ಕರ್ನಾಟಕ SSLC : ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶವೇ ಇಲ್ಲ

Recommended Video

      Karnataka SSLC Examination Results 2019: ದಾಖಲೆ ನಿರ್ಮಿಸಿದ ಸರ್ಕಾರೀ ಶಾಲೆ | Oneindia Kannada

      ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯು 2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ.

      ಯಾವುದೇ ಸರ್ಕಾರಿ ಶಾಲೆಗಳು ಶೂನ್ಯ ಫಲಿತಾಂಶವನ್ನು ಪಡೆಯದೆ ಜನರು ಹುಬ್ಬೇರಿಸುವಂತೆ ವಿದ್ಯಾರ್ಥಿಗಳು ಮಾಡಿದ್ದಾರೆ. ಇದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.

      2019ನೇ ಸಾಲಿನಲ್ಲಿ ಶೇ 73.70ರಷ್ಟು ಫಲಿತಾಂಶ ಬಂದಿದೆ. ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶವನ್ನು ಪಡೆದಿದ್ದಾರೆ.

      ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ 79.59ರಷ್ಟು ಬಾಲಕಿಯರು, ಶೇ 68.46ರಷ್ಟು ಬಾಲಕರು ಉತ್ತೀರ್ಣಗೊಂಡಿದ್ದಾರೆ. ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದಿದೆ.

      Karnataka sslc result No government school get zero percentage

      ಯಾದಗಿರಿ ಜಿಲ್ಲೆಯ ಕಡೆಯ ಸ್ಥಾನದಲ್ಲಿದೆ. ಇನ್ನೊಂದು ಸಂತಸದ ವಿಷಯವೇನೆಂದರೆ ಈ ಬಾರಿ ಯಾವ ಸರ್ಕಾರಿ ಶಾಲೆಯೂ ಕೂಡ ಶೂನ್ಯ ಫಲಿತಾಂಶ ಪಡೆಯದೆ ದಾಖಲೆ ನಿರ್ಮಿಸಿವೆ. ಕಳೆದ ಬಾರಿ 6 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. ಒಟ್ಟು 593 ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ.

      ಅನುದಾನಿತ ಶಾಲೆಗಳ ಪೈಕಿ 130 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಹಾಗೂ 9 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇನ್ನು 903 ಅನುದಾನರಹಿತ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಹಾಗೂ 37 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+