ಸೀಟ್ ಬೆಲ್ಟ್ ಧರಿಸದೆ ಅಪಘಾತ, ದೇಶದಲ್ಲೇ ಕರ್ನಾಟಕ ನಂಬರ್ 1
ನವದೆಹಲಿ, ಅಕ್ಟೋಬರ್ 9: ದೇಶದಲ್ಲಿ ಜನಸಂಖ್ಯೆ ಜತೆಗೆ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಮೂಹ ಸಾರಿಗೆಯನ್ನು ಹೆಚ್ಚು ಬಳಕೆ ಮಾಡಿ ಅಂದರೂ ಎಲ್ಲರೂ ತಮ್ಮ ತಮ್ಮ ಬಗ್ಗೆ ಮಾತ್ರ ಆಲೋಚಿಸುತ್ತಾರೆ.
ದೇಶದಲ್ಲಿ ದಿನಕ್ಕೆ 98 ಮಂದಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿ ಅಪಘಾತಕ್ಕೀಡಾಗುತ್ತಿದ್ದಾರೆ, ಕರ್ನಾಟಕದಲ್ಲಿ ಕಾರಿನ ಸೀಟ್ ಬೆಲ್ಟ್ ಧರಿಸದೆ ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಭಾರತೀಯ ಸಾರಿಗೆ ಇಲಾಖೆ ನೀಡಿದೆ.
ನಿಧಾನವಾಗಿ ಜನರು ಎಚ್ಚೆತ್ತುಕೊಳ್ಳುತ್ತಿದ್ದು 2016ಕ್ಕೆ ಹೋಲಿಸಿದರೆ ಅಪಘಾತ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. 2016ರಲ್ಲಿ 1.51 ಲಕ್ಷ ಮಂದಿ ಮೃತಪಟ್ಟಿದ್ದರೆ, 2017ರಲ್ಲಿ 1.48 ಲಕ್ಷ ಮಂದಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೆ ಮೃಪಟ್ಟಿದ್ದಾರೆ.

ಹೆಲ್ಮೆಟ್ ಧರಿಸದೆ ದೇಶದಲ್ಲಿ 36 ಸಾವಿರ ಜನರ ಸಾವು
2017ರಲ್ಲಿ ಹೆಲ್ಮೆಟ್ ಧರಿಸದೆ ದೇಶದಲ್ಲಿ 36 ಸಾವಿರ ಮಂದಿ ಮೃತಪಟ್ಟಿದ್ದಾರೆ. 2016ರಲ್ಲಿ 10,135 ಮಂದಿ ಮೃತಪಟ್ಟಿದ್ದರು, 2016ಕ್ಕೆ ಹೋಲಿಸಿದರೆ 2017ರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ತಮಿಳುನಾಡಿನಲ್ಲಿ 5211, ಉತ್ತರ ಪ್ರದೇಶದಲ್ಲಿ 4406, ಮಧ್ಯಪ್ರದೇಶದಲ್ಲಿ 3183 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸೀಟ್ ಬೆಲ್ಟ್ ಧರಿಸದೆ ಕರ್ನಾಟಕದಲ್ಲಿ 4035 ಮಂದಿ ಸಾವು
ಸೀಟ್ ಬೆಲ್ಟ್ ಧರಿಸದೆ ಕರ್ನಾಟಕದಲ್ಲಿ 2017ರಲ್ಲಿ ಒಟ್ಟು 4035 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 3497, ಉತ್ತರ ಪ್ರದೇಶದಲ್ಲಿ 2897 ಮಂದಿ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇವೆಲ್ಲರ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವವರ ಸಂಖ್ಯೆಯೂ ವಿಪರೀತವಾಗಿದೆ. ಉತ್ತರ ಪ್ರದೇಶದಲ್ಲಿ ವಾಹನ ಚಾಲನೆ ಮೊಬೈಲ್ ಬಳಕೆ ಮಾಡುತ್ತಾ 1512 ಮಂದಿ ಅಪಘಾತಕ್ಕೀಡಾಗಿದ್ದಾರೆ. ಮಹಾರಾಷ್ಟ್ರ 2 ನೇ ಸ್ಥಾನದಲ್ಲಿದ್ದು 282 ಮಂದಿ ಮೃತಪಟ್ಟಿದ್ದಾರೆ. ಒಡಿಶಾದಲ್ಲಿ 257 ಮಂದಿ ಸಾವಿಗೀಡಾಗಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘನೆಯೇ ಅಪಘಾತಗಳಿಗೆ ಕಾರಣ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಪಘಾತ ವರದಿ ಗಮನಿಸಿದರೆ ಸಂಚಾರ ನಿಯಮ ಉಲ್ಲಂಘನೆಯೇ ಇದೆಲ್ಲಾ ಅಪಘಾತಕ್ಕೆ ಕಾರಣ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ವರದಿ ಪ್ರಕಾರ ಶೇ.67 ರಷ್ಟು ರಸ್ತೆ ಅಪಘಾತಗಳು ಅತಿ ವೇಗದ ವಾಹನ ಚಾಲನೆಯಿಂದ ಸಂಭವಿಸುತ್ತಿದೆ.












Click it and Unblock the Notifications