Karnataka Voter List 2026: ನಿಮ್ಮ ಹೆಸರೂ ಡಿಲೀಟ್ ಆಗಲಿದೆಯಾ? 44.84 ಲಕ್ಷ ಮತದಾರರಿಗೆ ಶಾಕ್, ಕೂಡಲೇ ಎಚ್ಚೆತ್ತುಕೊಳ್ಳಿ

ಬೆಂಗಳೂರು: ಇದೀಗ ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ತಮ್ಮ ಈ ಮತದಾನದ ಹಕ್ಕನ್ನ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೌದು, ನೀವು ಇತ್ತೀಚೆಗೆ ಮನೆ ಬದಲಾಯಿಸಿದ್ದು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೊಸ ವಿಳಾಸವನ್ನು ನವೀಕರಿಸಿಲ್ಲವೇ? ಹಾಗಾದರೆ ಈ ಮಹತ್ವದ ಸುದ್ದಿ ನಿಮಗಾಗಿ. ಕರ್ನಾಟಕದಲ್ಲಿ ಬರೋಬ್ಬರಿ 44.84 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರು ಈ ಕುರಿತು ಮಾಹಿತಿ ಬಿಚ್ಚಿಟ್ಟಿದ್ದು, ರಾಜಕೀಯ ಪಕ್ಷಗಳು ಹಾಗೂ ಮತದಾರರು ತಕ್ಷಣವೇ ಪಟ್ಟಿಯನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಏನಿದು ASDDO ಪಟ್ಟಿ?

ಚುನಾವಣಾ ಆಯೋಗವು 'ಪತ್ತೆಯಾಗದ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, ನಕಲು, ಮೃತಪಟ್ಟವರು ಮತ್ತು ಇತರರನ್ನು (ASDDO - Absent, Shifted, Dead, Duplicate, Others)' ಪ್ರತ್ಯೇಕವಾಗಿ ಗುರುತಿಸುವ ಕೆಲಸಕ್ಕೆ ಮುಂದಾಗಿದೆ. ಇದರ ಅಡಿಯಲ್ಲಿ ಒಟ್ಟು 44,84,331 ಜನರನ್ನು ಪಟ್ಟಿ ಮಾಡಲಾಗಿದೆ.

Karnataka Voter List

ಪತ್ರಿಕಾಗೋಷ್ಠಿಯಲ್ಲಿ ವಿ. ಅನ್ಬು ಕುಮಾರ್ ಅವರು ನೀಡಿದ ವಿವರಗಳ ಪ್ರಕಾರ, ಈ ಪೈಕಿ 5,87,457 ಮಂದಿ ಗೈರು ಹಾಜರಾಗಿದ್ದಾರೆ. 26,32,229 ಜನರು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 9,81,642 ಮಂದಿ ಮೃತಪಟ್ಟಿದ್ದರೆ, 2,70,659 ಜನರ ಹೆಸರುಗಳು ಬೇರೆ ಕಡೆಗಳಲ್ಲಿ ಮರು-ನೋಂದಣಿಯಾಗಿವೆ. ಉಳಿದಂತೆ 12,344 ಜನರು ನಮೂನೆಗೆ ಸಹಿ ಮಾಡಲು ನಿರಾಕರಿಸಿದ್ದಾರೆ. ಈ ಪಟ್ಟಿಯನ್ನ ಈಗಾಗಲೇ ಬೂತ್ ಮಟ್ಟದ ಏಜೆಂಟ್‌ಗಳ ಮೂಲಕ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಲೋಪದೋಷಗಳಿದ್ದರೆ ವರದಿ ಮಾಡಲು ಸೂಚಿಸಲಾಗಿದೆ.

ಬೆಂಗಳೂರು ಮತದಾರರು ನಿರ್ಲಕ್ಷ್ಯ ವಹಿಸಿದರೆ ಅಪಾಯ

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿಯೇ ಬರೋಬ್ಬರಿ 23,86,132 ಮತದಾರರನ್ನು ಈ ASDDO ಪಟ್ಟಿಯಡಿ ತರಲಾಗಿದೆ. ಅಂದರೆ, ರಾಜ್ಯದ ಒಟ್ಟು ಸಂಖ್ಯೆಯ ಅರ್ಧಕ್ಕೂ ಹೆಚ್ಚು ಪಾಲು ರಾಜಧಾನಿಯಲ್ಲೇ ಇದೆ.

