ವಿದೇಶಿ ನಿಯೋಗಗಳ ಜೊತೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಚರ್ಚೆ

ಬೆಂಗಳೂರು, ನವೆಂಬರ್ 17: 25ನೇ ಬೆಂಗಳೂರು ಟೆಕ್ ಶೃಂಗಸಭೆ ಹಿನ್ನೆಲೆಯಲ್ಲಿ ಆಗಮಿಸಿರುವ ಮೂರು ವಿದೇಶಿ ನಿಯೋಗಗಳಿಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಆತಿಥ್ಯ ವಹಿಸಿದೆ. ಬರ್ಲಿನ್ ಪಾಲುದಾರ ತಂಡವನ್ನು KDEM ಸ್ವಾಗತಿಸಿತು. ಇಸ್ರೇಲ್‌ನ ಹೀಬ್ರೂ ವಿಶ್ವವಿದ್ಯಾಲಯದ ತಂಡ, ಮತ್ತು ಹಾರಿಝಾನ್ 2020 ಯೋಜನೆಯ ಅಡಿಯಲ್ಲಿ ಯುರೋಪಿಯನ್ ಆಯೋಗದಿಂದ ಆರ್ಥಿಕ ನೆರವು ಪಡೆದಿರುವ ಇಯು-ಇಂಡಿಯಾ ಇನ್ನೋ ಸೆಂಟರ್ ಉಪಕ್ರಮದ ಕಾರ್ಯಕ್ರಮ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ನಿಯೋಗವು, ಭಾರತೀಯ ಮಾರುಕಟ್ಟೆಯಲ್ಲಿ ವಿಶಿಷ್ಟವಾದ ಪ್ರಭಾವ ಹೊಂದಿರುವ ಎ- ಸರಣಿಯ ತಾಂತ್ರಿಕ ನವೋದ್ಯಮಗಳನ್ನು ಅನ್ವೇಷಿಸಲು, ಪ್ರವೇಶಿಸಲು ಮತ್ತು ಬೆಳೆಯಲು ಸಾಧ್ಯತೆಗಳನ್ನು ಗುರುತಿಸಿತು.

ಕರ್ನಾಟಕದ ಬೃಹತ್ ಡಿಜಿಟಲ್ ಆರ್ಥಿಕತೆಯನ್ನು ಬಳಸಿಕೊಳ್ಳುವತ್ತ KDEM ಗಮನಹರಿಸಿದೆ. ಹಾಗೆಯೇ, ಬಿಯಾಂಡ್ ಬೆಂಗಳೂರು ಮತ್ತು ಕರ್ನಾಟಕದೆಲ್ಲೆಡೆ ಹೂಡಿಕೆ ಅವಕಾಶಗಳನ್ನು ತೆರೆಯುವುದು ಇದರ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ನಮ್ಮ ಪಾಲುದಾರ ಪರಿಸರ ವ್ಯವಸ್ಥೆಯೊಂದಿಗೆ ಸಂಭಾವ್ಯ ವ್ಯಾಪಾರ ನಿರೀಕ್ಷೆಗಳ ವಿಷಯದಲ್ಲಿ ಜಾಗತಿಕ ಕಂಪನಿಗಳು ಮತ್ತು ಹೂಡಿಕೆದಾರರಿಗೆ KDEM ಸಹಾಯ ಮಾಡುತ್ತದೆ. ಉದ್ಯಮಸ್ನೇಹಿಯಾಗಿರುವ ನಮ್ಮ ನೀತಿಗಳು, ವ್ಯವಹಾರವನ್ನು ಸುಲಭವಾಗಿ ಮಾಡುವ ಅವಕಾಶಗಳು, ಪೂರೈಕೆ ಸರಪಳಿಗಳ ಲಭ್ಯತೆ, ಪ್ರಮುಖ ವ್ಯಾಪಾರ ಪಾಲುದಾರರಿಗೆ ಪ್ರವೇಶ, ಕೌಶಲಪೂರ್ಣ ಪ್ರತಿಭೆಗಳ ಲಭ್ಯತೆ ಮುಂತಾದ ಅಂಶಗಳು ಈ ಉದ್ಯಮಗಳಿಗೆ ರಾಜ್ಯವನ್ನು ಅತ್ಯುತ್ತಮ ತಾಣವನ್ನಾಗಿ ಮಾಡುತ್ತವೆ.

