SSLC ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆದ ಚಿಕ್ಕಮಗಳೂರಿನ ಬೃಂದಾ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕಾಫಿನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ. ಈ ಸಾಧನೆ ವಿದ್ಯಾರ್ಥಿನಿ, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯಲ್ಲಿ ಅಪಾರ ಹರ್ಷ ಮೂಡಿಸಿದೆ.

ತಮ್ಮ ಈ ಯಶಸ್ಸಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೃಂದಾ, "ಈ ಯಶಸ್ಸು ಕೇವಲ ನನ್ನೊಬ್ಬಳದ್ದಲ್ಲ. ನನ್ನ ಕಠಿಣ ಪರಿಶ್ರಮದ ಜೊತೆಗೆ ತಂದೆ-ತಾಯಿ, ಹಾಗೂ ಶಾಲಾ ಶಿಕ್ಷಕರ ನಿರಂತರ ಪ್ರೋತ್ಸಾಹವೇ ಈ ಸಾಧನೆಗೆ ಮೂಲ ಕಾರಣ. ಕಷ್ಟದ ವಿಷಯಗಳನ್ನು ಹೆಚ್ಚು ಗಮನವಿಟ್ಟು ಓದುತ್ತಿದ್ದೆ. ಎಲ್ಲಾ ಆರು ವಿಷಯಗಳಿಗೂ ಸಮಾನ ಪ್ರಾಶಸ್ತ್ಯ ನೀಡಿ, ದಿನನಿತ್ಯದ ಗುರಿಯನ್ನು ಇಟ್ಟುಕೊಂಡು ಓದುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರು ನೀಡುತ್ತಿದ್ದ ವಿಶೇಷ ತರಬೇತಿ ಹಾಗೂ ಸ್ಟಡಿ ಮೆಟೀರಿಯಲ್ಸ್‌ಗಳು ಕಲಿಕೆಗೆ ಬಹಳಷ್ಟು ಸಹಾಯ ಮಾಡಿದವು," ಎಂದು ಹೇಳಿದರು. ಬೃಂದಾ ಅವರು ಪಠ್ಯವನ್ನು ಕೇವಲ ಬಾಯಿಪಾಠ ಮಾಡದೆ, ಪ್ರತಿಯೊಂದನ್ನೂ ಆಳವಾಗಿ ಅರ್ಥೈಸಿಕೊಂಡು ಓದುವ ಅಭ್ಯಾಸ ಬೆಳೆಸಿಕೊಂಡಿದ್ದರು. ಯಾವುದೇ ಸಮಯದಲ್ಲಿ ಸಂದೇಹಗಳು ಬಂದರೂ ಶಿಕ್ಷಕರು ಅದನ್ನು ಬಗೆಹರಿಸುತ್ತಿದ್ದರು ಎಂದರು.

SSLC Results

ಮುಂದಿನ ಗುರಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿರುವ ಬೃಂದಾ ಅವರಿಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇದ್ದು, ಮುಂದಿನ ದಿನಗಳಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು, ಬಳಿಕ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದರು.

ಪೋಷಕರ ಮಾತು

ಮಗಳ ಸಾಧನೆಯಿಂದ ಅತೀವ ಸಂತಸಗೊಂಡಿರುವ ತಾಯಿ ಹರ್ಷಿಣಿ ತಮ್ಮ ಮಗಳ ಪರಿಶ್ರಮದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. "ನಮ್ಮ ಮಗಳು ಎಲ್.ಕೆ.ಜಿ ಯಿಂದಲೂ ಓದಿನಲ್ಲಿ ಸದಾ ಮುಂದಿದ್ದಳು. ಅವಳು ಟಾಪರ್ ಆಗಬೇಕು ಎಂಬುದು ನಮ್ಮ ಮತ್ತು ಶಾಲೆಯ ಶಿಕ್ಷಕರ ಬಹುದಿನಗಳ ಕನಸಾಗಿತ್ತು. ಇಂದು ಆ ಕನಸು ನನಸಾಗಿದೆ. ಶಾಲೆ ಮುಗಿದ ನಂತರವೂ ಸಂಜೆ 6 ಗಂಟೆಯವರೆಗೆ ಶಾಲೆಯಲ್ಲೇ ಶಿಕ್ಷಕರು ವಿಶೇಷ ತರಬೇತಿ ನೀಡುತ್ತಿದ್ದರು. ಮನೆಗೆ ಬಂದ ನಂತರವೂ ರಾತ್ರಿ 12 ಗಂಟೆಯವರೆಗೆ ಓದುತ್ತಿದ್ದಳು. ಪರೀಕ್ಷೆಯ ಸಮಯದಲ್ಲಿ ಬೆಳಿಗ್ಗೆ 4 ಗಂಟೆಗೆ ಎದ್ದು ಏಕಾಗ್ರತೆಯಿಂದ ಓದುತ್ತಿದ್ದಳು. ಅವಳ ಈ ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ದೊರೆತಿದೆ," ಎಂದು ಭಾವುಕರಾಗಿ ನುಡಿದರು.

ಶಾಲೆಯ ಮುಖ್ಯಸ್ಥರಾದ ಜೆರಾಲ್ಡ್ ಲೋಬೋ ಅವರು ಕೂಡ ವಿದ್ಯಾರ್ಥಿನಿಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಶಾಲೆಯ ಇಡೀ ತಂಡದ ಪರಿಶ್ರಮಕ್ಕೆ ಉತ್ತಮ ಫಲ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಕಾಫಿನಾಡಿನ ಪ್ರತಿಭೆ ಬೃಂದಾ ಅವರ ಈ ಅಪ್ರತಿಮ ಸಾಧನೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+