SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಗೆ ಮುಹೂರ್ತ ಫಿಕ್ಸ್

ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. 2023 & 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಕಾಯುತ್ತಿದ್ದಾರೆ. ಹೀಗೆ ಫಲಿತಾಂಶ ಯಾವಾಗ ಬರುತ್ತೆ? ಅಂತಾ ಕಾಯುತ್ತಿದ್ದ, ಎಸ್‌ಎಸ್‌ಎಲ್‌ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಇಲ್ಲಿದೆ. ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್‌ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿದೆ. ಹಾಗಾದ್ರೆ ಯಾವ ವೆಬ್‌ಸೈಟ್ ಮೂಲಕ ನೀವು ಫಲಿತಾಂಶ ಪರಿಶೀಲನೆ ಮಾಡಬಹುದು? ರಿಸಲ್ಟ್ ಚೆಕ್ ಮಾಡಲು ಯಾವ ದಿನಾಂಕದ ತನಕ ಕಾಯಬೇಕು? ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿರುವ ದಿನಾಂಕ ಯಾವುದು? ಮುಂದೆ ಓದಿ.

Karnataka SSLC Result 2024 Will Not Be Published On This Date

ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ!

2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು & 4.28 ಲಕ್ಷ ಬಾಲಕಿಯರು ಸೇರಿದ್ದರು. ಇದೀಗ, ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶ ಬಿಡುಗಡೆ ಆಗಲು ದಿನಗಣನೆ ಆರಂಭ ಆಗಿದೆ. ಮೇ 10 ರಂದು ಈಗ ಫಲಿತಾಂಶ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇನ್ನು ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಹೀಗಾಗಿ ಇವರೆಲ್ಲರ ಭವಿಷ್ಯ ಮೇ 10 ರಂದು ನಿರ್ಧಾರ ಆಗಲಿದೆ.

ರಿಸಲ್ಟ್ ನೋಡುವ ವೆಬ್‌ಸೈಟ್ ವಿಳಾಸ

ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶ ನೋಡೋದಕ್ಕೆ, ಮೊದಲಿಗೆ ತಮ್ಮ ರಿಜಿಸ್ಟರ್ ನಂಬರ್ / ರೋಲ್‌ ನಂಬರ್ ಹೊಂದಿರಬೇಕು. ವಿದ್ಯಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕವೇ ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು. ಈ ಮೂಲಕವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮೇ 10 ರಂದು ನಿರ್ಧಾರ ಆಗಲಿದೆ. ಹಾಗೇ ಫಲಿತಾಂಶವನ್ನ ವೀಕ್ಷಿಸಲು ಕೆಲವು ಕಡೆ ವಿಶೇಷ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ.

ಕರ್ನಾಟಕವೇ ಅತ್ಯುತ್ತಮ ರಾಜ್ಯ!

ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಆಗಿದೆ. ಅದ್ರಲ್ಲು ನಮ್ಮ ರಾಜ್ಯದಲ್ಲಿ ಅತ್ಯಂತ ಕಠಿಣ ನಿಯಮಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಇದೇ ಕಾರಣಕ್ಕೆ ಬೇರೆ ಬೇರೆ ರಾಜ್ಯದಿಂದಲೂ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಶಿಕ್ಷಣವನ್ನ ಪಡೆಯುತ್ತಾರೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಫಲಿತಾಂಶ ದೇಶದ ಗಮನ ಸೆಳೆದು, ಸುದ್ದಿಯಾಗುತ್ತದೆ. ಈ ಬಾರಿ ಕೂಡ ಅಷ್ಟೇ ಎಸ್‌ಎಸ್‌ಎಲ್‌ಸಿ ಅಂದ್ರೆ 10ನೇ ತರಗತಿ ಪರೀಕ್ಷೆ ಫಲಿತಾಂಶ ಏನಾಗುತ್ತೆ? ಅನ್ನೋದು ಸಖತ್ ಕುತೂಹಲ ಕೆರಳಿಸಿದೆ. ಹಾಗೇ ಈ ಬಾರಿ ಹುಡುಗಿಯರೇ ಮತ್ತೊಮ್ಮೆ ಟಾಪ್ ಬರ್ತಾರಾ? ಅಥವಾ ಹುಡುಗರು ಇತಿಹಾಸ ಬದಲಿಸ್ತಾರಾ? ಅಂತಾ ಕಾದು ನೋಡಬೇಕಿದೆ.

