ನಿಮ್ಮ ಪಿಂಚಣಿ ನಿಂತಿದೆಯಾ? 17.97 ಲಕ್ಷ ಫಲಾನುಭವಿಗಳಿಗೆ ನೋಟಿಸ್, 30 ದಿನದಲ್ಲಿ ದಾಖಲೆ ನೀಡದಿದ್ದರೆ ರದ್ದು

ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ (Social Security Pension) ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರ ಬಿಗ್ ಶಾಕ್ ನೀಡಿದೆ ನೋಡಿ. ಹೌದು, ಈಗಾಗಲೇ ಸೂಕ್ತ ದಾಖಲೆಗಳಿಲ್ಲದ ಹಾಗೂ ಅನುಮಾನಾಸ್ಪದವಾಗಿರುವ 17.97 ಲಕ್ಷಕ್ಕೂ ಅಧಿಕ ಮಂದಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಆಯುಕ್ತಾಲಯ ನೋಟಿಸ್ ಜಾರಿ ಮಾಡಿದೆ. ಮುಂದಿನ 30 ದಿನಗಳೊಳಗೆ ಅಗತ್ಯ ದಾಖಲೆಗಳನ್ನ ನೀಡದಿದ್ದರೆ ಅಂತಹವರ ಪಿಂಚಣಿಯನ್ನ ಸಂಪೂರ್ಣವಾಗಿ ರದ್ದುಗೊಳಿಸಲು ಇಲಾಖೆ ಮುಂದಾಗಿದೆ.

Social Security Pension

ಸುಳ್ಳು ದಾಖಲೆ ನೀಡಿ ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳುವವರನ್ನ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಇದರಿಂದ ನಿಜವಾದ ಹಾಗೂ ಅರ್ಹ ಫಲಾನುಭವಿಗಳು ಕಚೇರಿಗಳಿಗೆ ಹಾಗೂ ಅಧಿಕಾರಿಗಳ ಹಿಂದೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣಾಗಿದೆ.

ಪಿಂಚಣಿ ದಾಖಲೆಗಳ ಪರಿಶೀಲನೆ

ರಾಜ್ಯದಲ್ಲಿ ಒಟ್ಟು 83,12,411 ಮಂದಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿದ್ದಾರೆ. ಈ ಡೇಟಾಬೇಸ್ ಅನ್ನು ಸರ್ಕಾರದ ಬಿಐಎಸ್ ತಂತ್ರಾಂಶದೊಂದಿಗೆ ತಾಳೆ ಮಾಡಿ ನೋಡಿದಾಗ ಬರೋಬ್ಬರಿ 23,14,450 ಮಂದಿಯ ಮಾಹಿತಿಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಇವರ ಪಿಂಚಣಿಯನ್ನ ತಾತ್ಕಾಲಿಕವಾಗಿ ತಡೆಹಿಡಿದು, ಮರು ಪರಿಶೀಲನೆಗೆ ಆದೇಶಿಸಲಾಗಿತ್ತು. ಕಳೆದ ಐದು ತಿಂಗಳ ಅವಧಿಯಲ್ಲಿ ಸುಮಾರು 5.17 ಲಕ್ಷ ಮಂದಿ ತಮ್ಮ ದಾಖಲೆಗಳನ್ನ ಮರುಸಲ್ಲಿಸಿ, ತಾವು ಪಿಂಚಣಿಗೆ ಅರ್ಹರು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಆದರೆ, ಆಗಸ್ಟ್ ಮೊದಲ ವಾರದಿಂದ ಇಂದಿನವರದೆಗೆ ಉಳಿದ 17,97,193 ಮಂದಿ ಯಾವುದೇ ದಾಖಲೆಗಳನ್ನು ನೀಡಿಲ್ಲ. ಸುಳ್ಳು ವಯಸ್ಸು ನಮೂದಿಸಿದವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಬೇರೆಡೆ ವಲಸೆ ಹೋದವರೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.