ಉದ್ಯೋಗ, ಶಿಕ್ಷಣ ಮತ್ತಿತರ ಕಾರಣಗಳಿಗಾಗಿ ಜನರು ಪದೇ ಪದೇ ಮನೆ ಬದಲಾಯಿಸುವುದು, ಆದರೆ ಅಧಿಕೃತ ದಾಖಲೆಗಳಲ್ಲಿ ವಿಳಾಸ ಬದಲಾಯಿಸದಿರುವುದೇ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ, ಬೆಂಗಳೂರಿಗರು ತಕ್ಷಣವೇ ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ತುಂಬ ಮುಖ್ಯ.

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 66.35ರಷ್ಟು ಮುಕ್ತಾಯ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ರಾಜ್ಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಭರದಿಂದ ಸಾಗುತ್ತಿದೆ. 24 ಜಿಲ್ಲೆಗಳಲ್ಲಿ ಗಣತಿ ನಮೂನೆಗಳ ವಿತರಣೆ ಬಹುತೇಕ ನೂರಕ್ಕೆ ನೂರರಷ್ಟು ಪೂರ್ಣಗೊಂಡಿದೆ. ವಿತರಿಸಲು ಕೇವಲ 60,000 ನಮೂನೆಗಳು ಮಾತ್ರ ಬಾಕಿ ಉಳಿದಿದ್ದು, ಅವುಗಳನ್ನು ಮುಂದಿನ ಎರಡು ದಿನಗಳಲ್ಲಿ ಮನೆ ಮನೆಗೆ ತಲುಪಿಸಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.

ರಾಜ್ಯದಲ್ಲಿ ಡಿಜಿಟಲೀಕರಣ ಪ್ರಕ್ರಿಯೆಯು ಪ್ರಸ್ತುತ ಶೇ. 66.35ರಷ್ಟು ಪೂರ್ಣಗೊಂಡಿದೆ. ಹಾವೇರಿ, ಹಾಸನ, ಉತ್ತರ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಉತ್ತಮ ಸಾಧನೆ ಮಾಡಿದ್ದು, ಶೇ. 80ರಷ್ಟು ಡಿಜಿಟಲೀಕರಣ ಮುಗಿಸಿವೆ. ಆದರೆ, ಬೆಂಗಳೂರಲ್ಲಿ ಮಾತ್ರ ಕೇವಲ ಶೇ. 30ರಷ್ಟು ಆಗಿದ್ದು, ತೀರಾ ಹಿಂದುಳಿದಿದೆ. ಕಳೆದ 23 ದಿನಗಳಲ್ಲಿ 5.5 ಕೋಟಿಗೂ ಹೆಚ್ಚು ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈವರೆಗೆ 3.5 ಕೋಟಿಗೂ ಅಧಿಕ ನಮೂನೆಗಳನ್ನು ಸಂಗ್ರಹಿಸಿ ಕಂಪ್ಯೂಟರೈಸ್‌ ಮಾಡಲಾಗಿದೆ.

ಆಗಸ್ಟ್ 8 ಕೊನೆಯ ದಿನ

ಮತದಾರರು ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಇನ್ನು ಕೇವಲ 17 ದಿನಗಳು ಮಾತ್ರ ಉಳಿದಿದೆ. ಇನ್ನು ಬಾಕಿ ಇರುವ 1.5 ಕೋಟಿ ನಮೂನೆಗಳನ್ನು ತ್ವರಿತವಾಗಿ ಡಿಜಿಟಲೀಕರಣಗೊಳಿಸಬೇಕಿರುವ ಕಾರಣ, ಆಗಸ್ಟ್ 8ರ ಗಡುವಿನ ಒಳಗೆ ಸಾರ್ವಜನಿಕರು ಭರ್ತಿ ಮಾಡಿದ ನಮೂನೆಗಳನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕು ಎಂದು ಅನ್ಬು ಕುಮಾರ್ ಒತ್ತಾಯಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಸಂಬಂಧಪಟ್ಟ ಮತದಾರರು ಮನೆಯಲ್ಲಿ ಲಭ್ಯವಿಲ್ಲದಿದ್ದರೆ, ಆ ಕುಟುಂಬದ ಯಾವುದೇ ಸದಸ್ಯರು ಅವರ ಪರವಾಗಿ ಎಣಿಕೆ ನಮೂನೆಗೆ ಸಹಿ ಮಾಡಬಹುದು ಎಂಬ ಮಹತ್ವದ ಸ್ಪಷ್ಟನೆಯನ್ನೂ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+