ಎಸ್‌ಎಸ್‌ಎಲ್‌ಸಿ ಮಹತ್ವದ ಘಟ್ಟ!

ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (SSLC Exam Results) ಪ್ರಮುಖ ಹಂತವಾಗಿದೆ. ಏಕೆಂದರೆ ಯಾವುದೇ ವಿದ್ಯಾರ್ಥಿಯು ತಾನು ಭವಿಷ್ಯದಲ್ಲಿ ಏನು ಓದಬೇಕು? ಭವಿಷ್ಯದಲ್ಲಿ ತನ್ನ ವೃತ್ತಿಯಾಗಿ ಯಾವ ವಿಷಯ ಸ್ವೀಕರಿಸಬೇಕು? ಎಂಬುದರ ಬಗ್ಗೆ ನಿರ್ಧಾರ ಮಾಡುವುದು ಈ ಹಂತದಲ್ಲಿ. ಹೀಗಾಗಿಯೇ ಎಸ್‌ಎಸ್‌ಎಲ್‌ಸಿ ಒಂದು ಪ್ರಮುಖ ಘಟ್ಟವಾಗಿದೆ. ಅಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ, ಅತಿ ಮುಖ್ಯವಾದ ವಿಚಾರ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ಎಲ್ಲಾ ಆಸೆ & ಆಕಾಂಕ್ಷೆ ತ್ಯಾಗ ಮಾಡಿ SSLC ಪರೀಕ್ಷೆಗೆ ಸಿದ್ಧತೆಯನ್ನ ನಡೆಸಿರುತ್ತಾರೆ. ಇದೀಗ ಅವರ ಶ್ರಮಕ್ಕೆ ಫಲ ಸಿಗುವ ಸಮಯ ಬಂದಿದ್ದು, ಈ ಫಲಿತಾಂಶ ನಿರ್ಧರಿಸಲು ಮೇ 10ರ ತನಕ ಕಾಯಬೇಕಿದೆ.

ಫಲಿತಾಂಶ ಬಿಡುಗಡೆಗೆ ಸಕಲ ಸಿದ್ಧತೆ!

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದ್ದು, ಮತ್ತೊಂದು ಕಡೆ ಪರೀಕ್ಷಾ ಮಂಡಳಿ ಅಧಿಕಾರಿಗಳು ಕೂಡ ರಿಸಲ್ಟ್ ರಿವೀಲ್ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಇನ್ನೇನು ಕೆಲವೇ ದಿನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಆಗಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಜೀವನ ನಿರ್ಧಾರ ಆಗಲಿದೆ. ಈ ಹಿನ್ನೆಲೆ ಲಕ್ಷ ಲಕ್ಷ ಕನ್ನಡಿಗರು ತಮ್ಮ ತಮ್ಮ ಮಕ್ಕಳ 10ನೇ ತರಗತಿ ಫಲಿತಾಂಶ ನೋಡಲು ಇದೀಗ ಕಾಯುತ್ತಿದ್ದಾರೆ. ಇವರಿಗೆಲ್ಲಾ ಮೇ ತಿಂಗಳ 2ನೇ ವಾರದಲ್ಲಿ ಭರ್ಜರಿ ಸಿಹಿಸುದ್ದಿ ಸಿಗುವ ಲಕ್ಷಣ ಕಾಣುತ್ತಿದೆ.

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?

