ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : ಶೇ 73.70 ಫಲಿತಾಂಶ

Recommended Video

      Karnataka SSLC Examination Results 2019: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಿನ್ನೆಲೆ ಯಾವ ಜಿಲ್ಲೆಗೆ ಯಾವ ಸ್ಥಾನ?

      ಬೆಂಗಳೂರು, ಏಪ್ರಿಲ್ 30 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಘೋಷಣೆ ಮಾಡಿದೆ. ಶಾಲೆಗಳಲ್ಲಿ ಮೇ 1ರಂದು ಫಲಿತಾಂಶ ಲಭ್ಯವಾಗಲಿದೆ.

      ಮಂಗಳವಾರ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾ ಶಂಕರ್, ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದರು. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಇಂದು ಫಲಿತಾಂಶ ಪಡೆಯಬಹುದಾಗಿದೆ.

      SSLC examination

      2019ನೇ ಸಾಲಿನಲ್ಲಿ 2,847 ಪರೀಕ್ಷಾ ಕೇಂದ್ರಗಳಲ್ಲಿ 8,41,666 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಮಾರ್ಚ್ 22 ರಿಂದ ಏಪ್ರಿಲ್ 4ರ ತನಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿತ್ತು. ಮಧ್ಯಾಹ್ನ 1 ಗಂಟೆಯ ಬಳಿಕ ಆನ್‌ಲೈನ್‌ನಲ್ಲಿ ಪರೀಕ್ಷೆ ಫಲಿತಾಂಶ ಸಿಗಲಿದೆ.

      'ಮೌಲ್ಯ ಮಾಪನ ಆದ ನಂತರ ಕೇಂದ್ರದಿಂದಲೇ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದೇವೆ. ಆದ್ದರಿಂದ, ಇಷ್ಟು ಬೇಗ ಫಲಿತಾಂಶವನ್ನು ನೀಡಲು ಸಾಧ್ಯವಾಯಿತು' ಎಂದು ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಉಮಾ ಶಂಕರ್ ಹೇಳಿದರು.

      2019ನೇ ಸಾಲಿನಲ್ಲಿ ಶೇ 73.70ರಷ್ಟು ಫಲಿತಾಂಶ ಬಂದಿದೆ. ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶವನ್ನು ಪಡೆದಿದ್ದಾರೆ.

      ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ 79.59ರಷ್ಟು ಬಾಲಕಿಯರು, ಶೇ 68.46ರಷ್ಟು ಬಾಲಕರು ಉತ್ತೀರ್ಣಗೊಂಡಿದ್ದಾರೆ. ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆಯ ಕಡೆಯ ಸ್ಥಾನದಲ್ಲಿದೆ.

      ವಿದ್ಯಾರ್ಥಿಗಳು www.kaceb.kar.nic.in ಮತ್ತು www.karresults.nic.in ವೆಬ್ ಸೈಟ್‌ ಮೂಲಕ ಫಲಿತಾಂಶವನ್ನು ಮಧ್ಯಾಹ್ನ 1 ಗಂಟೆ ಬಳಿಕ ವೀಕ್ಷಿಸಬಹುದಾಗಿದೆ.

      2018-19ನೇ ಸಾಲಿನ ಫಲಿತಾಂಶ

      2018-19ನೇ ಸಾಲಿನ ಫಲಿತಾಂಶ

      2018-19ನೇ ಸಾಲಿನಲ್ಲಿ 8,25,468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 608336 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 73.70ಯಷ್ಟು ಫಲಿತಾಂಶ ಬಂದಿದೆ. 2017-18ನೇ ಸಾಲಿನಲ್ಲಿ ಅಂದರೆ ಕಳೆದ ವರ್ಷದಲ್ಲಿ 71.93ರಷ್ಟು ಫಲಿತಾಂಶ ಬಂದಿತ್ತು.

      ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು

      ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು

      * 5202 ಸರ್ಕಾರಿ ಶಾಲೆಗಳಲ್ಲಿ 21,68,44 ವಿದ್ಯಾರ್ಥಿಗಳು ಉತ್ತೀರ್ಣ, ಶೇ 77.84ರಷ್ಟು ಫಲಿತಾಂಶ

      * 3243 ಅನುದಾನಿತ ಶಾಲೆಗಳಲ್ಲಿ 155111 ವಿದ್ಯಾರ್ಥಿಗಳು ಉತ್ತೀರ್ಣ, ಶೇ 77.21ರಷ್ಟು ಫಲಿತಾಂಶ

      * 6002 ಅನುದಾನ ರಹಿತ ಶಾಲೆಗಳಲ್ಲಿ 214360 ವಿದ್ಯಾರ್ಥಿಗಳು ಉತ್ತೀರ್ಣ ಶೇ 82.72ರಷ್ಟು ಫಲಿತಾಂಶ

      ಮಾಧ್ಯಮವಾರು ಫಲಿತಾಂಶ

      ಮಾಧ್ಯಮವಾರು ಫಲಿತಾಂಶ

      * ಕನ್ನಡ ಮಾಧ್ಯಮದ 346103 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು 70.1ರಷ್ಟು ಫಲಿತಾಂಶ
      * ಆಂಗ್ಲ ಮಾಧ್ಯಮದ 238471 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು 80.88ರಷ್ಟು ಫಲಿತಾಂಶ
      * ಹಿಂದಿ ಮಾಧ್ಯಮದ 168 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, 48.81 ರಷ್ಟು ಫಲಿತಾಂಶ

      ಯಾವ ಜಿಲ್ಲೆ ಮೊದಲು, ಯಾವುದು ಕೊನೆ

      ಯಾವ ಜಿಲ್ಲೆ ಮೊದಲು, ಯಾವುದು ಕೊನೆ

      * ಹಾಸನ ಜಿಲ್ಲೆ ಪ್ರಥಮ ಶೇ 89.33 ಫಲಿತಾಂಶ
      * ರಾಮನಗರ ಜಿಲ್ಲೆ 88.49 ರಷ್ಟು ಫಲಿತಾಂಶ
      * ಬೆಂಗಳೂರು ಗ್ರಾಮಾಂತರ 88.34 ಫಲಿತಾಂಶ
      * ಉತ್ತರ ಕನ್ನಡ 88.12 ಫಲಿತಾಂಶ
      * ಉಡುಪಿ 87.97ರಷ್ಟು ಫಲಿತಾಂಶ
      * ಯಾದಗಿರಿ ಕೊನೆ ಸ್ಥಾನ 53.35 ಫಲಿತಾಂಶ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+