ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?
ಬೆಂಗಳೂರು, ಫೆಬ್ರವರಿ 24 : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ವಿವಿಧ ರಾಜಕೀಯ ಪಕ್ಷಗಳು ಬಹುಮತ ಪಡೆದ ಜಿಲ್ಲೆಗಳಿಗಿಂತ ಹೆಚ್ಚು ಜಿಲ್ಲೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ರಾಜ್ಯದ 175 ತಾಲೂಕು ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 62 ಸ್ಥಾನಗಳಿಸಿದ್ದರೆ, ಬಿಜೆಪಿ 54 ಕ್ಷೇತ್ರಗಳಲ್ಲಿ ಜಯಗಳಿಸಿ ಎರಡನೇ ಸ್ಥಾನಪಡೆದಿದೆ. ಜೆಡಿಎಸ್26 ಸ್ಥಾನಗಳಲ್ಲಿ ಜಯಗಳಿಸಿದ್ದರೆ, 35 ಪಂಚಾಯಿತಿಗಳ ಫಲಿತಾಂಶ ಅತಂತ್ರವಾಗಿದೆ. [ಚುನಾವಣಾ ಫಲಿತಾಂಶ ಉಳಿದವರು ಕಂಡಂತೆ!]

ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳಿಸಿದೆ ಎಂಬ ಮಾಹಿತಿ ಇಲ್ಲಿದೆ.
| ಜಿಲ್ಲೆ | |||||
| ತಾಲೂಕು ಪಂಚಾಯಿತಿ ಸ್ಥಾನಗಳು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಅತಂತ್ರ | |
| ಬೀದರ್ | 5 | 0 | 2 | 0 | 3 |
| ಕಲಬುರಗಿ | 7 | 1 | 2 | 0 | 4 |
| ಯಾದಗಿರಿ | 3 | 1 | 1 | 0 | 1 |
| ರಾಯಚೂರು | 5 | 2 | 1 | 0 | 2 |
| ಬಳ್ಳಾರಿ | 7 | 5 | 1 | 0 | 1 |
| ಕೊಪ್ಪಳ | 4 | 1 | 2 | 0 | 1 |
| ಬೆಳಗಾವಿ | 10 | 4 | 3 | 0 | 3 |
| ವಿಜಯಪುರ | 5 | 1 | 1 | 0 | 3 |
| ಬಾಗಲಕೋಟೆ | 6 | 2 | 4 | 0 | 0 |
| ಗದಗ | 5 | 3 | 2 | 0 | 0 |
| ಧಾರವಾಡ | 5 | 1 | 0 | 0 | 4 |
| ಉತ್ತರ ಕನ್ನಡ | 11 | 3 | 5 | 1 | 2 |
| ಹಾವೇರಿ | 7 | 2 | 4 | 0 | 1 |
| ದಾವಣಗೆರೆ | 6 | 4 | 0 | 0 | 2 |
| ಚಿತ್ರದುರ್ಗ | 6 | 0 | 3 | 0 | 3 |
| ಶಿವಮೊಗ್ಗ | 6 | 3 | 0 | 0 | 3 |
| ಉಡುಪಿ | 3 | 3 | 0 | 0 | 0 |
| ದಕ್ಷಿಣ ಕನ್ನಡ | 5 | 3 | 2 | 0 | 0 |
| ಚಿಕ್ಕಮಗಳೂರು | 7 | 6 | 1 | 0 | 0 |
| ಹಾಸನ | 8 | 0 | 2 | 5 | 1 |
| ತುಮಕೂರು | 10 | 2 | 3 | 1 | 4 |
| ಚಿಕ್ಕಬಳ್ಳಾಪುರ | 6 | 0 | 4 | 1 | 1 |
| ಕೋಲಾರ | 5 | 1 | 1 | 3 | 0 |
| ಬೆಂಗಳೂರು (ಗ್ರಾ.) | 4 | 0 | 3 | 0 | 1 |
| ಬೆಂಗಳೂರು (ನ) | 4 | 3 | 0 | 0 | 1 |
| ರಾಮನಗರ | 4 | 0 | 2 | 2 | 0 |
| ಮಂಡ್ಯ | 7 | 0 | 1 | 5 | 1 |
| ಚಾಮರಾಜನಗರ | 4 | 1 | 3 | 0 | 0 |
| ಮೈಸೂರು | 7 | 0 | 2 | 2 | 3 |
| ಕೊಡಗು | 3 | 3 | 0 | 0 | 0 |












Click it and Unblock the Notifications