ಇನ್ನೂ 3 ನಗರಗಳಿಗೆ KSRTC ಫ್ಲೈಬಸ್ ಪ್ರಯಾಣ

karnataka-transport-corporation-to-extend-flybus-service-to-3-cities
ಬೆಂಗಳೂರು, ಡಿ. 5- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಚರಿಸುತ್ತಿರುವ ಫ್ಲೈಬಸ್ (flybus) ಮಾದರಿಯ ಬಸ್ಸುಗಳು ಇನ್ನೂ ಮೂರು ನಗರಗಳಿಗೆ ಪ್ರಯಾಣ ಬೆಳೆಸಲಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (BIAL) ಮೈಸೂರಿಗೆ ಸಂಚರಿಸುತ್ತಿರುವ flybus ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ಮಾದರಿಯಲ್ಲಿ ಏಪ್ರಿಲ್ ತಿಂಗಳಿಂದ ಮಂಗಳೂರು, ತಿರುಪತಿ, ಕೊಡಗುಗೂ ಫ್ಲೈಬಸ್ ಸಂಚಾರ ಆರಂಭಿಸಲಿದ್ದೇವೆ.

ಇದಕ್ಕಾಗಿ 13 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (Karnataka State Road Transport Corporation - KSRTC) ವ್ಯವಸ್ಥಾಪಕ ನಿರ್ದೇಶಕ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

1.2 ಕೋಟಿ ರೂ ವೆಚ್ಚದಲ್ಲಿ ವೋಲ್ವೋದಿಂದ ಒಂದೇ ಒಂದು ಬಸ್ ಖರೀದಿಸಿ ಈ ಪ್ರೀಮಿಯರ್ ಸೇವೆ ಒದಗಿಸಲಾಗುತ್ತಿದೆ. ಸದ್ಯದಲ್ಲೇ ಉದ್ದೇಶಿತ ಮೂರು ಮಾರ್ಗಗಳಲ್ಲಿ ಇಂತಹುದೇ ಬಸ್ಸುಗಳನ್ನು ಓಡಿಸಲು ಮುಂದಿನ 3 ತಿಂಗಳಲ್ಲಿ ಇನ್ನೂ 8- 10 ಬಸ್ಸುಗಳನ್ನು ಖರೀದಿಸಲಾಗುವುದು ಎಂದು ಮಂಜುನಾಥ್ ಹೇಳಿದ್ದಾರೆ.

ಈ ಬಸ್ಸುಗಳಲ್ಲಿ ಒಂದಿಬ್ಬರು ಚಾಲಕರು ಇರುತ್ತಾರೆ. flybusಗಳ ಚಾಲಕರು ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿ ಹೊಂದಿರುತ್ತಾರೆ. KSRTC ಲೆಕ್ಕದಲ್ಲೇ ಈ ಬಸ್ಸುಗಳನ್ನು ಖರೀದಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿಶ್ವದ ಬೇರೆ ಕಡೆಗಳಲ್ಲಿ ಫ್ಲೈಬಸ್ ಉತ್ತಮ ಬೇಡಿಕೆ ಪಡೆದಿದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಬಸ್ಸನ್ನು ರಸ್ತೆ ಮೇಲೆ ಬಿಡಲಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+