10ನೇ ತರಗತಿ ಅಂದ್ರೆ ಎಸ್‌ಎಸ್‌ಎಲ್‌ಸಿ ಅನ್ನೋದು ಪ್ರತಿ ವಿದ್ಯಾರ್ಥಿಗೆ ಕೂಡ ಪ್ರಮುಖ ಘಟ್ಟ. ಆದರೆ ಇಲ್ಲಿ ಮೂಡುವ ಪ್ರಶ್ನೆ ಏನು ಅಂದ್ರೆ ಎಸ್‌ಎಸ್‌ಎಲ್‌ಸಿ ಆದ ನಂತರ ಏನು ಮಾಡಬೇಕು? ಯಾವ ಕೋರ್ಸ್ ಓದಬೇಕು? ಎಂಬುದೇ ಅನೇಕರಿಗೆ ಪ್ರಶ್ನೆ ಮೂಡಿಸುತ್ತದೆ. ಆದರೆ ಮೊದಲಿಗೆ ನೀವು ನಿಮ್ಮ ಮನಸ್ಸಿನ ಮಾತು ಕೇಳಿ. ನಿಮಗೆ ಯಾವ ವಿಷಯದಲ್ಲಿ, ನಿಮ್ಮ ವೃತ್ತಿ ಜೀವನ ಆರಂಭಿಸಬೇಕು ಎಂಬ ಆಸೆ ಇರುತ್ತದೆ ಆ ಕೋರ್ಸ್ ಆಯ್ಕೆಗೆ ನೀವು ಮೊದಲ ಆದ್ಯತೆ ನೀಡಿ. ಹಾಗೇ ನಿಮ್ಮ ಮುಂದಿನ ನಡೆ ಬಗ್ಗೆ ನಿಮ್ಮ ಮನೆಯವರು ಜೊತೆ ಹಾಗೂ ನಿಮ್ಮ ಸ್ನೇಹಿತರು & ಶಿಕ್ಷಕರ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಿ. ಯಾವುದೇ ಒತ್ತಡಕ್ಕೆ ಒಳಗಾಗಿ ನೀವು ನಿಮ್ಮ ಜೀವನ ನಿರ್ಧರಿಸಬೇಕು. ಯಾಕೆ ಅಂದ್ರೆ ಜೀವನದಲ್ಲಿ ಮತ್ತೆ ನಿಮಗೆ ಎಸ್‌ಎಸ್‌ಎಲ್‌ಸಿ ದಿನಗಳು ವಾಪಸ್ ಬರುವುದಿಲ್ಲ.

'ಪಿಯುಸಿ' ಸೇರಿದರೆ ವರ್ಕೌಟ್ ಆಗುತ್ತಾ?

ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಪ್ರತಿಯೊಬ್ಬರು ತಮ್ಮ ಭವಿಷ್ಯದ ಕುರಿತು ಯೋಚನೆ ಮಾಡಿ ಮುಂದಿನ ಶಿಕ್ಷಣದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಅದರಲ್ಲೂ ಪ್ರಮುಖವಾಗಿ ಬಹುತೇಕ ವಿದ್ಯಾರ್ಥಿಗಳು SSLC ಮುಗಿಸಿದ ನಂತರ ಪಿಯುಸಿ ಅಂದರೆ ಪದವಿ ಪೂರ್ವ ಶಿಕ್ಷಣಕ್ಕೆ ಸೇರಿ, ತಮ್ಮ ಭವಿಷ್ಯಕ್ಕಾಗಿ ಕಷ್ಟಪಡುತ್ತಾರೆ. ಹೀಗೆ ಪಿಯುಸಿ 2 ವರ್ಷ ಇರಲಿದ್ದು, ಪ್ರಥಮ ಮತ್ತು ದ್ವಿತೀಯ ಎಂದು 2 ಭಾಗವಾಗಿ ಪಿಯುಸಿ ಶಿಕ್ಷಣ ನಿರ್ಧಾರ ಮಾಡಲಾಗುತ್ತೆ. ದ್ವಿತೀಯ ಪಿಯುಸಿ ಹಂತದಲ್ಲಿ ಮತ್ತೆ ನಿಮಗೆ SSLC ರೀತಿಯಲ್ಲೇ ಬೋರ್ಡ್ ಎಕ್ಸಾಮ್ಸ್ ಇರಲಿದೆ. ಇಲ್ಲಿ ಒಟ್ಟಾರೆ 3 ಆಯ್ಕೆಗಳು ನಿಮಗೆ ಸಿಗಲಿದೆ.

ಭಾರತೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪದ್ಧತಿಗೆ ಅನುಸಾರವಾಗಿ, ಸೈನ್ಸ್ ಅಂದ್ರೆ ವಿಜ್ಞಾನ ವಿಭಾಗ, ಕಾಮರ್ಸ್ ಎಂದರೆ ವಾಣಿಜ್ಯ ವಿಭಾಗ ಹಾಗೂ ಆರ್ಟ್ಸ್ ಎಂದರೆ ಕಲಾ ವಿಭಾಗವಾಗಿ ವಿಂಗಡಣೆ ಮಾಡಲಾಗುತ್ತದೆ. ಹೀಗೆ ಈ 3 ವಿಭಾಗದಲ್ಲಿ ಮತ್ತೆ ಆಯ್ಕೆಗಳು ನಿಮಗೆ ಸಿಗುತ್ತವೆ. ಇನ್ನು ಸೈನ್ಸ್ ಅಂದ್ರೆ ವಿಜ್ಞಾನ ವಿಭಾಗದಲ್ಲಿ ಒಟ್ಟು 3 ಪ್ರಮುಖ ಆಯ್ಕೆಗಳು ನಿಮಗೆ ಸಿಗುತ್ತವೆ.

1ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ (PCMB) ತೆಗೆದುಕೊಳ್ಳಬಹುದು, 2ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ & ಕಂಪ್ಯೂಟರ್ ಸೈನ್ಸ್ (PCMC) ಕೂಡ ಆಯ್ಕೆ ಮಾಡಿಕೊಳ್ಳಬಹುದು. ಹಾಗೇ 3ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ (PCME) ಆಯ್ಕೆಯನ್ನೂ ನೀವು ಮಾಡಿಕೊಳ್ಳಬಹುದು.

ವಾಣಿಜ್ಯ ವಿಭಾಗದ ಆಯ್ಕೆಗಳು

ವಿಜ್ಞಾನ ವಿಭಾಗದ ರೀತಿಯಲ್ಲೇ ವಾಣಿಜ್ಯ ವಿಭಾಗದಲ್ಲಿ ಕೂಡ ನೀವು ಪಿಯುಸಿ ಕಲಿಯಲು ಸಾಕಷ್ಟು ವೆರೈಟಿ ಕೋರ್ಸ್‌ಗಳು ಇವೆ. ಇದರಲ್ಲಿ ಪ್ರಮುಖವಾಗಿ ನಿಮಗೆ ಹಣಕಾಸು ಮತ್ತು ಅರ್ಥಶಾಸ್ತ್ರದ ವಿಚಾರಗಳನ್ನು ಕಲಿಸುತ್ತಾರೆ. ಅರ್ಥಶಾಸ್ತ್ರ ಮತ್ತು ಅಕೌಂಟ್ಸ್ ವಿಷಯದಲ್ಲಿ, ಆಸಕ್ತಿ ಹೊಂದಿದವರಿಗೆ ಇಲ್ಲಿ ಅವಕಾಶ ಹೆಚ್ಚು. ಇದರ ಜೊತೆಗೆ ನಿಮಗೆ ಕಂಪ್ಯೂಟರ್‌ನಲ್ಲಿ ಕೂಡ ಹೆಚ್ಚು ಜ್ಞಾನ ಕಲಿಸುತ್ತಾರೆ, ಉದಾಹರಣೆಗೆ ಸಿಇಬಿಎ (CEBA), ಸಿಎಸ್‌ಬಿಎ (CSBA), ಎಂಇಬಿಎ (MEBA), ಎಂಎಸ್‌ಬಿಎ (MSBA) ಹೀಗೆ ಹಲವು ಆಯ್ಕೆಗಳು ಇರುತ್ತವೆ. ಆದರಲ್ಲಿ ನಿಮಗೆ ಬ್ಯುಸಿನೆಸ್ ಸ್ಟಡೀಸ್ & ಅಕೌಂಟ್ಸ್ ಕಡ್ಡಾಯವಾಗಿ ಓದಬೇಕು.

