KRS Dam Water Level: ಬೇಸಿಗೆಯಲ್ಲಿ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಎಷ್ಟಿದೆ?

ಬೆಂಗಳೂರು, ಏಪ್ರಿಲ್ 10: ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಮುಂಗಾರು ಮಳೆಗೆ ಕೆರೆ, ಕಟ್ಟೆಗಳು, ಜಲಾಶಯಗಳು ಭರ್ತಿ ಆಗಿದ್ದವು. ಇದೀಗ ಪೂರ್ವ ಮುಂಗಾರು ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಈ ಸಂಬಂಧ ಹಳೇ ಮೈಸೂರು ಭಾಗದ ಜಿಲ್ಲೆಗಳು ಸೇರಿದಂತೆ ಬೆಂಗಳೂರಿಗೆ ಕುಡಿಯಲು ನೀರೊದಗಿಸುವ ಕೃಷ್ಣ ರಾಜ ಸಾಗರ (KRS Dam) ಜಲಾಶಯದಲ್ಲಿ ನೀರೆಷ್ಟಿದೆ. ಕರ್ನಾಟಕದ ಪ್ರಮುಖ ಜಲಾಶಗಳಲ್ಲಿ ನೀರಿನ ಒಳ ಮತ್ತು ಹೊರ ಹರಿವು ಎಷ್ಟಿದೆ ಎಂಬ ಲೇಟೆಸ್ಟ್ ಮಾಹಿತಿ ಇಲ್ಲಿದೆ.

ಪೂರ್ವ ಮುಂಗಾರು ಕೊಡಗು, ಮಡಿಕೇರಿ, ಮೈಸೂರು ಭಾಗದಲ್ಲಿ ಹಾಗೂ ಜಲಾಶಯದ ಹಿಂಭಾಗದ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಉತ್ತಮ ನೀರಿನ ಸಂಗ್ರಹಣೆ ಆಗಿದೆ. ಪ್ರತಿ ಭಾರಿ ಬೇಸಿಗೆಯಲ್ಲಿ ನೀರಿನ ಅಲ್ಲಲ್ಲಿ ಹಾಹಾಕಾರ ಉಂಟಾಗುತ್ತಿತ್ತು. ಅದರೆ ಈ ಭಾರಿ ಅಪಾರ ಪ್ರಮಾಣ ನೀರು ಇರುವ ಕಾರಣ, ನೀರಾವರಿಗೆ, ಕುಡಿಯಲು, ದನಕರುಗಳ ಬಳಕೆಗೆ ನೀರಿನ ಸಮಸ್ಯೆ ಆಗಿಲ್ಲ. ಡ್ಯಾಂನಲ್ಲಿ ಇನ್ನೂ 103 ಅಡಿಯಷ್ಟು ನೀರು ಸಂಗ್ರಹವಾಗಿದೆ. ಹೀಗೆ ಮಳೆ ಮುಂದುವರಿದರೆ, ಡ್ಯಾಂನಲ್ಲಿ ನೀರಿನ ಹೆಚ್ಚಳವಾಗಲೂಬಹುದು.

Karnataka State s Major Dams Water Level Today Including KRS Dam

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ (KSNDMC) ಪ್ರಕಾರ, ಏಪ್ರಿಲ್ 10 ರಂದು ಬೆಳಗ್ಗೆ 8 ಗಂಟೆ ಮಾಹಿತಿ ಪ್ರಕಾರ, KRS ಡ್ಯಾಂ ಒಟ್ಟು 124.80 ಅಡಿ ಪೈಕಿ 103.63 ಅಡಿಯಷ್ಡು ಕಾವೇರಿ ನೀರಿನ ಸಂಗ್ರಹ ಇದೆ. ಒಳಹರಿವು 159 ಕ್ಯೂಸೆಕ್ ಇದ್ದರೆ, ಹೊರ ಹರಿವು 665 ಕ್ಯೂಸೆಕ್ ಇದೆ. ಅದರಲ್ಲಿ 615 ನೀರು ನದಿಗೆ ಮತ್ತು 50 ಕ್ಯೂಸೆಕ್ ನೀರಾವಳಿ ಬಳಕೆಗಾಗಿ ಕಾಲುವೆಗೆ ಹರಿಸಲಾಗುತ್ತದೆ. ಬೇಸಿಗೆ ಎರಡೂವರೆ ತಿಂಗಳು ಕಳೆದರೆ ಸಹಿತ ಡ್ಯಾಂ ನಲ್ಲಿ 52.15 ರಷ್ಟು ನೀರು ಬಳಕೆಗೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Take a Poll

