ್ಯರ್ಥಿಯ ಜಾತಿ, ಆದಾಯ ಮತ್ತು 371(ಜೆ) ಗೆ ಸಂಬಂಧಿಸಿದ ಮಾಹಿತಿಯನ್ನು ಕಂದಾಯ ಇಲಾಖೆಯ ವೆಬ್ ಸೇವೆಯ ಮೂಲಕ ಪಡೆಯಲಾಗುವುದು. ಆನ್‌ಲೈನ್ ಅರ್ಜಿಯಲ್ಲಿ ಸರಿಯಾಗಿ SATS ಸಂಖ್ಯೆಯನ್ನು ಮತ್ತು ಆರ್‌ಡಿ ಸಂಖ್ಯೆಯನ್ನು ನಮೂದಿಸಲು ಸೂಚಿಸಿದೆ.
ಪ್ರವೇಶಾತಿ ನಿಯಮಾವಳಿ, ಅರ್ಹತೆ, ವಿವಿಧ ವೇಳಾಪಟ್ಟಿ, ಇತ್ಯಾದಿಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್ http://kea.kar.nic.inಗೆ ಭೇಟಿ ನೀಡುವುದು.












Click it and Unblock the Notifications