ಟ್ಟಿಟ್ಟರ್, ಫೇಸ್‌ಬುಕ್‌ಗೆ ಬಂತು ಕರ್ನಾಟಕ ಸರ್ಕಾರ
ಬೆಂಗಳೂರು, ಜು.14: ಇನ್ನು ಮುಂದೆ ರಾಜ್ಯ ಸರ್ಕಾರದ ಮಾಹಿತಿಗಳನ್ನು ನೀವು ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್‌ನಲ್ಲಿ ಪಡೆಯಬಹುದು. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿರುವ 'ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ' ಇದೀಗ ಸಾಮಾಜಿಕ ಜಾಲತಾಣ ಪ್ರವೇಶಿಸಿದೆ.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಾರ್ತಾ ಇಲಾಖೆಗೆ' ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಾಗಿ ಮರುನಾಮಕರಣಗೊಳಿಸಿ, ಇಲಾಖೆಯ ನವೀಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಕ್ಕೆ ಚಾಲನೆ ನೀಡಿದರು.[ಸಿದ್ದು ಸರ್ಕಾರ ಎನ್ಮಾಡ್ತಾಯಿದೆ? ವಾಟ್ಸಾಪ್ ನಲ್ಲಿ ನೋಡಿ]

ಸಾರ್ವಜನಿಕರು ಇದೀಗ ಸರ್ಕಾರದ ಯೋಜನೆಗಳ ಮಾಹಿತಿಗಳನ್ನು www.karnatakavarthe.org ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಸಂಪರ್ಕಿಸಿ ಪಡೆಯಬಹುದು.
ಸಾಮಾಜಿಕ ಜಾಲತಾಣಕ್ಕೆ ಪ್ರವೇಶಿಸುತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅಭಿನಂದನೆಗಳು. ಸಮಾಜದೊಂದಿಗೆ ನಿಕಟ ಸಂಬಂಧ ಬೆಸೆಯುವ ಈ ಪ್ರಯತ್ನ ಯಶಸ್ವಿಯಾಗಲಿ.
— Karnataka Varthe (@KarnatakaVarthe) July 14, 2014 











Click it and Unblock the Notifications