Tomato Price: ಅಂದು ಒಂದು ಕೆಜಿ ಟೊಮೆಟೊ ಬೆಲೆಗೆ ಇಂದು ಒಂದ್‌ ಬಾಕ್ಸ್‌ ಟೊಮೆಟೊ ಮಾರಾಟ!

ಕಳೆದ ತಿಂಗಳಲ್ಲಿ ದೇಶಾದ್ಯಂತ ಬೆಲೆ ಏರಿಕೆಯಿಂದ ಭಾರಿ ಸುದ್ದಿ ಮಾಡಿದ್ದ ಟೊಮೆಟೊ ಸದ್ಯ ತೀವ್ರ ಕುಸಿತ ಕಂಡಿದೆ. ಕಳೆದ ತಿಂಗಳು ಒಂದು ಕೆಜಿ ಟೊಮೆಟೋ ಬೆಲೆ ಇಂದು ಒಂದು ಬಾಕ್ಸ್ ಟೊಮೆಟೊ ಮಾರಾಟವಾಗುತ್ತಿದ್ದು, ರೈತರು ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.

ಜುಲೈ ಕೊನೆಯ ವಾರದಲ್ಲಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹದಿನೈದು ಕೆ.ಜಿ ಬಾಕ್ಸ್ ಟೊಮೆಟೊ ಬೆಲೆ 2700 ರೂಪಾಯಿ ಇತ್ತು. ಆದರೆ ಭಾನುವಾರ ಟೊಮೆಟೊ ಬೆಲೆ 100 ರಿಂದ 230 ರೂಪಾಯಿಗೆ ಕುಸಿತ ಕಂಡಿದೆ. ಒಂದು ಕೆಜಿ ಟೊಮೆಟೊ ಬೆಲೆ 150-200 ರೂಪಾಯಿಗಳಿಂದ 12-15 ರೂಪಾಯಿಗೆ ಕುಸಿತ ಕಂಡಿದೆ.

Tomato Prices

ಕೋಲಾರ ಎಪಿಎಂಸಿಗೆ ಒಂದು ಕಾಲದಲ್ಲಿ ಟೊಮೆಟೊ ಆವಕ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇಲ್ಲಿಂದ ಉತ್ತರ ಭಾರತದ ರಾಜ್ಯಗಳು ಸೇರಿದಂತೆ ಅಂಡಮಾನ್ ನಿಕೋಬಾರ್ ಕೇಂದ್ರಾಡಳಿತ ಪ್ರದೇಶ ಮತ್ತು ಬಾಂಗ್ಲಾದೇಶಕ್ಕೂ ಪೂರೈಕೆಯಾಗುತ್ತಿತ್ತು. ಸದ್ಯ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಟೊಮೆಟೊ ಪೂರೈಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಹಲವು ರೈತರಿಗೆ ಖುಲಾಯಿಸಿದ್ದ ಅದೃಷ್ಟ

ಒಂದೊಮ್ಮೆ 200-250 ರೂಪಾಯಿವರೆಗೆ ಒಂದು ಕೆಜಿ ಟೊಮೆಟೊ ಬೆಲೆ ಇತ್ತು, ರೈತರು ಇಳುವರಿ ಕಡಿಮೆಯಾದರು, ಖರ್ಚು ತೆಗೆದ ಒಂದಷ್ಟು ಲಾಭದ ಮುಖ ನೋಡಿದ್ದರು. ಆದರೂ ಅನಿಶ್ಚಿತ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದ ಬಹುತೇಕ ರೈತರು ಹೆಚ್ಚಿನ ಲಾಭ ಪಡೆಯಲು ಆಗಲಿಲ್ಲ, ಇನ್ನೂ ಕೆಲವರಿಗೆ ಅದೃಷ್ಟು ಕೈ ಹಿಡಿದು ಕೋಟ್ಯಧಿಪತಿಗಳಾಗಿದ್ದು ಸುಳ್ಳಲ್ಲ.

ಟೊಮೆಟೊ ಸಾರ್ವಕಾಲಿಕ ಗರಿಷ್ಠ ದರ ಮುಟ್ಟಿದ ಬಳಿಕ, ಲಕ್ಷಾಂತರ ರೈತರು ಟೊಮೆಟೊ ಬೆಳೆಯಲು ಮುಂದಾದರು, ದೇಶಾದ್ಯಂತ ವಿವಿಧ ನರ್ಸರಿಗಳಲ್ಲಿ ಲಕ್ಷಾಂತರ ಟೊಮೆಟೊ ಸಸಿಗಳು ಮಾರಾಟವಾಗಿದ್ದವು, ಬೆಲೆ ಕುಸಿತದ ಮೊದಲೇ ತಜ್ಞರು ಮೊದಲೇ ಅಂದಾಜಿಸಿದ್ದರು ಅದರಂತೆ ಈಗ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಟೊಮೆಟೊ ದರ ಕೆಜಿಗೆ ಒಂದಂಕಿಗೆ ಬರುವ ಸಾಧ್ಯತೆ ಇದೆ.

ಒಂದು ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಭಾರಿ ಮಳೆಯಾಗಿ ಟೊಮೆಟೊ ಬೆಲೆ ನಷ್ಟವಾದರೆ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೂ, ಬೆಲೆ ಏರಿಕೆ ಸಂದರ್ಭದಲ್ಲಿ ಬೆಳೆ ಇಲ್ಲದೆ ಕೈ ಕೈ ಹಿಸುಕಿಕೊಂಡು ತಾವು ಒಂದು ಕೈ ನೋಡೇಬಿಡೋಣ ಎಂದು ಟೊಮೆಟೊ ಬೆಳೆದ ರೈತರ ಪಾಡೀಗ ಯಾರಿಗೂ ಬೇಡ ಎನ್ನುವಂತಾಗಿದೆ. ಲಾಭದ ಮಾತಿರಲಿ ಹಾಕಿದ ಬಂಡವಾಳವೂ ವಾಪಸ್ ಬರುವುದು ಕಷ್ಟ ಎನ್ನುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+