SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ನೋಡಿ ಫಲಿತಾಂಶದ ದಿನ!

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲು ಕೊನೆಗೂ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಮಾಡಿ, ಮುಹೂರ್ತ ಇಟ್ಟಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು, ಇಷ್ಟು ದಿನ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಸುಮಾರು 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ. ಈ ಬಗ್ಗೆ ಇಂಚಿಂಚು ಮಾಹಿತಿ ತಿಳಿಯಲು ಮುಂದೆ ಓದಿ.

2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರು ಸೇರಿದ್ದರು. ಈಗ ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶವು ಬಿಡುಗಡೆ ಆಗಲು ಕೆಲವೇ ಗಂಟೆ ಬಾಕಿ ಇದೆ. ಮೇ 09 ರಂದು SSLC ಫಲಿತಾಂಶ ಬಿಡುಗಡೆ ಆಗಲಿದೆ ಎಂದು, ಅಧಿಕೃತ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಯಾವ ಯಾವ ವೆಬ್‌ಸೈಟ್ ಮೂಲಕ ನೀವು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಣೆ ಮಾಡಬಹುದು ಗೊತ್ತೆ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Karnataka SSLC Result 2024 Will Be Published On 09 May 2024

SSLC ಫಲಿತಾಂಶ ನೋಡುವ ವೆಬ್‌ಸೈಟ್!

8.69 ಲಕ್ಷ ಸಾಮಾನ್ಯ ವಿದ್ಯಾರ್ಥಿಗಳ ಜೊತೆ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಹೀಗಾಗಿ ಇವರೆಲ್ಲರ ಭವಿಷ್ಯವು ಮೇ 09 ಎಂದರೆ, ನಾಳೆಗೆ ನಿರ್ಧಾರ ಆಗಲಿದೆ. ಫಲಿತಾಂಶ ನೋಡಲು ನೀವು kseeb.kar.nic.in ಮತ್ತು karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಲು ತಿಳಿಸಲಾಗಿದೆ. ಹಾಗೇ ಕೆಲವು ಶಾಲೆಗಳಲ್ಲಿ ಫಲಿತಾಂಶ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿದ್ದು. ನಾಳೆ ಬೆಳಗ್ಗೆ, ಕರ್ನಾಟಕ ಪರೀಕ್ಷಾ ಮಂಡಳಿಯು ಸುದ್ದಿಗೋಷ್ಠಿ ನಡೆಸಲಿದೆ. ಆ ನಂತರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅಧಿಕೃತವಾಗಿ ರಿಲೀಸ್ ಆಗಲಿದೆ.

ಕರ್ನಾಟಕ ರಾಜ್ಯವೇ ಬೆಸ್ಟ್!

ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್‌ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿದೆ. ಹೀಗಾಗಿ ನಾಳೆ ಬಹುಮುಖ್ಯ ಸುದ್ದಿಗೋಷ್ಠಿ ನಡೆಸಲು ಇದೀಗ ಕರ್ನಾಟಕ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ. ಅಲ್ಲದೆ ಈ ಕುರಿತು ಅಧಿಕೃತವಾಗಿ ನೋಟಿಫಿಕೇಷನ್ ಕೂಡ ನೀಡಲಾಗಿದೆ.

ಟಿಕ್.. ಟಿಕ್.. ಟಿಕ್.. ಬರುತಿದೆ ಕಾಲ!

ಎಸ್‌ಎಸ್‌ಎಲ್‌ಸಿ ಫಲಿತಾಂಶ ಇನ್ನೇನು ಘೋಷಣೆ ಆಗಲಿದೆ. ಲಕ್ಷ ಲಕ್ಷ ವಿದ್ಯಾರ್ಥಿಗಳು, ಕಾದು ಕುಳಿತಿದ್ದ SSLC ರಿಸಲ್ಟ್ ಇಂದು ಘೋಷಣೆ ಆಗಲಿದ್ದು. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ & ಭವಿಷ್ಯದ ಭಾರತಕ್ಕೆ ವಿಜ್ಞಾನಿಗಳು, ಚಿಂತಕರು, ಶಿಕ್ಷಕರು, ನೌಕರರು, ಸಾಧಕರನ್ನು ನೀಡುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಘೋಷಣೆ ಆಗುತ್ತಿದೆ. ಹಾಗಾದರೆ ಯಾವ ಜಿಲ್ಲೆಗೆ ಪ್ರಥಮ, ಯಾವ ಜಿಲ್ಲೆಗೆ ದ್ವಿತೀಯ, ಯಾವ ಜಿಲ್ಲೆಗೆ ತೃತೀಯ ಸ್ಥಾನ ಸಿಗಲಿದೆ? ಎಂಬುದು ಕೂಡ ಈ ಸಮಯದಲ್ಲಿ ತೀವ್ರ ಕುತೂಹಲ ಕೆರಳಿಸುತ್ತಿದೆ. ಈ ಎಲ್ಲಾ ಕುತೂಹಲಕ್ಕೆ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+