ಈ ಎಲ್ಲ ಬೆಳವಣಿಗೆಗಳಿಂದ ಉಲ್ಲಸಿತರಾಗಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತಾ ಪ್ರತಿಕ್ರಿಯಿಸಿ, "ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲಿ ವ್ಯಾಪಾರದ ಪ್ರಮುಖ ಮಾರ್ಗಗಳನ್ನು ಮುಕ್ತಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಮತ್ತು ನಮ್ಮ ಧ್ಯೇಯವನ್ನು ನಾವೀಗ ಜಾಗತಿಕ ಮಟ್ಟಕ್ಕೆ ಒಯ್ಯುತ್ತಿದ್ದೇವೆ. ಎಲ್ಲ ದೇಶದ ಪಾಲುದಾರರ ಜೊತೆ ಸೇರಿ 3T ಗಳನ್ನು - ತಂತ್ರಜ್ಞಾನ (Technology), ಪ್ರತಿಭೆ (Talent) ಮತ್ತು ವ್ಯಾಪಾರ (Trade) - ಪೋಷಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ನಿಯೋಗಗಳಿಗೆ ಆತಿಥ್ಯ ನೀಡಲು ನಾವು ಸಂತೋಷಪಡುತ್ತೇವೆ ಹಾಗೂ ಭವಿಷ್ಯದಲ್ಲಿ ಜಾಗತಿಕ ನೆಟ್‌ವರ್ಕ್ ನಿರ್ಮಿಸಲು ಎದುರು ನೋಡುತ್ತಿದ್ದೇವೆ. ಬರ್ಲಿನ್‌ ಜೊತೆಗೆ ನಮ್ಮ ನವೋದ್ಯಮಗಳು ಹೂಡಿಕೆದಾರರ ನೆಲೆಗೆ ಪ್ರವೇಶವನ್ನು ಪಡೆದಿವೆ, ಹೀಬ್ರೂ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮುಂದಿನ ಜಾಗತಿಕ ನಿರ್ವಹಣಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಮಗೆ ಸಹಾಯ ಮಾಡುತ್ತದೆ, EU ಮುಂದೆಯೂ ತನ್ನ ನವೋದ್ಯಮಗಳನ್ನು ಭಾರತಕ್ಕೆ ತರಲಿದೆ' ಎಂದರು

KDEM Discussion with foreign delegations for cross border technology, Talent and Business Development

ಬರ್ಲಿನ್ ಪಾಲುದಾರ ವಿರ್ಟ್‌ಶಾಫ್ಟ್ ಮತ್ತು ಟೆಕ್ನಾಲಜಿ GmbH ಇದರ ಅಂತಾರಾಷ್ಟ್ರೀಯ ಸಂಯೋಜಕ ಮತ್ತು ಆಫ್ರಿಕಾ-ಯುರೋಪ್ ಪ್ರಾದೇಶಿಕ ವ್ಯವಸ್ಥಾಪಕ ಮಾರ್ಕಸ್ ಫಾಕ್ಲಾಮ್ ಭವಿಷ್ಯದಲ್ಲಿ ಚರ್ಚೆಗಳನ್ನು ಮುಂದುವರಿಸುವ ಆಶಯವನ್ನು ವ್ಯಕ್ತಪಡಿಸಿದರಲ್ಲದೆ, "ಪ್ರತಿ ಕಡೆಯಿಂದ ಪ್ರತಿಭೆ, ಜನರು, ಜ್ಞಾನ, ದೃಷ್ಟಿಕೋನಗಳು, ನಾವೀನ್ಯಗಳು ಮತ್ತು ತಂತ್ರಜ್ಞಾನಗಳನ್ನು ಸ್ವಾಗತಿಸುವುದು ನಮ್ಮ ಅಂತಿಮ ಗುರಿಯಾಗಿದೆ. ನಮ್ಮಲ್ಲಿ ಸಾಕಷ್ಟು ಸಾಮ್ಯವಿದೆ. ವೈಯಕ್ತಿಕ ಕೈಗಾರಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಮಾತನಾಡಲು ಮತ್ತೊಮ್ಮೆ ಭೇಟಿಯಾಗುತ್ತೇವೆ ಎಂದರು.

ದಿ ಹೀಬ್ರೂ ಯೂನಿವರ್ಸಿಟಿ ಬಿಸಿನೆಸ್ ಸ್ಕೂಲ್ ಕಾರ್ಯನಿರ್ವಾಹಕ ಶಿಕ್ಷಣದ ವ್ಯವಸ್ಥಾಪಕ ನಿರ್ದೇಶಕ ಇಟಾಯ್ ಫ್ರೈಡ್ಜಂಗ್ ಮಾತನಾಡಿ, "ನಮ್ಮ ದೇಶದ ಹೊರಗಿನ ಜನರು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಬೆಳೆಸುವಲ್ಲಿ ನಾವು ದೃಢವಾದ ವಿಶ್ವಾಸವನ್ನು ಹೊಂದಿದ್ದೇವೆ ಮತ್ತು ನಮ್ಮದೇ ದೃಷ್ಟಿಕೋನಕ್ಕೆ ಸೀಮಿತವಾಗಿ ಇರುವುದಿಲ್ಲ. KDEM ಜೊತೆಗೆ ನಮ್ಮ ಸಹಯೋಗವು ವಿಶ್ವದ ಎರಡು ಪ್ರಮುಖ ನಾವೀನ್ಯ ಕೇಂದ್ರಗಳಾಗಿರುವ ಇಸ್ರೇಲಿ ನಾವೀನ್ಯ ಮತ್ತು ಬೆಂಗಳೂರು ಪರಿಸರ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಈ ಸಹಯೋಗದ ಮೂಲಕ, ನಮ್ಮ ಅಧ್ಯಯನ ಮತ್ತು ಅಭಿವೃದ್ಧಿ ಪರಿಹಾರಗಳನ್ನು ಇಲ್ಲಿಗೆ ತರಲು ಮತ್ತು ಮರಳಿ ಕಲಿಯುವಾಗ ಸಂಸ್ಥೆಗಳಿಗೆ ಸಹಾಯವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ತಿಳಿಸಿದರು