ಒಟ್ಟು 72 ಸಾವಿರ ಕಿಲೋ ಮೀಟರ್ ಜಲಾನಯನ ಪ್ರದೇಶಗಳಿಗೆ ಈ ಕಾವೇರಿ ನೀರು ಬಳಕೆ ಆಗುತ್ತಿದೆ. ತಲಾಕಾವೇರಿಯಲ್ಲಿ ಹುಟ್ಟಿಬರುವ ಕಾವೇರಿ ತನ್ನ ಹರಿವ ಉದ್ದಕ್ಕೂ ರಾಜ್ಯದ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಆಸರೆಯಾಗಿದೆ. ಜನರ ಭವಣೆ ನೀಗಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡಿನ ಹಲವು ಜಿಲ್ಲೆಗಳ ಜನರು ಸಹಿತ ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಹಾರಂಗಿ ಜಲಾಶಯದ ಸಂಗ್ರಹ

ಒಟ್ಟು ಸಾಮರ್ಥ್ಯ: 8.50 ಟಿಎಂಸಿ

ಇಂದಿನ ಸಂಗ್ರಹ: 3.53 ಟಿಎಂಸಿ

ಒಳ ಹರಿವು: 127 ಕ್ಯೂಸೆಕ್

ಹೊರ ಹರಿವು: 172 ಕ್ಯೂಸೆಕ್

Karnataka State s Major Dams Water Level Today Including KRS Dam

ಕೆಆರ್‌ಎಸ್ ಜಲಾಶಯದ ಸಂಗ್ರಹ

ಒಟ್ಟು ಸಾಮರ್ಥ್ಯ: 49.45 ಟಿಎಂಸಿ

ಇಂದಿನ ಸಂಗ್ರಹ: 25.85 ಟಿಎಂಸಿ

ಒಳ ಹರಿವು: 60 ಕ್ಯೂಸೆಕ್

ಹೊರ ಹರಿವು: 665 ಕ್ಯೂಸೆಕ್

ಕಬಿನಿ ಜಲಾಶಯದ ಪ್ರಮಾಣ

ಒಟ್ಟು ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಸಂಗ್ರಹ: 10.82 ಟಿಎಂಸಿ

ಒಳ ಹರಿವು: 79 ಟಿಎಂಸಿ

ಹೊರ ಹರಿವು: 1200 ಟಿಎಂಸಿ

ಆಲಮಟ್ಟಿ ಡ್ಯಾಂ ನೀರಿನ ಸಂಗ್ರಹ

ಒಟ್ಟು ಸಾಮರ್ಥ್ಯ: 123.08 ಟಿಎಂಸಿ

ಇಂದಿನ ಸಂಗ್ರಹ: 29.71 ಟಿಎಂಸಿ

ಒಳ ಹರಿವು: 00

ಹೊರ ಹರಿವು: 200 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ ಪ್ರಮಾಣ

ಒಟ್ಟು ಸಾಮರ್ಥ್ಯ: 151.75 ಟಿಎಂಸಿ

ಇಂದಿನ ಸಂಗ್ರಹ: 55.44 ಟಿಎಂಸಿ

ಒಳ ಹರಿವು: 617 ಕ್ಯೂಸೆಕ್

ಹೊರ ಹರಿವು: 6487 ಕ್ಯೂಸೆಕ್

ತುಂಗಭದ್ರಾ ಡ್ಯಾಂ ನೀರಿನ ಸಂಗ್ರಹ

ಒಟ್ಟು ಸಾಮರ್ಥ್ಯ: 105.79 ಟಿಎಂಸಿ

ಇಂದಿನ ಸಂಗ್ರಹ: 07.42 ಟಿಎಂಸಿ

ಒಳ ಹರಿವು: 5067 ಕ್ಯೂಸೆಕ್

ಹೊರ ಹರಿವು: 3699 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+