SWR: ಬೆಂಗಳೂರು-ಧಾರವಾಡ, ಮೈಸೂರು-ಬೆಳಗಾವಿ ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ; ವೇಳಾಪಟ್ಟಿ
ಬೆಂಗಳೂರು: ನೂತನವಾಗಿ ತುಮಕೂರು-ದಾವಣಗೆರೆ ಹೊಸ ಬ್ರಾಡ್ ಗೇಜ್ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇದೀಗ ಇದೇ ಮಾರ್ಗದ ತೊಳಹುಣಸೆ ಯಾರ್ಡ್ ನಲ್ಲಿ ಸಂಪರ್ಕ ಜೋಡಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಬೆಂಗಳೂರು-ಹುಬ್ಬಳ್ಳಿ, ಅರಸೀಕೆರೆ, ಬೆಳಗಾವಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ ವಿವಿಧ ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ ಆಗಿದೆ. ಕೆಲವು ರೈಲುಗಳು ಭಾಗಶಃ ರದ್ದಾಗಿದ್ದು, ಇನ್ನೂ ಕೆಲವು ರೈಲುಗಳು ರದ್ದಾಗಿವೆ. ಈ ರೈಲುಗಳ ವೇಳಾಪಟ್ಟಿ ಇಲ್ಲಿದೆ.
ರದ್ದಾದ ರೈಲುಗಳ ಪಟ್ಟಿ
* ಎಸ್‌ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್ರೈಲನ್ನು (16214 ) 2026 ಅಕ್ಟೋಬರ್ 08 ಮತ್ತು 2026 ಅಕ್ಟೋಬರ 09 ರಂದು (2 ದಿನಗಳು ಮಾತ್ರ) ರದ್ದುಗೊಳಿಸಲಾಗಿದೆ.
* ಅರಸೀಕೆರೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (16213) 2026 ಅಕ್ಟೋಬರ್ 09 ಮತ್ತು 2026 ಅಕ್ಟೋಬರ್ 10ರಂದು (2 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

ರೈಲುಗಳ ಸಂಚಾರ ಭಾಗಶಃ ರದ್ದು
* ಈ ದಿನಾಂಕಗಳಾದ 22.09.2026, 23.09.2026, 27.09.2026, 01.10.2026, 02.10.2026, 03.10.2026, 06.10.2026, 07.10.2026, 08.10.2026 ಮತ್ತು 09.10.2026 ರಂದು (10 ದಿನಗಳು ಮಾತ್ರ) ಹೊರಡುವ ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12725) ಬೀರೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಧಾರವಾಡದ ಬದಲಿಗೆ ಬೀರೂರಿನಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
* ಈ ದಿನಾಂಕಗಳಲ್ಲಿ ಸೆಪ್ಟೆಂಬರ್ 23, 24.28, ಅಕ್ಟೋಬರ್ 02, 03, 04, 07, 08, 09 ಮತ್ತು ಅಕ್ಟೋಬರ್ 10 ರಂದು (10 ದಿನಗಳು ಮಾತ್ರ) ಚಲಿಸುವ ಧಾರವಾಡ-ಕೆಎಸ್‌ಆರ್ ಬೆಂಗಳೂರು ಸಿದ್ದಗಂಗಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12726) ಧಾರವಾಡದ ಬದಲಿಗೆ ಬೀರೂರಿನಿಂದಲೇ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
* ಇನ್ನೂ ಸೆಪ್ಟೆಂಬರ್ 25, 26, 27, ಅಕ್ಟೋಬರ್ 01, ಅಕ್ಟೋಬರ್ 05, 06, 11, 12 ಮತ್ತು 13ರಂದು (9 ದಿನಗಳು ಮಾತ್ರ) ಎಸ್‌ಎಸ್‌ಎಸ್ ಹುಬ್ಬಳ್ಳಿ-ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್ ರೈಲು (17347 ) ಹರಿಹರ ಮತ್ತು ಚಿತ್ರದುರ್ಗ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಹರಿಹರದಲ್ಲಿಯೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.
