KARTET Result 2022 : ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ: ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ
ಬೆಂಗಳೂರು ಡಿಸೆಂಬರ್ 15: ಕರ್ನಾಟಕ ಶಿಕ್ಷಣ ಇಲಾಖೆಯು 2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಬಹುದು. ಈ ಪರೀಕ್ಷೆಯ ಪತ್ರಿಕೆ 1 ರಲ್ಲಿ 20,070 ಅಭ್ಯರ್ಥಿಗಳು ಅರ್ಹತೆ ಬರೆದಿದ್ದರೆ, ಪತ್ರಿಕೆ 2 ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಬಿ.ಸಿ.ನಾಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ತಿಳಿಯಿರಿ.
ನೋಂದಾಯಿತ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ತಮ್ಮ ನೋಂದಣಿ ಸಂಖ್ಯೆ / ರೋಲ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ schooleducation.kar.nic.in ವೆಬ್‌ಸೈಟ್‌ನಲ್ಲಿ ತಿಳಿಯಬಹುದು. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ನವೆಂಬರ್ 6, 2022 ರಂದು ನಡೆಸಿದ ಕಾರ್ಟೆಟ್ 2022 ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಲಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶವನ್ನು ಕೆಲ ಹೊತ್ತಿನಲ್ಲಿ ಪ್ರಕಟಿಸಲಾಗುವುದು.
— B.C Nagesh (@BCNagesh_bjp) December 14, 2022
ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ
ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.@BSBommai
ಕಾರ್ಟೆಟ್ 2022: ಫಲಿತಾಂಶ ತಿಳಿಯುವ ಪ್ರಮುಖ ವಿವರಗಳನ್ನು ಪರಿಶೀಲಿಸಿ-
ತಾತ್ಕಾಲಿಕ ಉತ್ತರ ಕೀಯನ್ನು ನವೆಂಬರ್ 9, 2022 ರಂದು ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ತರಗತಿಗಳನ್ನು (1 ರಿಂದ 5 ನೇ ತರಗತಿಗಳು) ಬೋಧಿಸಲು ಬಯಸುವ ಅಭ್ಯರ್ಥಿಗಳಿಗೆ ಪತ್ರಿಕೆ 1 ಅನ್ನು ನಡೆಸಲಾಯಿತು ಮತ್ತು ಉನ್ನತ ಪ್ರಾಥಮಿಕ ತರಗತಿಗಳಿಗೆ (6 ರಿಂದ 8 ನೇ ತರಗತಿಗಳು) ಬೋಧಿಸಲು ಬಯಸುವ ಅಭ್ಯರ್ಥಿಗಳಿಗೆ ಪತ್ರಿಕೆ 2 ಅನ್ನು ಪರೀಕ್ಷೆಯನ್ನು ನಡೆಸಲಾಯಿತು. ಆನ್‌ಲೈನ್‌ನಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದ ನಂತರ ಅದನ್ನು ಪರಿಶೀಲಿಸುವ ಮತ್ತು ಡೌನ್‌ಲೋಡ್ ಮಾಡುವ ಹಂತಗಳನ್ನು ಇಲ್ಲಿ ತಿಳಿಯಬಹುದು. ಅಭ್ಯರ್ಥಿಗಳು ಅಪ್‌ಡೇಟ್‌ಗಳನ್ನು ಈ ವೆಬ್‌ಸೈಟ್‌ನಲ್ಲಿ ತಿಳಿಯಬಹುದು.

ಕರ್ನಾಟಕ ಶಿಕ್ಷಣ ಇಲಾಖೆಯು ಫಲಿತಾಂಶ ಚೆಕ್ ಮಾಡುವ ವಿಧಾನ
* ಶಿಕ್ಷಣ ಇಲಾಖೆಯ http://www.schooleducation.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
* ತೆರೆದ ಹೋಮ್ ಪೇಜ್‌ನಲ್ಲಿ 'KARTET-2022 Results' ಎಂಬಲ್ಲಿ ಕ್ಲಿಕ್ ಮಾಡಿ.
* ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿಯನ್ನು ನೀಡಿ 'Submit' ಎಂಬಲ್ಲಿ ಕ್ಲಿಕ್ ಮಾಡಿರಿ.
* ಪರೀಕ್ಷಾ ಫಲಿತಾಂಶ ಸಿಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.












Click it and Unblock the Notifications