ಡಿಪ್ಲೊಮಾ ಇಂಜಿನಿಯರಿಂಗ್ ಮಾಡಬಹುದು!

ಮೊದಲೇ ಹೇಳಿದಂತೆ ಎಸ್‌ಎಸ್‌ಎಲ್‌ಸಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯು ಪ್ರಮುಖ ಘಟ್ಟ. ಈ ಕಾರಣಕ್ಕೆ SSLC ಪರೀಕ್ಷೆ ಫಲಿತಾಂಶಕ್ಕೆ ಲಕ್ಷಾಂತರ ಜನ ಕಾಯುತ್ತಿದ್ದಾರೆ. ಇಲ್ಲಿ ಡಿಪ್ಲೊಮಾ ಇಂಜಿನಿಯರಿಂಗ್ ಕೂಡ ಮಾಡಲು ಅವಕಾಶವೂ ಇದೆ. ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರ ಪಿಯುಸಿ ಮಾತ್ರವಲ್ಲ, ಇನ್ನೂ ಹಲವು ವಿಭಾಗಗಳಲ್ಲಿ ನೀವು ಓದಲು ಅವಕಾಶ ಇದೆ. ಈ ಪೈಕಿ ಡಿಪ್ಲೊಮಾ ಇಂಜಿನಿಯರಿಂಗ್ ಕೂಡ ಒಂದಾಗಿದ್ದು ಇದು ಉದ್ಯೋಗವನ್ನ ಹುಡುಕಲು ಕೂಡ ಅವಕಾಶ ಮಾಡಿಕೊಡುತ್ತದೆ. ಹಾಗಾದರೆ SSLC ನಂತರ, ಡಿಪ್ಲೊಮಾ ಇಂಜಿನಿಯರಿಂಗ್ ಮಾಡಲು ಯಾವೆಲ್ಲಾ ಆಯ್ಕೆಗಳು ಇವೆ? ಮುಂದೆ ಓದಿ.

1) ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್

2) ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್

3) ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್

4) ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್

5) ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‌ಗಳು

SSLC ಫಲಿತಾಂಶ ನೋಡುವ ವೆಬ್‌ಸೈಟ್!

8.69 ಲಕ್ಷ ಸಾಮಾನ್ಯ ವಿದ್ಯಾರ್ಥಿಗಳ ಜೊತೆ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಹೀಗಾಗಿ ಇವರೆಲ್ಲರ ಭವಿಷ್ಯವು ಮೇ 09 ಎಂದರೆ, ನಾಳೆಗೆ ನಿರ್ಧಾರ ಆಗಲಿದೆ. ಫಲಿತಾಂಶ ನೋಡಲು ನೀವು kseeb.kar.nic.in ಮತ್ತು karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಲು ತಿಳಿಸಲಾಗಿದೆ. ಹಾಗೇ ಕೆಲವು ಶಾಲೆಗಳಲ್ಲಿ ಫಲಿತಾಂಶದ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು. ನಾಳೆ ಬೆಳಗ್ಗೆ, ಕರ್ನಾಟಕ ಪರೀಕ್ಷಾ ಮಂಡಳಿಯು ಸುದ್ದಿಗೋಷ್ಠಿ ನಡೆಸಲಿದೆ. ಆ ನಂತರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅಧಿಕೃತವಾಗಿ ರಿಲೀಸ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+