* ಸೆಪ್ಟೆಂಬರ್ 25, 26, 27, ಅಕ್ಟೋಬರ್ 01, 05, 06, 11, 12 ಮತ್ತು 13 ರಂದು (9 ದಿನಗಳು ಮಾತ್ರ) ಹೊರಡುವ ಚಿತ್ರದುರ್ಗ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (17348) ಚಿತ್ರದುರ್ಗದ ಬದಲಿಗೆ ಹರಿಹರದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
* ಈ ದಿನಾಂಕಗಳಲ್ಲಿ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು (20676) ಬೀರೂರು ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದೆ.
* ಈ ದಿನಾಂಕಗಳಂದು 26.09.2026, 27.09.2026, 28.09.2026, 02.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು (20675) ಬೆಳಗಾವಿಯ ಬದಲಿಗೆ ಬೀರೂರಿನಿಂದಲೇ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ರೈಲುಗಳ ಮಾರ್ಗ ಬದಲಾವಣೆ
* 2026 ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 05 ರಂದು (2 ದಿನಗಳು ಮಾತ್ರ) ಉದಯಪುರ ಸಿಟಿಯಿಂದ ಹೊರಡುವ ಉದಯಪುರ ಸಿಟಿ-ಮೈಸೂರು ಹಮ್‌ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19667)ಎಸ್‌ಎಸ್‌ಎಸ್ ಹುಬ್ಬಳ್ಳಿ-ಬಳ್ಳಾರಿ-ಗುಂತಕಲ್-ಧರ್ಮಾವರಂ-ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ದಾವಣಗೆರೆಯಲ್ಲಿ ತನ್ನ ನಿಗದಿತ ನಿಲುಗಡೆ ನೀಡುವುದಿಲ್ಲ.
* ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 05 ರಂದು (2 ದಿನಗಳು ಮಾತ್ರ) ಶ್ರೀ ಗಂಗಾನಗರದಿಂದ ಹೊರಡುವ ಶ್ರೀ ಗಂಗಾನಗರ-ತಿರುಚ್ಚಿರಾಪಳ್ಳಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22497) ಹುಬ್ಬಳ್ಳಿ-ಬಳ್ಳಾರಿ-ಗುಂತಕಲ್-ಧರ್ಮಾವರಂ-ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದೆ., ಹೀಗಾಗಿ ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಬಾಣಸವಾಡಿ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
* ಸೆಪ್ಟೆಂಬರ್ 21ರಿಂದ ಅಕ್ಟೋಬರ್ 13 ರವರೆಗೆ (23 ದಿನಗಳು ಮಾತ್ರ) ಹರಿಹರದಿಂದ ಹೊರಡುವ ಹರಿಹರ-ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು (56529) ಹರಿಹರ-ಅಮರಾವತಿ ಕಾಲೋನಿ-ತೇಲಗಿ ಮಾರ್ಗವಾಗಿ ಸಂಚರಿಸಲಿದ್ದೆ. ಹೀಗಾಗಿ ದಾವಣಗೆರೆ ಮತ್ತು ತೊಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ನೀಡುವುದಿಲ್ಲ.
* ಸೆಪ್ಟಂಬರ್ 21 ರಿಂದ ಅಕ್ಟೋಬರ್ 13 ರವರೆಗೆ (23 ದಿನಗಳು ಮಾತ್ರ) ಹೊಸಪೇಟೆಯಿಂದ ಹೊರಡುವ ಹೊಸಪೇಟೆ-ಹರಿಹರ ಡೈಲಿ ಪ್ಯಾಸೆಂಜರ್ ರೈಲು (56530) ತೇಲಗಿ-ಅಮರಾವತಿ ಕಾಲೋನಿ-ಹರಿಹರ ಮಾರ್ಗವಾಗಿ ಸಂಚರಿಸಲಿದ್ದೆ. ಹೀಗಾಗಿ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
* ಈ ದಿನಾಂಕಗಳಂದು 22.09.2026, 23.09.2026, 27.09.2026, 01.10.2026, 02.10.2026, 03.10.2026, 06.10.2026, 07.10.2026, 08.10.2026, 09.10.2026 ಮತ್ತು 11.10.2026 ರಂದು (11 ದಿನಗಳು ಮಾತ್ರ) ವಾಸ್ಕೋ-ಡ-ಗಾಮಾದಿಂದ ಹೊರಡುವ ವಾಸ್ಕೋ ಡ ಗಾಮ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು (17310) ಹುಬ್ಬಳ್ಳಿ-ಬಳ್ಳಾರಿ-ರಾಯದುರ್ಗ-ಚಿಕ್ಕಜಾಜೂರು ಮಾರ್ಗವಾಗಿ ಸಂಚರಿಸಲಿದ್ದೆ. ಹೀಗಾಗಿ ಹಾವೇರಿ, ರಾಣಿಬೆನ್ನೂರು, ಹರಿಹರ ಮತ್ತು ದಾವಣಗೆರೆ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ನೀಡುವುದಿಲ್ಲ.
