ಸಿದ್ದು ಸರ್ಕಾರ ಎನ್ಮಾಡ್ತಾಯಿದೆ? ವಾಟ್ಸಾಪ್ ನಲ್ಲಿ ನೋಡಿ

ಬೆಂಗಳೂರು, ಜೂ.24: ಕರ್ನಾಟಕ ಸರ್ಕಾರ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಕಾಲ ಕಾಲಕ್ಕೆ ಅಪ್ಡೇಟ್ ನೀಡುವ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ಮುಂದುವರೆಸಿದೆ. ಟ್ವಿಟ್ಟರ್ ಗೆ ಬಂದ ಸಿದ್ದರಾಮಯ್ಯ ಸರ್ಕಾರ ಈಗ ವಾಟ್ಸಪ್ ಗೂ ಕಾಲಿಟ್ಟಿದೆ.

ಇತ್ತೀಚೆಗೆ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಯಲ್ಲಿ ದಿಗ್ವಿಜಯ್‌ ಸಿಂಗ್‌ ಅವರು ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಟ್ವಿಟ್ಟರ್‌ ಖಾತೆ ತೆರೆಯಲು ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು.

Get Latest news updates of GOK from WhatsApp

ಆದರೆ, ದೇಶದ ಇತರೆ ಮುಖ್ಯಮಂತ್ರಿಗಳಂತೆ ಸ್ವಂತ ಟ್ವಿಟ್ಟರ್ ಐಡಿ ಬಳಸಲು ಸಿದ್ದರಾಮಯಯ್ಯ ಅವರು ಇಷ್ಟಪಡಲಿಲ್ಲವಂತೆ. ಹೀಗಾಗಿ ಕರ್ನಾಟಕ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಐಡಿ (@GOKUpdates) ಪ್ರಕಟಿಸಿ ಕಾಲಕಾಲಕ್ಕೆ ಸಿದ್ದರಾಮಯಯ್ಯ ಹಾಗೂ ಅವರ ಸಹದ್ಯೋಗಿಗಳ ದೈನಂದಿನ ಕಾರ್ಯಕ್ರಮದ ಅಪ್ದೇಡ್ ಗಳನ್ನು ನೀಡುತ್ತಿದೆ.

ಈ ಸಮಯಕ್ಕೆ ಟ್ವಿಟ್ಟರಿನಲ್ಲಿ ಸುಮಾರು 980 ಹಿಂಬಾಲಕರನ್ನು ಹೊಂದಿರುವ ಕರ್ನಾಟಕ ಸರ್ಕಾರ 55 ಜನರನ್ನು ಫಾಲೋ ಮಾಡುತ್ತಿದೆ. ಆದರೆ, ಫೇಸ್ ಬುಕ್ ನಲ್ಲಿ ಸರ್ಕಾರದ ಖಾತೆ 3,749 ಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ ಎರಡೂ ಕಡೆ ಅಪ್ದೇಡ್ ಗಳನ್ನು ಕಾಣಬಹುದು. [ಸದ್ಯದಲ್ಲೇ ಟ್ವಿಟ್ಟರ್‌ಗೆ ಸಿಎಂ ಸಿದ್ದರಾಮಯ್ಯ ಎಂಟ್ರಿ!]

ಈಗ ವಾಟ್ಸಾಪ್ (Whatsapp) ಗೆ ಕಾಲಿಟ್ಟಿರುವ ಕರ್ನಾಟಕ ಸರ್ಕಾರ ಇತ್ತೀಚೆಗೆ ಈ ಬಗ್ಗೆ ಟ್ವೀಟ್ ಮಾಡಿತ್ತು. ಇದರ ಪ್ರಕಾರ ಕರ್ನಾಟಕ ಸರ್ಕಾರದ ಅಪ್ದೇಡ್ ಪಡೆಯಲು 9591989090 ಗೆ ಸಂದೇಶ ಕಳಿಸಿದರೆ ಸಾಕು. ಉದಾಹರಣೆಗೆ ಮೇಲ್ಕಂಡ ಸಂಖ್ಯೆಗೆ GoKupdates bangalore ಎಂದು ಮೆಸೇಜ್ ಕಳಿಸಿದರೆ ಬೆಂಗಳೂರಿನ ಇತ್ತೀಚಿನ ಅಪ್ದೇಡ್ ಗಳು ನಿಮಗೆ ಸಿಗುತ್ತದೆ ಇದೇ ರೀತಿ ನಿಮ್ಮಿಷ್ಟದ ಊರಿನ ಮಾಹಿತಿ ಪಡೆಯಬಹುದು. ಒಮ್ಮೆ ಪ್ರಯತ್ನಿಸಿ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+