SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಕರ್ನಾಟಕ ಪರೀಕ್ಷಾ ಮಂಡಳಿ ಹೇಳಿದ್ದೇನು?
ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಮಹತ್ವದ ಸೂಚನೆ ಸಿಕ್ಕದೆ, ಅದರಲ್ಲೂ ಇಡೀ ದೇಶ ಈಗ ಕರ್ನಾಟಕದ 10ನೇ ತರಗತಿ ಫಲಿತಾಂಶ ತಿಳಿಯಲು ಕಾಯುತ್ತಿದೆ. ಕರ್ನಾಟಕ ರಾಜ್ಯ, ಶಿಕ್ಷಣದ ವಿಚಾರದಲ್ಲಿ ಇಡೀ ದೇಶದಲ್ಲೇ ಹೆಸರು ಪಡೆದಿದ್ದು, ನಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತದೆ. ಅದೇ ರೀತಿ, SSLC ಪರೀಕ್ಷೆ ಮೂಲಕ ಮಕ್ಕಳಿಗೆ ಕಾಲೇಜು ಹಂತಕ್ಕೆ ಹೋಗಲು ಬೋರ್ಡ್ ಎಕ್ಸಾಮ್ ಕೂಡ ಮಾಡಲಾಗುತ್ತದೆ. ಹಾಗಾದರೆ, ಇದೀಗ ಕರ್ನಾಟಕ ಪರೀಕ್ಷಾ ಮಂಡಳಿ SSLC ಪರೀಕ್ಷೆ ಫಲಿತಾಂಶದ ಬಗ್ಗೆ ನೀಡಿರುವ ಸೂಚನೆಯಲ್ಲಿ ಏನಿದೆ? ಬನ್ನಿ ತಿಳಿಯೋಣ.
ಹೌದು, 10ನೇ ತರಗತಿ ಅಂದ್ರೆ ಎಸ್‌ಎಸ್‌ಎಲ್‌ಸಿ ಅನ್ನೋದು ಪ್ರತಿ ವಿದ್ಯಾರ್ಥಿಗೆ ಕೂಡ ಪ್ರಮುಖ ಘಟ್ಟ. ಇಲ್ಲಿ ಮೂಡುವ ಪ್ರಶ್ನೆ ಏನು ಅಂದ್ರೆ ಎಸ್‌ಎಸ್‌ಎಲ್‌ಸಿ ಆದ ನಂತರ ಏನು ಮಾಡಬೇಕು? ಯಾವ ಕೋರ್ಸ್ ಓದಬೇಕು? ಎಂಬುದೇ ಅನೇಕರಿಗೆ ಪ್ರಶ್ನೆ ಮೂಡಿಸುತ್ತದೆ. ಯಾಕೆ ಅಂದ್ರೆ ಈ ಹಂತ ದಾಟಿದ ನಂತರ ಪ್ರತಿಯೊಬ್ಬರೂ ಅವರ ಜೀವನ ಅವರೇ ರೂಪಸಿಕೊಳ್ಳಬೇಕು. ಇದೇ ಕಾರಣಕ್ಕೆ, SSLC ಪರೀಕ್ಷೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮರೆಯಲಾಗದ ಸಿಹಿ & ಕಹಿ ಅನುಭವ ನೀಡುತ್ತೆ. ಹಾಗಾದ್ರೆ ಈಗ SSLC ಪರೀಕ್ಷೆ ಫಲಿತಾಂಶದ ಬಗ್ಗೆ ನೀಡಿರುವ ಸೂಚನೆ ಏನು? ಮುಂದೆ ಓದಿ.

ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಂದೇ ಬಿಡ್ತು!
SSLC ಪರೀಕ್ಷೆ ಫಲಿತಾಂಶದ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಸೂಚನೆ ಪ್ರಕಾರ, 'ಮಾರ್ಚ್ / ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ನ್ನು ದಿನಾಂಕ: 25.03.2024 ರಿಂದ 06.04.2024 ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 09.05.2024 ರಂದು ಬೆಳಗ್ಗೆ 10.30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -560003. ಇಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದೆ. ಫಲಿತಾಂಶ https://karresults.nic.in ಜಾಲತಾಣದಲ್ಲಿ ದಿನಾಂಕ: 09.05.2024ರ ಬೆಳಗ್ಗೆ 10.30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ.' ಎಂದು ಮಾಹಿತಿ ನೀಡಲಾಗಿದೆ.
ಕರ್ನಾಟಕ ರಾಜ್ಯವೇ ಬೆಸ್ಟ್!
ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿದೆ. ಹೀಗಾಗಿ ನಾಳೆ ಬಹುಮುಖ್ಯ ಸುದ್ದಿಗೋಷ್ಠಿ ನಡೆಸಲು ಇದೀಗ ಕರ್ನಾಟಕ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ. ಅಲ್ಲದೆ ಈ ಕುರಿತು ಅಧಿಕೃತವಾಗಿ ನೋಟಿಫಿಕೇಷನ್ ಕೂಡ ನೀಡಲಾಗಿದೆ.
ಟಿಕ್.. ಟಿಕ್.. ಟಿಕ್.. ಬರುತಿದೆ ಕಾಲ!
ಎಸ್‌ಎಸ್‌ಎಲ್‌ಸಿ ಫಲಿತಾಂಶ ಇನ್ನೇನು ಘೋಷಣೆ ಆಗಲಿದೆ. ಲಕ್ಷ ಲಕ್ಷ ವಿದ್ಯಾರ್ಥಿಗಳು, ಕಾದು ಕುಳಿತಿದ್ದ SSLC ರಿಸಲ್ಟ್ ಇಂದು ಘೋಷಣೆ ಆಗಲಿದ್ದು. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ & ಭವಿಷ್ಯದ ಭಾರತಕ್ಕೆ ವಿಜ್ಞಾನಿಗಳು, ಚಿಂತಕರು, ಶಿಕ್ಷಕರು, ನೌಕರರು, ಸಾಧಕರನ್ನು ನೀಡುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಘೋಷಣೆ ಆಗುತ್ತಿದೆ. ಹಾಗಾದರೆ ಯಾವ ಜಿಲ್ಲೆಗೆ ಪ್ರಥಮ, ಯಾವ ಜಿಲ್ಲೆಗೆ ದ್ವಿತೀಯ, ಯಾವ ಜಿಲ್ಲೆಗೆ ತೃತೀಯ ಸ್ಥಾನ ಸಿಗಲಿದೆ? ಎಂಬುದು ಕೂಡ ಈ ಸಮಯದಲ್ಲಿ ತೀವ್ರ ಕುತೂಹಲ ಕೆರಳಿಸುತ್ತಿದೆ. ಈ ಎಲ್ಲಾ ಕುತೂಹಲಕ್ಕೆ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಉತ್ತರ ಸಿಗಲಿದೆ.












Click it and Unblock the Notifications