ಹಿರಿಯ ನಾಗರಿಕರ ಪಿಂಚಣಿ ಸ್ಥಗಿತ

ಈಗಾಗಲೇ ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ ಪಿಂಚಣಿ ಪಡೆಯುವಾಗ ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿದ್ದ 79,988 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಇವರ ಪಿಂಚಣಿಯನ್ನ ಶಾಶ್ವತವಾಗಿ ರದ್ದುಗೊಳಿಸಲಾಗಿದೆ. ಇದರ ಜೊತೆಗೆ, ನೀಡಲಾದ ವಿಳಾಸದಲ್ಲಿ ವಾಸವಿಲ್ಲದ 2.53 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪತ್ತೆಯಾಗಿದ್ದಾರೆ. ಇವರು ತಕ್ಷಣವೇ ತಮ್ಮ ವ್ಯಾಪ್ತಿಯ ತಹಶೀಲ್ದಾರ್‌ಗಳ ಕಚೇರಿಯನ್ನ ಸಂಪರ್ಕಿಸಿ ಸೂಕ್ತ ವಿಳಾಸ ದೃಢೀಕರಣ ನೀಡುವಂತೆ ಇಲಾಖೆ ಸೂಚಿಸಿದೆ.

ತಹಸೀಲ್ದಾರ್ ಮಾರ್ಗಸೂಚಿ

ದಾಖಲೆಗಳನ್ನ ಸಲ್ಲಿಸಲು ಆಗದ 17.97 ಲಕ್ಷ ಮಂದಿಗೆ ಈಗಾಗಲೇ ತಹಶೀಲ್ದಾರ್‌ಗಳ ಮೂಲಕ ಅಧಿಕೃತ ನೋಟಿಸ್ ಹಾಗೂ ಎಡಿ ಸಿಎಸ್ ತಂತ್ರಾಂಶದ ಮೂಲಕ ಮೊಬೈಲ್‌ಗೆ ಎಸ್ಎಂಎಸ್ ಸಂದೇಶಗಳನ್ನ ಕಳುಹಿಸಲಾಗುತ್ತಿದೆ. "ನೋಟಿಸ್ ಅಥವಾ ಸಂದೇಶ ಬಂದ ತಕ್ಷಣ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ನೋಟಿಸ್ ತಲುಪಿದ 30 ದಿನಗಳ ಒಳಗಾಗಿ ತಮ್ಮ ವಯಸ್ಸಿನ ದೃಢೀಕರಣ, ಆದಾಯ ಮತ್ತು ವಿಳಾಸದ ಪ್ರಮಾಣಪತ್ರ ಹಾಗೂ ಈ ಹಿಂದೆ ಪಿಂಚಣಿ ಪಡೆದ ಬ್ಯಾಂಕ್ ವಿವರಗಳನ್ನ ಸಂಬಂಧಪಟ್ಟ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕು. ದಾಖಲೆಗಳು ಸರಿಯಾಗಿದ್ದರೆ ಮಾತ್ರವೇ ಪಿಂಚಣಿ ಮುಂದುವರಿಸಲಾಗುವುದು" ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಆಯುಕ್ತಾಲಯದ ತಹಸೀಲ್ದಾರ್ ಎಸ್.ಎನ್. ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಪಿಂಚಣಿಗೆ ಆದಾಯ ಪ್ರಮಾಣಪತ್ರ ಕಡ್ಡಾಯ: ಹಿರಿಯರ ಪರದಾಟ

ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ನಿಜವಾದ ಬಡವರು ಹಾಗೂ ಹಿರಿಯ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಅರ್ಹ ಫಲಾನುಭವಿಗಳಿಗೆ ಕಚೇರಿಯಿಂದ ನೋಟಿಸ್ ಕೂಡ ಬಂದಿಲ್ಲ, ಮೊಬೈಲ್‌ಗೆ ಎಸ್ಎಂಎಸ್ ಕೂಡ ಬಂದಿಲ್ಲ, ಆದರೆ ದಿಢೀರನೆ ಬ್ಯಾಂಕ್ ಖಾತೆಗೆ ಬರುತ್ತಿದ್ದ ಪಿಂಚಣಿ ಹಣ ಮಾತ್ರ ನಿಂತುಹೋಗಿದೆ. ಇಳಿ ವಯಸ್ಸಿನಲ್ಲಿ ಈ ರೀತಿ ದಾಖಲೆಗಳಿಗಾಗಿ ಅಲೆಯುವುದು ಅಸಾಧ್ಯವಾಗಿದ್ದು, ಸರ್ಕಾರ ತಕ್ಷಣವೇ ನಿಜವಾದ ಫಲಾನುಭವಿಗಳಿಗೆ ನಿಯಮಗಳನ್ನ ಸರಳೀಕರಿಸಿ ಪಿಂಚಣಿ ಬಿಡುಗಡೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+