ಇಯು-ಇಂಡಿಯಾ ಇನ್ನೊಸೆಂಟರ್‌ನ ಜೂಲಿಯಾನ್ ಫ್ರಾಮ್ಟರ್ ಮಾತನಾಡಿ, "ನಮ್ಮ ನವೋದ್ಯಮಗಳು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವಾಗ ಮತ್ತು ನೇಮಿಸಿಕೊಳ್ಳುವಾಗ ತಂತ್ರಜ್ಞಾನ ಮತ್ತು ಜ್ಞಾನವನ್ನು ದೇಶಕ್ಕೆ ವರ್ಗಾಯಿಸುತ್ತವೆ ಎಂದು ನಾವು ನಂಬುತ್ತೇವೆ. ಉದಯೋನ್ಮುಖ-ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವು ತನ್ನ ಪರಿಧಿಯನ್ನು ವಿಸ್ತರಿಸುತ್ತಿದೆ ಮತ್ತು ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಬ್ಲೂ ಕಾರ್ಪೆಟ್ ನೈಟ್ ಎಂದು ಕರೆಯಲಾಗುವ ನಮ್ಮ ಮೊದಲ ದೇಶೀಯ ಡೆಮೊ ಡೇ (Demo Day) - ಯುರೋಪಿಯನ್ ನಾವೀನ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ. ಹೆಚ್ಚುವರಿಯಾಗಿ, ಮುಂಬರುವ ಬೆಂಗಳೂರು ಟೆಕ್ ಶೃಂಗಸಭೆ, ಮಿಸೆಲಿಯೋ ಕಮ್ಯೂನಿಟಿ ಮೀಟ್-ಅಪ್ ಮುಂತಾದ ಸಮಾವೇಶಗಳು ಕ್ಲೀನ್-ಟೆಕ್, ಮೊಬಿಲಿಟಿ, ಲಾಜಿಸ್ಟಿಕ್ಸ್, ಎಂಟರ್‌ಪ್ರೈಸ್ ಟೆಕ್ ಮುಂತಾದ ವಲಯಗಳತ್ತ ನಮ್ಮ ಗಮನವನ್ನು ಸೆಳೆದಿವೆ. ಇಂತಹ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವು ಪರಿಸರ ವ್ಯವಸ್ಥೆಯಿಂದ ಆಸಕ್ತಿ ಮತ್ತು ಪ್ರೇರಣೆಯನ್ನು ಪಡೆದ ಕಾರಣ KDEM ಜೊತೆಗಿನ ಸಭೆಯು ನಮ್ಮ ಭಾರತ ಪ್ರವಾಸದ ಪ್ರಮುಖ ಭಾಗವಾಯಿತು. ಸ್ಥಳೀಯ ಪರಿಸರ ವ್ಯವಸ್ಥೆಯೊಂದಿಗಿನ ನಮ್ಮ ಸಂವಾದಗಳು ಭಾರತ ಮತ್ತು ಯುರೋಪ್ ನಡುವೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಬೆಳೆಸಲು ನೆರವಾಗುತ್ತದೆ' ಎಂದು ತಿಳಿಸಿದರು.

KDEM Discussion with foreign delegations for cross border technology, Talent and Business Development

ಬೆಂಗಳೂರು ಟೆಕ್ ಶೃಂಗಸಭೆಯು KDEM ನ ಉಪಕ್ರಮಗಳು ಮತ್ತು ಉದ್ಯಮದಿಂದ ಚಾಲಿತವಾದ ವಿದೇಶಿ ವ್ಯಾಪಾರದ ಮೇಲೆ ಗಮನ ಹರಿಸಿದೆ. IT, BT, ಮತ್ತು S&T ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರದೊಂದಿಗೆ ನಿಕಟ ಸಹಯೋಗದಲ್ಲಿ KDEM ಕಾರ್ಯನಿರ್ವಹಿಸುತ್ತದೆ. ನವೋದ್ಯಮಗಳು, ಬೆಂಗಳೂರಿನ ಹೊರಗೆ ನವೀನ ಕ್ಲಸ್ಟರ್‌ಗಳ ಸ್ಥಾಪನೆ, ಪ್ರತಿಭೆಗಳಿಗೆ ಉತ್ತೇಜನ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ESDM), IT ಉತ್ಪನ್ನಗಳು ಮತ್ತು ಸೇವೆಗಳು, BPM ಮತ್ತು GCC ಪ್ರಚಾರ - ಇವು ಇದರ ಕೇಂದ್ರೀಕೃತ ಕ್ಷೇತ್ರಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+