* ಈ ದಿನಾಂಕಗಳಲ್ಲಿ 22.09.2026, 23.09.2026, 01.10.2026, 02.10.2026, 06.10.2026, 07.10.2026, 08.10.2026 ಮತ್ತು 09.10.2026 ರಂದು (8 ದಿನಗಳು ಮಾತ್ರ) ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ಕೆಎಸ್‌ಆರ್ ಬೆಂಗಳೂರು-ಸಿಂಧನೂರು ಡೈಲಿ ಎಕ್ಸ್‌ಪ್ರೆಸ್ ರೈಲು (17391) ಚಿಕ್ಕಜಾಜೂರು-ರಾಯದುರ್ಗ-ಗಿಣಿಗೇರಾ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಮಾಯಕೊಂಡ, ಕೋಡಗನೂರು, ದಾವಣಗೆರೆ, ಹರಿಹರ, ಚಳೇಗೇರಿ, ರಾಣಿಬೆನ್ನೂರು, ದೇವರಗುಡ್ಡ, ಬ್ಯಾಡಗಿ, ಎಸ್‌ಎಮ್‌ಎಮ್ ಹಾವೇರಿ, ಕರಜಗಿ, ಕಳಸೂರು ಹಾಲ್ಟ್, ಸವಣೂರು, ಯಲವಿಗಿ, ಕಳಸ ಹಾಲ್ಟ್, ಗುಡಗೇರಿ, ಸಂಶಿ, ಕುಂದಗೋಳ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಶಿಶ್ವಿನಹಳ್ಳಿ, ಅಣ್ಣಿಗೇರಿ, ಗದಗ, ತಳಕಲ್, ಭಾಣಾಪುರ ಮತ್ತು ಕೊಪ್ಪಳ ನಿಲ್ದಾಣಗಳಲ್ಲಿ ನಿಲುಗಡೆ ನಿಷೇಧಿಸಲಾಗಿದೆ.
* ಅಕ್ಟೋಬರ್ 03 ರಿಂದ 10 ರಂದು (12 ದಿನಗಳು ಮಾತ್ರ) ಪ್ರಯಾಗ್‌ರಾಜ್‌ನಿಂದ ಹೊರಡುವ ಪ್ರಯಾಗ್‌ರಾಜ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (04113) ದೋಣ್-ಗುತ್ತಿ-ಗುಂತಕಲ್-ಬಳ್ಳಾರಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದ್ದೆ. ಈ ರೈಲು ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ ಮತ್ತು ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
* ಅಕ್ಟೋಬರ್ 05 ರಂದು (1 ದಿನ ಮಾತ್ರ) ಯಶವಂತಪುರದಿಂದ ಹೊರಡುವ ಯಶವಂತಪುರ-ಬಾರ್ಮೇರ್ ಸಾಪ್ತಾಹಿಕ ಎಸಿ ಎಕ್ಸ್‌ಪ್ರೆಸ್ ರೈಲು (14805) ಬೀರೂರು-ಚಿಕ್ಕಜಾಜೂರು-ರಾಯದುರ್ಗ-ಬಳ್ಳಾರಿ-ಗದಗ ಮಾರ್ಗವಾಗಿ ಸಂಚರಿಸಲಿದ್ದೆ. ದಾವಣಗೆರೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ಈ ರೈಲಿನ ನಿಲುಗಡೆ ನಿಷೇಧಿಸಲಾಗಿದೆ.


Click it and Unblock the Notifications
