ಖಾಸಗೀಕರಣದತ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಜ್ಜೆ!

ಬೆಂಗಳೂರು, ಆಗಸ್ಟ್ 27; ಕೋವಿಡ್ ಸಂದರ್ಭದಲ್ಲಿ ಉಂಟಾದ ನಷ್ಟದಿಂದ ಹೊರಬರಲು ಪ್ರಯತ್ನ ನಡೆಸುತ್ತಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆ. ಇಲಾಖೆಯ ಕೆಲವು ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಚಿಂತನೆ ನಡೆಯುತ್ತಿದೆ.

ಪ್ರವಾಸೋದ್ಯಮ ಸಚಿವರಾಗಿ ಅಧಿಕಾರವಹಿಸಿಕೊಂಡ ಆನಂದ್ ಸಿಂಗ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜಂಗಲ್ ಲಾಡ್ಜ್‌ಸ್ ಎಂಡ್ ರೆಸಾರ್ಟ್, ಕೆಎಸ್‌ಟಿಡಿಎಸ್ ನಿರ್ವಹಣೆ ಮಾಡುತ್ತಿರುವ ಕೆಲವು ಆಸ್ತಿಗಳನ್ನು ಖಾಸಗಿಗೆ ವಹಿಸುವ ಪ್ರಸ್ತಾಪವನ್ನು ಮುಂದಿಡಲಾಗಿದೆ.

ಈ ಕುರಿತು ಮಾತನಾಡಿರುವ ಸಚಿವರು, "ಸರ್ಕಾರ ನಿರ್ವಹಣೆ ಮಾಡುತ್ತಿರುವ ಜಂಗಲ್‌ ಲಾಡ್ಜ್‌ಸ್ ಮತ್ತು ಕೆಎಸ್‌ಟಿಡಿಎಸ್ ಹೋಟೆಲ್‌ಗಳನ್ನು ಖಾಸಗಿಯವರಿಗೆ ವಹಿಸುವ ಕುರಿತು ಚರ್ಚೆ ನಡೆದಿದೆ. ಈ ಚರ್ಚೆ ಇನ್ನೂ ಮೊದಲ ಹಂತದಲ್ಲಿದೆ" ಎಂದು ಸ್ಪಷ್ಟಪಡಿಸಿದರು.

Karnataka Tourism Department Thinking To Invite Private Players

"ಸರ್ಕಾರ ಏಕಾಂಗಿಯಾಗಿ ಎಲ್ಲ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು ಅಸಾಧ್ಯ. ಬಜೆಟ್‌ನಲ್ಲಿ ಅಷ್ಟು ಅನುದಾನ ನಿರೀಕ್ಷೆ ಮಾಡಲು ಸಹ ಆಗುವುದಿಲ್ಲ. ನಾವು ಆದಾಯಗಳಿಸುವುದಕ್ಕಿಂತ ಹೆಚ್ಚು ಹಣವನ್ನು ಅಭಿವೃದ್ಧಿ ಮತ್ತು ಸಿಬ್ಬಂದಿಗಳ ವೇತನಕ್ಕಾಗಿ ಖರ್ಚು ಮಾಡುತ್ತಿದ್ದೇವೆ" ಎಂದು ಆನಂದ್ ಸಿಂಗ್ ಹೇಳಿದರು.

"ನನ್ನ ತವರು ಕ್ಷೇತ್ರ ಹಂಪಿಯಲ್ಲಿಯೇ ಜಂಗಲ್‌ ಲಾಡ್ಜ್‌ಗಳು ಶೇ 80ರಷ್ಟು ಭರ್ತಿ ಆಗುವುದಿದಲ್ಲ. ಆದರೆ ಅದರ ಸಮೀಪ ಇರುವ ಖಾಸಗಿ ಹೋಟೆಲ್‌ಗಳು ಪೂರ್ಣ ಭರ್ತಿ ಆಗಿರುತ್ತದೆ. ಇಂತಹ ಸಮಸ್ಯೆಯನ್ನು ಗುರುತಿಸಿ ನಾವು ಪರಿಹಾರ ಕಂಡುಕೊಳ್ಳಬೇಕು" ಎಂದು ಸಚಿವ ಆನಂದ್ ಸಿಂಗ್ ವಿವರಣೆ ನೀಡಿದರು.

"ಇಲಾಖೆಯ ಯಾವುದೇ ಆಸ್ತಿಯನ್ನು ಮಾರಾಟ ಮಾಡದೇ ಕೆಲವು ವರ್ಷಗಳ ಕಾಲ ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ಲಾಭ ಹಂಚಿಕೆ ಆಧಾರದ ಮೇಲೆ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಗೆ ವಹಿಸಬಹುದು. ಈ ಕುರಿತು ಚಿಂತನೆ ನಡೆಯುತ್ತಿದೆ" ಎಂದು ಸಚಿವ ಆನಂದ್ ಸಿಂಗ್ ವಿವರಿಸಿದರು.

"ಖಾಸಗಿ ಅವರಿಗೆ ನೀಡುತ್ತೇವೆ ಎಂದರೆ ಕಿಕ್ ಬ್ಯಾಕ್ ಪಡೆಯುತ್ತೇವೆ ಎಂದರ್ಥವಲ್ಲ. ಪಿಪಿಪಿ ಮಾದರಿಯಲ್ಲಿ ಅಥವ ಜಾಗತಿಕ ಟೆಂಡರ್ ಕರೆದು ನಿರ್ವಹಣೆಯನ್ನು ಒಪ್ಪಿಸಲಾಗುತ್ತದೆ. ಆದರೆ ಆಸ್ತಿಗಳ ಮಾಲೀಕತ್ವ ಇಲಾಖೆಯ ಬಳಿಯೇ ಇರುತ್ತದೆ. ಈ ಚಿಂತನೆ ಸಫಲವಾಗಲಿದೆಯೇ? ಎಂದು ಇನ್ನೂ ಹಲವು ಸುತ್ತಿನ ಚರ್ಚೆಗಳು ನಡೆಯಬೇಕಿದೆ" ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿರುವ ಯಾತ್ರಿ ನಿವಾಸಗಳಲ್ಲಿ ಬಹುತೇಕ ದೇವಾಲಯಗಳಿಗೆ ಸೇರಿದ್ದಾಗಿದೆ. ಆದ್ದರಿಂದ ಇವುಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆದಿದೆ.

ಪ್ರವಾಸೋದ್ಯಮ ಇಲಾಖೆ ರಾಜ್ಯ ಟಾಪ್ 10 ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು 70 ರಿಂದ 80 ಕೋಟಿಯ ಯೋಜನೆಯನ್ನು ರೂಪಿಸುತ್ತಿದೆ. ಪ್ರವಾಸೋದ್ಯಮ ತಾಣಗಳ ಪರಿಚಯಕ್ಕಾಗಿ ಪ್ರಚಾರವನ್ನು ಸಹ ಕೈಗೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+